ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘನೆ ದಂಡ ಸಂಗ್ರಹದಲ್ಲಿ ಶೇ.120ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 5: ಬೆಂಗಳೂರಿನಲ್ಲಿ ಮೋಟಾರು ವಾಹನ ಅಪಘಾತಗಳ ಸಂಖ್ಯೆ ನಿಧಾನಗತಿಯಲ್ಲಿ ಕಡಿಮೆಯಾಗಿದ್ದು, ರಸ್ತೆ ನಿಯಮ ಉಲ್ಲಂಘಿಸಿ ಅಪರಾಧ ಎಸಗುವ ವಾಹನ ಚಾಲಕರಿಂದ ಸಂಗ್ರಹಿಸಲಾದ ದಂಡಗಳು ಬರೋಬ್ಬರಿ ಶೇಕಡ 120ರಷ್ಟು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿಶೇಷ ಪೊಲೀಸ್ ಕಮಿಷನರ್ (ಸಂಚಾರ) ಎಂಎ ಸಲೀಂ ಮಾತನಾಡಿ, "ರಸ್ತೆ ಸುರಕ್ಷತೆಯ ಅಭಿಯಾನದ ಜೊತೆಗೆ ಕಾನೂನು ಜಾರಿ ಪ್ರಮುಖ ಆದ್ಯತೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೀತ ವಾತಾವರಣ ಮತ್ತು ಹಬ್ಬದ ಕಾರಣ ಮದ್ಯಪಾನದಿಂದ ಅಪಘಾತಗಳು ಹೆಚ್ಚಾಗುತ್ತವೆ ಎಂದು ನಾವು ಕುಡಿದು ವಾಹನ ಚಲಾಯಿಸುವುದರ ವಿರುದ್ಧ ವ್ಯಾಪಕ ಅಭಿಯಾನವನ್ನು ನಡೆಸಿದ್ದೇವೆ. ನಮ್ಮ ಅಭಿಯಾನವು ಫಲ ನೀಡಿದೆ ಎಂದು ತಿಳಿಸಿದ್ದಾರೆ.

2022 ರಲ್ಲಿ ಬೆಂಗಳೂರಲ್ಲಿ ಫುಟ್‌ಪಾತ್ ಪಾರ್ಕಿಂಗ್ ಪ್ರಕರಣ ಎಷ್ಟಿವೇ?2022 ರಲ್ಲಿ ಬೆಂಗಳೂರಲ್ಲಿ ಫುಟ್‌ಪಾತ್ ಪಾರ್ಕಿಂಗ್ ಪ್ರಕರಣ ಎಷ್ಟಿವೇ?

2018 ರಿಂದ ಅಪಘಾತಗಳು 17% ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್‌ ರೋಗದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತುಸು ಅಪರಾಧ ಪ್ರಕರಣಗಳು ಇಳಿಕೆ ಆಗಿವೆ. ಕಳೆದ 2022ರಲ್ಲಿ 172 ಕೊಲೆಗಳು ನಡೆದಿದ್ದು, ಡಕಾಯಿತಿ, ಕಳ್ಳತನ ಪ್ರಕರಣಗಳು ಸಹ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

120% increase in collection of fines for violation of road rules in bengaluru

ಬೆಂಗಳೂರಲ್ಲಿ 2022ರ ಒಂದೇ ವರ್ಷದಲ್ಲಿ ಒಟ್ಟು 172 ಕೊಲೆಯ ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ 154, 2020 ರಲ್ಲಿ 177 ಹಾಗೂ 2019 ರಲ್ಲಿ 204 ಹತ್ಯೆಗಳು ನಡೆದಿವೆ ಎಂದು ವರದಿ ತಿಳಿಸಿದೆ. 2019ರಲ್ಲಿ 39 ಕಂಡು ಬಂದಿದ್ದ ಡಕಾಯಿಟಿ ಪ್ರಕರಣಗಳು 2022 ರಲ್ಲಿ 23ಕ್ಕೆ ಇಳಿಯುವ ಮೂಲಕ ಶೇ.41ರಷ್ಟು ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಹೊರಮಾವಿನಲ್ಲಿ ಅತ್ಯಧಿಕ ರಸ್ತೆ ನಿಯಮ ಉಲ್ಲಂಘನೆಬೆಂಗಳೂರಿನ ಹೊರಮಾವಿನಲ್ಲಿ ಅತ್ಯಧಿಕ ರಸ್ತೆ ನಿಯಮ ಉಲ್ಲಂಘನೆ

ಕಳೆದ ವರ್ಷದಲ್ಲಿ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಬೆಂಗಳೂರು ಟ್ರಾಫಿಕ್‌ ಪೊಲೀಸರು ಮಾಹಿತಿ ನೀಡಿದ್ದು, 2022 ರಲ್ಲಿ (ನವೆಂಬರ್ 30 ರವರೆಗೆ) ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು 1,40,086 ಎಂದು ಹೇಳಿದೆ. ಫುಟ್‌ಪಾತ್‌ ಪಾರ್ಕಿಂಗ್‌ ಪ್ರಕರಣಗಳ ಸಂಖ್ಯೆಯು 2021 ರಿಂದ 87% ರಷ್ಟು ಏರಿಕೆ ಕಂಡಿದೆ. 2021 ಮತ್ತು 2020 ರಲ್ಲಿ, ಪ್ರಕರಣಗಳ ಸಂಖ್ಯೆ ಕ್ರಮವಾಗಿ 74,851 ಮತ್ತು 45,455 ಆಗಿತ್ತು.

ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ ಮಾಡುವ ಜನರ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಗಂಭೀರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ವಿಶೇಷ ಪೊಲೀಸ್ ಕಮಿಷನರ್ (ಸಂಚಾರ) ಎಂ ಎ ಸಲೀಂ ಅವರು ತಿಳಿಸಿದ್ದು, ಸಾರ್ವಜನಿಕರ ಈ ನಡವಳಿಕೆಯನ್ನು ಅವರು ಅಸಂಸ್ಕೃತ ಎಂದು ಜರೆದಿದ್ದಾರೆ.

English summary
It has been learned that the number of motor vehicle accidents in Bengaluru has come down at a slow pace, while the fines collected from motorists who commit offenses have increased by almost 120 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X