• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ

|
   ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ

   ಬೆಂಗಳೂರು, ಜನವರಿ 27: ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ.

   ಪವನ ಪುತ್ರ ಹನುಮಂತ ಭಕ್ತರಿಗೆ ದರ್ಶನ ನೀಡುತ್ತಾ ಶಾಂತವಾಗಿ ನೆಲೆಸಿದ್ದನು. ಭಕ್ತರು ಕೂಡ 150 ವರ್ಷಗಳಿಂದ ಈ ಆಂಜನೇಯನನ್ನ ಆರಾಧಿಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ.

   ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ

   ಗಾರ್ವೆಬಾವಿ ಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಮೂರು ಆಂಜನೇಯನ ಸನ್ನಿಧಿಗಳಿವೆ. ಈ ಮೂರು ಆಂಜನೇಯನ ಗುಡಿಯನ್ನ ಕೆಡವಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಯೋಜನೆ ರೂಪಿಸಿದೆ.

   ಗಾರ್ವೆಭಾವಿಪಾಳ್ಯದ ದೇಗುಲದ ಅರ್ಚಕರು, ಭಕ್ತರ ಆಕ್ರಂದನ

   ಗಾರ್ವೆಬಾವಿ ಪಾಳ್ಯದಲ್ಲಿರೋ ಆಂಜನೇಯನ ಗುಡಿ ಅತ್ಯಂತ ಪುರಾತನವಾಗಿದ್ದು, ಸರಿಸುಮಾರು 150 ವರ್ಷದಷ್ಟು ಹಳೆಯದು ಎನ್ನಲಾಗುತ್ತಿದೆ. ಅಲ್ಲದೆ ಈ ಹಿಂದೆ ಮೆಟ್ರೋ ಪ್ಲಾನ್ ಪ್ರಕಾರ ಗುಡಿ ತೆರವು ಮಾಡುವುದಿಲ್ಲ ಎಂದು ಮೆಟ್ರೋ ಅಭಯ ನೀಡಿತ್ತು. ಆದರೆ ಇದೀಗ ಏಕಾಏಕಿ ದೇವಸ್ಥಾನ ತೆರವುಗೊಳಿಸಿದ್ದಾರೆ.

   Oneindia Kannada on Twitter

   ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ #Bengaluru | #Anjaneyatemple | #nammametro https://t.co/dcZlFcK77u

   ಒಟ್ಟಿನಲ್ಲಿ ಈ ಮಾರ್ಗದ ಟ್ರಾಫಿಕ್ ನಿಯಂತ್ರಿಸಲು ಮೆಟ್ರೋ ಅನಿವಾರ್ಯ. ಆದರೆ ಈಗ ಅನಾದಿಕಾಲದಿಂದಲೂ ಜನರು ಪೂಜಿಸಿಕೊಂಡು ಬಂದ ಗುಡಿ ತೆರವು ತೆರವು ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

   ಜಯದೇವ ಮೇಲ್ಸೇತುವೆ ಕಾರ್ಯ ಆರಂಭ

   ಜಯದೇವ ಮೇಲ್ಸೇತುವೆ ಕಾರ್ಯ ಆರಂಭ

   ಮೆಟ್ರೋ 2 ನೇ ಹಂತದ ಯೋಜನೆಯಲ್ಲಿ ಆರ್.ವಿ.ರಸ್ತೆ- ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗಗಳ ಇಂಟರ್​ಚೇಂಜ್ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ನಿರ್ವಣವಾಗಲಿದೆ. ಅದಕ್ಕಾಗಿ ಜಯದೇವ ಆಸ್ಪತ್ರೆ ಎದುರಿನ ಮೇಲ್ಸೇತುವೆಯನ್ನು ಕೆಡವಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಎರಡು ಹಂತದಲ್ಲಿ ಮೇಲ್ಸೇತುವೆ ತೆರವು ಕಾಮಗಾರಿ ನಡೆಸಲಾಗಿದ್ದು, ಮೊದಲಿಗೆ ಮೇಲ್ಸೇತುವೆಯ ಒಂದು ಭಾಗವಾದ 150 ಮೀಟರ್ ಉದ್ದದ ಮಾರ್ಗ ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು.

   ಮೂರು ತಿಂಗಳಲ್ಲಿ ತೆರವು ಕಾರ್ಯ ಮುಕ್ತಾಯ

   ಮೂರು ತಿಂಗಳಲ್ಲಿ ತೆರವು ಕಾರ್ಯ ಮುಕ್ತಾಯ

   ಉಳಿದ ಮೇಲ್ಸೇತುವೆ ಭಾಗವನ್ನು ತೆರವು ಮಾಡಲು ಸೋಮವಾರ ಸಂಜೆಯಿಂದ ಕಾಮಗಾರಿ ಆರಂಭಿಸಲಾಗಿದೆ. 3 ತಿಂಗಳವರೆಗೆ ಕಾಮಗಾರಿ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೂಲಕ ತೆರಳುವ ವಾಹನಗಳಿಗೆ ಬದಲಿ ಮಾರ್ಗವನ್ನು ನಿಗದಿ ಮಾಡಲಾಗಿದೆ.

   ಸುರಂಗ ಭೂಸ್ವಾಧೀನಕ್ಕೆ ಎದುರಾದ ತೊಡಕು

   ಸುರಂಗ ಭೂಸ್ವಾಧೀನಕ್ಕೆ ಎದುರಾದ ತೊಡಕು

   ನಮ್ಮ ಮೆಟ್ರೋ 2ನೇ ಹಂತದಲ್ಲಿನ ಏಕೈಕ ಸುರಂಗ ಮಾರ್ಗಕ್ಕೆ ಭೂಸ್ವಾಧೀನ ಸಮಸ್ಯೆ ಎದುರಾಗಿದ್ದು, ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುವಂತಾಗಿದೆ. ಗೊಟ್ಟಿಗೆರೆಯಿಂದ ನಾಗ ಸಂದ್ರವರೆಗೆ ಸುರಂಗ ಮಾರ್ಗ ನಿರ್ವಿುಸಲಾಗುತ್ತಿದೆ. ಅದಕ್ಕೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ವೆಲ್ಲಾರ ಜಂಕ್ಷನ್​ನಿಂದ ಮಾರ್ಚ್​ನಲ್ಲಿ ಸುರಂಗ ಕೊರೆಯುವ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಅದರ ಜತೆಗೆ ಉಳಿದೆಡೆ ಕಾಮಗಾರಿ ಆರಂಭಿಸಲು ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಅದರಂತೆ ನಾಲ್ಕು ಕಡೆ ಭೂಮಿ ಪಡೆಯುವಲ್ಲಿ ಬಿಎಂಆರ್​ಸಿಎಲ್ ಪರದಾಡುತ್ತಿದ್ದು, ಅದರಿಂದ ಯೋಜನೆ ಮೇಲೆ ಪರಿಣಾಮ ಬೀರುವಂತಾಗಿದೆ. ಲ್ಯಾಂಗ್​ಫೋರ್ಡ್ ರಸ್ತೆಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ 8 ಸಾವಿರ ಚದರ ಮೀ. ಭೂಮಿಯ ಅವಶ್ಯಕತೆಯಿದೆ. ಅದರಲ್ಲಿ 2,137 ಚ.ಮೀ. ಶಾಶ್ವತವಾಗಿ ಮತ್ತು 5,866 ಚ.ಮೀ. ತಾತ್ಕಾಲಿಕವಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ.

   ಸಂಚಾರ ಮಾರ್ಗ ಬದಲು

   ಸಂಚಾರ ಮಾರ್ಗ ಬದಲು

   ಹೊರವರ್ತಲ ರಸ್ತೆಯಲ್ಲಿನ 18ನೇ ಮುಖ್ಯರಸ್ತೆಯ ಮಾರೇನಹಳ್ಳಿಯಿಂದ 29ನೇ ಮುಖ್ಯರಸ್ತೆಯ ಬಿಟಿಎಂ 2ನೇ ಹಂತದ ರಸ್ತೆಯ ಎರಡೂ ಬದಿಯಲ್ಲಿ ಪ್ರತಿದಿನ ರಾತ್ರಿ 10.30ರಿಂದ ಬೆಳಗ್ಗೆ 5.30ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮಾರೇನಹಳ್ಳಿಯ 36ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ, ಈಸ್ಟ್ ಎಂಡ್ ರಸ್ತೆ, ಬಿಟಿಎಂ ಲೇಔಟ್ 2ನೇ ಹಂತದ 29, 16 ಮತ್ತು 7ನೇ ಮುಖ್ಯರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

   English summary
   The Anjaneya Temple at Garvepalya has been demolished for Namma metro work on the Bommasandra route from RV Road in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X