• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ವರ್ಷಾಚರಣೆಯಿಂದ ಬೆಂಗಳೂರಿನಲ್ಲಿ ಉತ್ಪತ್ತಿಯಾದ ಕಸ ಎಷ್ಟು?

|

ಬೆಂಗಳೂರು, ಜನವರಿ 2: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನಲ್ಲಿ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಮಾಡಿದ ನಂತರ ಬರೋಬ್ಬರಿ 10 ಟನ್ ಕಸ ಸಂಗ್ರಹವಾಗಿದೆ.

ಹೊಸ ವರ್ಷದ ಎಣ್ಣೆ ಕಿಕ್; ಮಂಗಳಮುಖಿಯರ ರಂಪಾಟ

ಹೊಸ ವರ್ಷಾಚರಣೆ ಪ್ರಯುಕ್ತ ಲಕ್ಷಾಂತರ ಜನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದರು. ಇದರಿಂದ ಸ್ಥಳದಲ್ಲಿ ಮದ್ಯದ ಬಾಟಲಿಗಳು, ಆಹಾರದ ಪೊಟ್ಟಣಗಳು, ಉಡುಗೊರೆ ಡಬ್ಬಿಗಳು, ಪ್ಲಾಸ್ಟಿಕ್ ಯಥೇಚ್ಚವಾಗಿ ಬಿದ್ದಿತ್ತು. ಜ 1 ರ ರಾತ್ರಿ 3 ಗಂಟೆಯಿಂದ ಕಸ ಆಯಲು ಶುರು ಮಾಡಿದ ಪೌರ ಕಾರ್ಮಿಕರು ಬೆಳಿಗ್ಗೆ 7 ಗಂಟೆಯೊಳಗೆ ಮುರೂ ರಸ್ತೆಗಳನ್ನು ಸ್ವಚ್ಚಗೊಳಿಸಿದ್ದರು. ಅಂತಿಮವಾಗಿ ಸ್ಥಳದಿಂದ 10 ಟನ್ ಕಸ ಆಯ್ದು ಬೇರೆಡೆ ಸಾಗಿಸಲಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಜ 1 ರಾತ್ರಿ ಯುವತಿಯರ ಮೇಲೆ ಕೆಲ ಕಾಮುಕರು ಕೀಟಲೆ ಮಾಡಿದ್ದರು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲದಲ್ಲಿ ಕಾಮುಕರು ಯುವತಿಯರನ್ನು ಚುಡಾಯಿಸುತ್ತಿರುವುದು ಹಾಗೂ ಯುವತಿಯರಿಂದ ಒದೆ ತಿಂದಿರುವುದು ಸಿಸಿಟಿವಿಗಳಲ್ಲಿ ಸೆರೆ ಸಿಕ್ಕಿತ್ತು. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿತ್ತು. ಸದ್ಯ 10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಮುಂದಿನ ವರ್ಷ ಹೊಸ ವರ್ಷಾಚರಣೆಯನ್ನು ಎಂಜಿ ರಸ್ತೆ ಸುತ್ತಮುತ್ತ ಕೈ ಬಿಡಬೇಕು ಎಂಬ ಕೂಗು ಸರ್ಕಾರದ ಕಡೆಯಿಂದ ಕೇಳಿ ಬರುತ್ತಿದೆ.

English summary
10 Ton Garbage Collect In New Year Celebration At Bengaluru. Says BBMP Officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X