ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಲ್ಲಿ 11 ಪಾದಚಾರಿಗಳ ಸಾವು
ಬೆಂಗಳೂರು, ಜೂನ್ 09 : ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, ಎರಡು ತಿಂಗಳಿನಲ್ಲಿ 11 ಪಾದಚಾರಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Recommended Video
ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಸುಮಾರು 300 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಈ ವರ್ಷ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಎರಡು ತಿಂಗಳಿನಲ್ಲಿ 11 ಜನರು ಸಾವನ್ನಪ್ಪಿದ್ದಾರೆ.
ಏಪ್ರಿಲ್‌ನಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದಾಗ ಇಬ್ಬರು ಪಾದಚಾರಿಗಳು ನಗರದಲ್ಲಿ ಮೃತಪಟ್ಟಿದ್ದಾರೆ. ಮೇ ತಿಂಗಳಿನಲ್ಲಿ ಕೆಲವು ವಿನಾಯಿತಿ ನೀಡಿದ ಬಳಿಕ ವಾಹನ ಸಂಚಾರ ಹೆಚ್ಚಾಯಿತು 9 ಜನರು ಮೃತಪಟ್ಟರು.

ಲಾಕ್ ಡೌನ್ ಅವಧಿಯಲ್ಲಿ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಪಾದಚಾರಿಗಳು ವಯೋವೃದ್ಧರಾಗಿದ್ದಾರೆ. ಜೆ. ಪಿ. ಪಾರ್ಕ್ ಬಳಿ 70 ವರ್ಷದ ವ್ಯಕ್ತಿ, ಸಿಎಂಎಚ್ ರಸ್ತೆಯಲ್ಲಿ 65 ವರ್ಷದ ವೃದ್ಧ ಮೃತಪಟ್ಟವರಲ್ಲಿ ಸೇರಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ 1, ಕೆಜಿ ಹಳ್ಳಿ 2, ಉಪ್ಪಾರಪೇಟೆ 1, ಚಿಕ್ಕಪೇಟೆ 1, ಬ್ಯಾಟರಾಯನಪುರ 1, ಯಲಹಂಕ 1, ಚಿಕ್ಕಜಾಲ 1 ಸೇರಿದಂತೆ ಎರಡು ತಿಂಗಳಿನಲ್ಲಿ ಒಟ್ಟು 11 ಪಾದಚಾರಿಗಳು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ದಿನಕ್ಕೊಬ್ಬ ಪಾದಚಾರಿ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಒಂದು ವರ್ಷದಲ್ಲಿ ಸುಮಾರು 300 ಪಾದಚಾರಿಗಳು ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ.












Click it and Unblock the Notifications