18 ಇಂದಿರಾ ಮೊಬೈಲ್ ಕ್ಯಾಂಟೀನ್ ಗಳು ಮಾತ್ರ ಲೋಕಾರ್ಪಣೆ

ಬೆಂಗಳೂರು, ಜನವರಿ 25 : ಬಿಬಿಎಂಪಿಯ 18 ವಾರ್ಡ್ ಗಳಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಅಗ್ಗದ ದರದಲ್ಲಿ ಆಹಾರ ಒದಗಿಸುವ ಸಂಚಾರಿ ಇಂದಿರಾ ಕ್ಯಾಂಟೀನ್ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.26 ರಂದು ಚಾಲನೆ ನೀಡಲಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಗಣರಾಜ್ಯೋತ್ಸವ ದಿನದಂದು ಮಧ್ಯಾಹ್ನ 12 ಗಂಟೆಗೆ ಸಂಚಾರಿ ಇಂದಿರಾ ಕ್ಯಾಂಟೀನ್ ವಾಹನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅದೇ ದಿನ ಸಂಚಾರಿ ಇಂದಿರಾ ಕ್ಯಾಂಟೀನ್ ಗಳಲ್ಲಿ ರಾತ್ರಿ ಊಟ ವಿತರಣೆ ಮಾಡಲಾಗುತ್ತದೆ. ಉದ್ಘಾಟನೆಯಲ್ಲಿ ಭಾಗವಹಿಸುವ ಸಿಎಂ ಸೇರಿದಂತೆ ಎಲ್ಲ ಆಗಣ್ಯರು, ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಊಟ ಸವಿಯಲಿದ್ದಾರೆ.

ಎರಡು ಸಂಚಾರಿ ಕ್ಯಾಂಟೀನ್ ವಾಹನಗಳಲ್ಲಿ ಅಡುಗೆ ಮನೆಗಳಿಂದ ಊಟ ತಂದು, ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗದ 24 ವಾರ್ಡ್ ಗಳಲ್ಲಿ ಸಂಚಾರಿ ಕ್ಯಾಂಟೀನ್ ಸೇವೆ ಆರಂಭಿಸಲಾಗುತ್ತಿದೆ. ಈ ಮೊದಲು 24 ಸಂಚಾರಿ ಕ್ಯಾಂಟೀನ್ ಗಳನ್ನು ಉದ್ಘಾಟಿಸಲು ತೀರ್ಮಾನಿಸಲಾಗಿತ್ತು.

18 mobile Indira Canteens will launch on R-Day

ಆದರೆ, 6 ವಾಹನಗಳ ವಿನ್ಯಾಸ ಪೂರ್ಣಗೊಂಡಿಲ್ಲ. ಸ್ಟಿಕ್ಕರ್ ಅಂಟಿಸುವ ಕೆಲಸ ಬಾಕಿ ಇದೆ. ಹೀಗಾಗಿ 18 ಸಂಚಾರಿ ಕ್ಯಾಂಟೀನ್ ಗಳಷ್ಟೇ ಉದ್ಘಾಟನೆಗೆ ಸಿದ್ಧಗೊಂಡಿದೆ. ಫೋರ್ಸ್ ಕಂಪನಿಯಿಂದ 8.5ಲಕ್ಷ ರೂ ವೆಚ್ಚದಲ್ಲಿ ಖರೀದಿಸಿರುವ ಟೆಂಪೋ ಟ್ರಾವೆಲರ್ ಗಳನ್ನು ಸಂಚಾರಿ ಕ್ಯಾಂಟೀನ್ ಗಳಾಗಿ ವಿನ್ಯಾಸಗೊಳಿಸಲಾಗಿದೆ.

ವೀರೇಶ್ ಮೋಟರ್ಸ್ ಸಂಸ್ಥೆಯು 24 ಟಿಟಿ ವಾಹನಗಳ ವಿನ್ಯಾಸವನ್ನು ಮಾರ್ಪಡಿಸಿದೆ. ಇದಕ್ಕಾಗಿ5.15 ಲಕ್ಷ ರೂ ವ್ಯಯಿಸಲಾಗಿದೆ. ಪ್ರತಿ ನಿತ್ಯ ಬೆಳಗ್ಗೆ7.30 ಕ್ಕೆ ವಾಹನಗಳು ವಾರ್ಡ್ ತಲುಪಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+