ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಹೀಲಿಂಗ್‌ ವೀರರನ್ನು ಬೆಂಡೆತ್ತಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಕಿಕಿ ಚಾಲೆಂಜ್‌ನಂತೆ ಈ ವ್ಹೀಲಿಂಗ್‌ ಕೂಡ ಒಂದು ಹುಚ್ಚು ಆಟ, ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ 19 ಯುವಕರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಫ್ಲೈಓವರ್‌ ಮೇಲೆ ಅಪಾಯಕಾರಿ ವ್ಹೀಲಿಂಗ್‌ ಮಾಡುತ್ತಿದ್ದ ಏಳು ಯುವಕರನ್ನು ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಏಳು ಸ್ಕೂಟರ್‌ ಮತ್ತು ಬೈಕ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ಬೈಕ್ ವ್ಹೀಲಿಂಗ್ ವಿವಾದ: ಯುವಕನಿಗೆ ಚೂರಿ ಇರಿತ ಬೈಕ್ ವ್ಹೀಲಿಂಗ್ ವಿವಾದ: ಯುವಕನಿಗೆ ಚೂರಿ ಇರಿತ

ಆರೋಪಿಗಳು ಫ್ಲೈಓವರ್‌ ಮೇಲೆ ವ್ಹೀಲಿಂಗ್‌ ಮಾಡುವುದಷ್ಟೇ ಅಲ್ಲದೆ ಫೋಟೊ ಮತ್ತು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆ ವಿಡಿಯೋಗಳಿಗೆ ಹಾಡುಗಳನ್ನು ಹಾಕಿ ವಾಟ್ಸ್‌ ಆಪ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು.

19 youths arrested for bike wheeling in Bengaluru

ಆರೋಪಿಗಳು ಕೆಲವರು ವೆಲ್ಡಿಂಗ್‌ ಹಾಗೂ ಇನ್ನುಕೆಲವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನೂ ಕೂಡ ಬುಧವಾರ ಬಂಧಿಸಲಾಗಿದೆ. ಆರೋಪಿಗಳು ನ್ಯೂ ಹಾರಿಜನ್‌ ರಸ್ತೆ, ಟಿಸಿ ಪಾಳ್ಯ, ಭಟ್ಟರಹಳ್ಳಿ ಬಳಿಯ ಹೆದ್ದಾರಿಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು, ಇನ್ನು ರಾಜಾಜಿನಗರದ ಸಂಚಾರ ಠಾಣಾ ವ್ಯಾಪ್ತಿಯ ಲಗ್ಗೇರಿ ಸೇತುವೆ ಬಳಿ ವ್ಹೀಲಿಂಗ್‌ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಡೇಂಜರಸ್ ಕಿಕಿ ಚಾಲೆಂಜ್ ಗೇಮ್ ಗೆ ಮಗನನ್ನು ಪ್ರೋತ್ಸಾಹಿಸಿದ ಇನ್ಸ್ ಪೆಕ್ಟರ್! ಡೇಂಜರಸ್ ಕಿಕಿ ಚಾಲೆಂಜ್ ಗೇಮ್ ಗೆ ಮಗನನ್ನು ಪ್ರೋತ್ಸಾಹಿಸಿದ ಇನ್ಸ್ ಪೆಕ್ಟರ್!

ಮತ್ತೊಂದುಪ್ರಕರಣದಲ್ಲಿ ಕೆಆರ್‌ಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ ಬೈಕ್‌ ವಶಪಡಿಸಿಕೊಂಡಿದ್ದಾರೆ. ಮೂವರು ತಪ್ಪಿಸಿಕೊಂಡಿದ್ದಾರೆ.

English summary
Bengaluru traffic police have arrested 19 youths who were involved in dangerous bike wheeling at outskirts of the city. There were many complaints were heard from public in there areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X