ಬೆಂಗಳೂರಿನಲ್ಲಿ ನಡೆದಿದೆ ಪೈಶಾಚಿಕ ಕೃತ್ಯ

ಬೆಂಗಳೂರು, ನವೆಂಬರ್ 15 : ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರಕ್ಕಿಂತಲೂ ಭೀಕರ ಎನ್ನಬಹುದಾದ ಅತ್ಯಾಚಾರ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಪಾರ್ಟಿ ಮಾಡಲೆಂದು ಕರೆದು ಕೋಣೆಯೊಂದರಲ್ಲಿ ಕೂಡಿಹಾಕಿ ಸತತ 9 ದಿನಗಳ ಕಾಲ 17 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಕಾಮುಕರು.

ನಗರದ ಕಾಡುಗೋಡಿಯಲ್ಲಿ ಅಕ್ಟೋಬರ್ 26ರಂದು ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ.

17 year old girl gangraped for 9 days in Bangalore

ಮೊದಲಿಗೆ ಯುವತಿಯನ್ನು ಆಕೆಯ ಗೆಳೆಯ ರಾಘವೇಂದ್ರ (26) ಕಾಡುಗೋಡಿಯ ಕ್ಲಾಸಿಕ್ ಲಾಡ್ಜ್ ಗೆ ಕರೆತಂದು ರೇಪ್ ಮಾಡಿದ್ದಾನೆ. ನಂತರ ಆತನ ಗೆಳೆಯರಾದ ಸಾಗರ್ ಮತ್ತು ಮನೋರಾಜನ್ ಅವರುಗಳು ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾರೆ. ಲಾಡ್ಜ್ ಮಾಲೀಕ ಮಂಜುರಾಜ್ ಕೂಡ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ರಾಘವೇಂದ್ರ ಮತ್ತು ಲಾಡ್ಜ್ ಮಾಲೀಕ ಮಂಜುರಾಜ್ ಕೂಡ ಮುಂಚೆಯೇ ಸ್ನೇಹಿತರಂತೆ.

ಅತ್ಯಾಚಾರಕ್ಕೊಳಗಾಗಿರುವ ಯುವತಿ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ.

ಘಟನೆಗೆ ಸಂಬಂಧಿಸಿದಂತೆ ಉಡುಪಿಯ ರಾಘವೇಂದ್ರ, ಬಂಗಾಳದ ಮನೋರಾಜನ್, ದಾವಣಗೆರೆಯ ಸಾಗರ್, ಮೈಸೂರಿನ ಮಂಜುರಾಜ್ ಅವರುಗಳನ್ನು ಕಾಡುಗೋಡಿ ಪೊಲೀಸರು ನವೆಂಬರ್ 6ರಂದು ಬಂಧಿಸಿದ್ದಾರೆ.

ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಕಾಡುಗೋಡಿ ಪೊಲೀಸರ ಕರ್ತವ್ಯಕ್ಕೆ ಪ್ರಶಂಸೆ ದೊರೆತಿದೆ.

ಪ್ರಕರಣ ಹೊರ ಬಂದದ್ದು ಹೀಗೆ...
ನಗರದ ಕೆ.ಆರ್.ಪುರಂ ಠಾಣೆಯಲ್ಲಿ ಅಕ್ಟೋಬರ್ 30 ರಂದು ವ್ಯಕ್ತಿಯೊಬ್ಬರು ತಮ್ಮ 17 ವರ್ಷದ ಮಗಳು akfqObrf 26 ರಿಂದ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಕೆ.ಆರ್.ಪುರ ಠಾಣೆಯ ಎಸ್.ಐ ಜಯರಾಜ್ ನವೆಂಬರ್ 4 ರಂದು ಕಾಡುಗೋಡಿಯ ಕ್ಲಾಸಿಕ್ ಲಾಡ್ಜ್ ನಲ್ಲಿ ಯುವತಿಯನ್ನು ಪತ್ತೆ ಮಾಡಿದ್ದಾರೆ.

ಯುವತಿಯನ್ನು ವಿಚಾರಣೆಗೊಳಪಡಿಸಿದಾಗ ಯುವತಿಯು ಅತ್ಯಾಚಾರದ ವಿಷಯ ತಿಳಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+