ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ 11 ಗಂಟೆವರೆಗೆ ನೆರೆದ ಪ್ರಯಾಣಿಕರ ಸಂಖ್ಯೆ ಎಷ್ಟು ಗೊತ್ತಾ.?
Nagasandra Metro Station: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ರೈಲು ಕೂಡ ಒಂದಾಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಕೊಳ್ಳಲು ನಗರದ ಬಹುತೇಕ ಮಂದಿ ಈ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಇದೀಗ ಮೆಟ್ರೋ ನಿಲ್ದಾಣವೊಂದರಲ್ಲಿ ಕೇವಲ 5 ಗಂಟೆಗಳ ಅವಧಿಯಲ್ಲೇ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಿದ ಘಟನೆ ನಡೆದಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದೆ.
ದೀಪಾವಳಿ ಮುಗಿಸಿಕೊಂಡು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ವಾಪಾಸ್ಸಾದ ಹಿನ್ನೆಲೆ ಹಿನ್ನೆಲೆ ನಗರದಲ್ಲು ಇಂದು (ನವೆಂಬರ್ 04) ಯಾವ ರಸ್ತೆ ನೋಡಿದರೂ ಟ್ರಾಫಿಕ್‌ನಿಂದ ತುಂಬಿ ತುಳುಕುತ್ತಿತ್ತು. ಇನ್ನು ತಮ್ಮ ಊರುಗಳಿಂದ ವಾಪಾಸಾದ ಬಹುತೇಕ ಮಂದಿ ಮೆಟ್ರೋ ರೈಲಿನ ಮೂಲಕ ತಮ್ಮ ಗಮ್ಯ ಸ್ಥಾನಕ್ಕೆ ತಲುಪಲು ಮುಂದಾದರು. ಇದರಿಂದಲೂ ಕೂಡ ಮೆಟ್ರೋ ನಿಲ್ದಾಣಗಳಲ್ಲೂ ಕೂಡ ಪ್ರಯಾಣಿಕರ ದಟ್ಟಣೆ ಸಂಭವಿಸಿತ್ತು.

ಅದರಲ್ಲೂ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಕಿ.ಮೀಟರ್‌ಗಟ್ಟಲೇ ಪ್ರಯಾಣಿಕರು ಕ್ಯೂ ನಿಂತ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗಲೂ ವೈರಲ್ ಆಗುತ್ತಿದೆ. ಸಾಮಾನ್ಯ ದಿನಗಳಲ್ಲಿ 11,000 ಜನ ಪ್ರಯಾಣ ಮಾಡುತ್ತಿದ್ದರು. ಆದರೆ, ಇದೀಗ ಹಬ್ಬ ಮುಗಿದ ಹಿನ್ನೆಲೆ ಇಂದು (ನವೆಂಬರ್ 04) ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಬೆಳಗ್ಗೆ ಬರೀ 6 ಗಂಟೆಯಿಂದ 11ರ ವರೆಗೆ 15,800 ಜನ ಪ್ರಯಾಣಿಕರು ಪ್ರವೇಶ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Today, between 6 am to 11 am, 15800 passengers entered Nagasandra metro station after festivities against normal 11000 passengers. Most of the passengers with baggages had to be frisked, for ensuring safety. We adopted manual frisking too and cleared the rush with least delay.
— ನಮ್ಮ ಮೆಟ್ರೋ (@OfficialBMRCL) November 4, 2024
ಇನ್ನು ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲರನ್ನು ಪರಿಶೀಲನೆ ಮಾಡಿ ಒಳಗಡೆ ಕಳುಹಿಸಲಾಗುತ್ತದೆ. ಆದರೆ, ಇಂದು ಹೆಚ್ಚಿನ ಪ್ರಯಾಣಿಕರು ಇದ್ದುದರಿಂದ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಲಗೇಜ್ ಹೊಂದಿರುವ ಎಲ್ಲಾ ಪ್ರಯಾಣಿಕರನ್ನು ಪರೀಕ್ಷಿಸಬೇಕಾಗಿತ್ತು. ಆದ್ದರಿಂದ ನಾವು ಹಸ್ತಚಾಲಿತ ಫ್ರಿಸ್ಕಿಂಗ್ ಅನ್ನು ಸಹ ಅಳವಡಿಸಿಕೊಂಡಿದ್ದೆವು. ಅಲ್ಲದೆ, ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಣ ಮಾಡುವುದು ಕೂಡ ದೊಡ್ಡ ಸವಾಲಾಗಿತ್ತು ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.
ಕಾಮಗಾರಿ ಮುಕ್ತಾಯ: ಸುರಂಗ ಕೊರೆಯುವ ಯಂತ್ರ 'ಭದ್ರಾ' ಕೊರೆಯುವ ಕಾರ್ಯ ಮುಗಿಸಿ ಇಂದು ಅಕ್ಟೋಬರ್ 30ರಂದು ಹೊರಗಡೆ ಬಂದಿದೆ. ಈ ಮೂಲಕ ಬಹುನಿರೀಕ್ಷಿತ ನಮ್ಮ ಮೆಟ್ರೋದ ಕಾಳೇನ ಅಗ್ರಹಾರದಿಂದ-ನಾಗವಾರ ನಡುವಿನ ಗುಲಾಬಿ ಮಾರ್ಗದ ಸುರಂಗ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ. ಹಾಗಾದರೆ ಮೆಟ್ರೋ ರೈಲುಗಳು ಯಾವಾಗಿನಿಂದ ಆರಂಭವಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಮ್ಮ ಮೆಟ್ರೋದ ಕಾಳೇನ ಅಗ್ರಹಾರದಿಂದ-ನಾಗವಾರದವರೆಗಿನ ಗುಲಾಬಿ ಮಾರ್ಗದ ಸುರಂಗ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ. ಕೊನೆಯದಾಗಿ ಸುರಂಗ ಕೊರೆಯುವ ಭದ್ರಾ ಟಿಬಿಎಂ 937 ಮೀಟರ್ ಸುರಂಗ ಕೊರೆದು ನಾಗವಾರ ನಿಲ್ದಾಣದಲ್ಲಿ ಇಂದು ಹೊರಬಂದಿದೆ. ಭದ್ರಾ ಟಿಬಿಎಂ ಅನ್ನು 2024ರ ಏಪ್ರಿಲ್ 2ರಂದು ಕೆಜಿ ಹಳ್ಳಿ ನಿಲ್ದಾಣದಿಂದ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು. ಈ ಮೂಲಕ ಗುಲಾಬಿ ಮಾರ್ಗದ 20,992 ಮೀಟರ್ ಸುರಂಗ ಕೆಲಸ ಪೂರ್ಣಗೊಂಡಿದೆ.
* ಮೊದಲ ಟಿಬಿಎಂ ಊರ್ಜಾ ಯಂತ್ರವು 2020ರ ಆಗಸ್ಟ್ 20ರಂದು ಕಂಟೋನ್ಮೆಂಟ್‌ನಿಂದ ಶಿವಾಜಿನಗರ ನಿಲ್ದಾಣ ನಡುವೆ ಸುರಂಗ ಕೊರೆಯುವ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಈ ಮಾರ್ಗದಲ್ಲಿ ತುಂಗಾ ಟಿಬಿಎಂ ಇದೇ ವರ್ಷ ಜುಲೈ ತಿಂಗಳಲ್ಲಿ 308 ಮೀಟರ್ ಸುರಂಗ ಕೊರೆದು ದಾಖಲೆ ನಿರ್ಮಿಸಿದೆ. ಸುರಂಗ ಕೊರೆಯಲು 9 ಟಿಬಿಎಂಗಳನ್ನು ನಿಯೋಜಿಸಲಾಗಿದ್ದು, 9 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿವೆ.
* ಏಪ್ರಿಲ್ 25, 2022ರಂದು ಟಿಬಿಎಂ ಉರ್ಜಾ ಯಂತ್ರವು ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್ ನಿಲ್ದಾಣದ ನಡುವೆ ಒಂದೇ ದಿನದಲ್ಲಿ 27 ಮೀಟರ್ ಸುರಂಗವನ್ನು ಕೊರೆದಿದೆ.
* ಜುಲೈ 2024ರಲ್ಲಿ ಟಿಬಿಎಂ ತುಂಗ ಯಂತ್ರವು ಕೆ.ಜಿ ಹಳ್ಳಿ ಮತ್ತು ನಾಗಾವಾರದ ನಡುವೆ ಒಂದು ತಿಂಗಳಲ್ಲಿ ಗರಿಷ್ಠ 308 ಮೀಟರ್ ಸುರಂಗವನ್ನು ಕೊರೆದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 13 ಕಿಲೋ ಮೀಟರ್ ಸುರಂಗ ಮಾರ್ಗವನ್ನು ಮೂರು ಹಂತದಲ್ಲಿ ಕೊರೆಯುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಮೊದಲ ಹಂತದಲ್ಲಿ ಶಾದಿಮಹಲ್‌ನಿಂದ-ವೆಂಕಟೇಶಪುರದವರೆಗೆ ಹಾಗೂ ಎರಡನೇ ಹಂತದಲ್ಲಿ ವೆಂಕಟೇಶಪುರದಿಂದ -ಕೆಜಿ ಹಳ್ಳಿವರೆಗೆ ಸುರಂಗ ಕಾಮಗಾರಿ ಸಂಪೂರ್ಣ ಆಗಿದೆ. ಇದೀಗ ಮೂರನೇ ಹಂತದಲ್ಲಿ ಕೆಜಿ ಹಳ್ಳಿಯಿಂದ ನಾಗವಾರವರೆಗಿನ ಸುರಂಗ ಕೊರೆಯುವ ಕಾಮಗಾರಿಯನ್ನು ತುಂಗಾ ಮತ್ತು ಭದ್ರಾ ಟಿಬಿಎಂ ಯಶಸ್ವಿಯಾಗಿ ಪೂರ್ಣಗೊಳಿಸಿವೆ.












Click it and Unblock the Notifications