Rave Party In Bengaluru: ನಶೆ ಪಾರ್ಟಿಯಲ್ಲಿ 101 ಮಂದಿ ಭಾಗಿ-ಇವರ ಹಿನ್ನೆಲೆ ಏನು ಗೊತ್ತಾ?
Rave Pary In Bengaluru: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ G.R.ಫಾರ್ಮ್‌ಹೌಸ್ ಮೇಲೆ ಸುಮಾರು ಬೆಳಗ್ಗೆ 3 ಗಂಟೆ ವೇಳಗೆ ಸಿಬಿಐ ದಾಳಿ ನಡೆಸಿದ್ದು, ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ. ಹಾಗಾದರೆ ಪಾರ್ಟಿಯಲ್ಲಿ ಎಷ್ಟು ಮಂದಿ ಇದ್ದರು ಹಾಗೂ ಇವರ ಹಿನ್ನೆಲೆ ಏನು ಎನ್ನುವ ಸ್ಫೋಟಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇನ್ನು ಪಾರ್ಮ್‌ಹೌಸ್‌ನಲ್ಲಿ ತಡರಾತ್ರಿವರೆಗೂ ನಡೆಯುತ್ತಿದ್ದ ಪಾರ್ಟಿಯಲ್ಲಿ 30 ಮಹಿಳೆಯವರು, 71 ಮಂದಿ ಪರುಷರು ಸೇರಿದಂತೆ ಒಟ್ಟು 101 ಮಂದಿ ಭಾಗಿಯಾಗಿದ್ದು, ಇದರಲ್ಲಿ ಆಂಧ್ರ ಮೂಲದವರೇ ಹೆಚ್ಚಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಈ ನಶೆ ಪಾರ್ಟಿಯಲ್ಲಿ ತೆಲುಗು ನಟಿಯರು ಭಾಗಿಯಾಗಿದ್ದರು ಎನ್ನುವ ಸ್ಫೋಟಕ ಮಾಹಿತಿಯೊಂದು ಹಿರಬಿದ್ದಿದೆ.

ಇನ್ನು ಸದ್ಯ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದು, ಉಳಿದವರಿಗೆ ಫಾರ್ಮ್ಹೌಸ್ನಲ್ಲೇ ಮೆಡಿಕಲ್ ಟೆಸ್ಟ್ ಮಾಡಲಾಗಿದ್ದು, ರಕ್ತದ ಸ್ಯಾಂಪಲ್ ಪಡೆದು ಲ್ಯಾಬ್ಗೆ ಕಳಹಿಸಲಾಗಿದೆ. ಕೆಲ ಮಾದಕವಸ್ತುವನ್ನು ಟಾಯ್ಲೆಟನಲ್ಲಿ ಬಿಸಾಕಿ ನೀರುಹಾಕಿ ನಾಶ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಫಾರ್ಮ್‌ಹೌಸ್ ಮೇಲೆ ಸಿಬಿಐ ದಾಳಿ: ಅವಧಿ ಮುಗಿದರೂ ಕೂಡ ಬೆಂಗಳೂರಿನ G.R.ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದು, ಈ ವೇಳೆ ಸಿಬಿಐ ದೀಢೀರ್ ದಾಳಿ ನಡೆಸಿ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿದ್ದರು.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ G.R.ಫಾರ್ಮ್‌ಹೌಸ್‌ನಲ್ಲಿ ಹೈದ್ರಾಬಾದ್ ಮೂಲದ ವಾಸು ಎಂಬಾತ ಬರ್ತಡೇ ಹೆಸರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದು, ಈ ಪಾರ್ಟಿ ತಡರಾತ್ರಿ 3 ಗಂಟೆಯಾದರೂ ಅಂತ್ಯವಾಗಿರಲಿಲ್ಲ. ನಿಯಮ ಉಲ್ಲಂಘಿಸಿ ಅವಧಿ ಮೀರಿ ಪಾರ್ಟಿ ಮಾಡಲಾಗಿತ್ತು. ಆದ್ದರಿಂದ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿತ್ತು.
ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಕಂಡುಬಂದಿದ್ದು, ಇನ್ನು ಆಯೋಜಕ ಪಾರ್ಟಿಗಾಗಿಯೇ ಆಂಧ್ರದಿಂದ ವಿಮಾನದಲ್ಲಿ ಜನರನ್ನು ಕರೆಸಿಕೊಂಡಿದ್ದ ಎಂದು ತಿಳಿದುಬಂದಿತ್ತು.












Click it and Unblock the Notifications