ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ಒಂದು ಘೋಷಣೆ ಆಗದಿದ್ದರೆ 11 ಜನರ ಜೀವ ಉಳಿಯುತ್ತಿತ್ತು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿರುವ ಘಟನೆ ನಡೆದು ಇದೀಗ ಒಂದು ವಾರವಾಗಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ದುರಂತ ಸಂಭವಿಸುವುದಕ್ಕೆ ಆ ಒಂದು ತಪ್ಪು ನಿರ್ಧಾರವೇ ಕಾರಣ ಎನ್ನುವುದು ಇದೀಗ ಬಹಿರಂಗವಾಗಿದೆ. ಹೌದು ಅಂದು ಕ್ರೀಡಾಂಗಣದಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಅಥವಾ ಕ್ರೀಡಾಂಗಣದ ಸಿಬ್ಬಂದಿ ಮಾಡಿದ ಒಂದೇ ಒಂದು ಘೋಷಣೆಯು ಭಾರೀ ಅವಾಂತರವನ್ನೇ ಸೃಷ್ಟಿ ಮಾಡಿತ್ತು ಅಂತ ಹೇಳಲಾಗುತ್ತಿದೆ. ಇಷ್ಟಕ್ಕೂ ಆ ದಿನ ಆಗಿದ್ದೇನು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ 11 ಜನ ಆರ್‌ಸಿಬಿಯ ಅಭಿಮಾನಿಗಳು ಮೃತಪಟ್ಟಿದ್ದರು. ಅದಕ್ಕೆ ಕಾರಣವಾಗಿದ್ದು ಒಂದೇ ಒಂದು ತಪ್ಪು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್‌ ಹಾಗೂ ಚಿನ್ನಸ್ವಾಮಿ ಕ್ರಿಕೆಟ್‌ ಆಡಳಿತ ಮಂಡಳಿ ಮತ್ತು ಪೊಲೀಸರು ಎಲ್ಲರೂ ಜವಾಬ್ದಾರರು. ಇದರೊಂದಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಮೃತಪಡುವಂತಹ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು ಎಂದು ಕೊನೆಗೂ ಪತ್ತೆಯಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸುದೀರ್ಘ 17 ವರ್ಷಗಳ ನಂತರ ಮೊಟ್ಟ ಮೊದಲ ಬಾರಿ ಕಪ್‌ ಗೆದಿದ್ದೆ. ಆದರೆ, ಕಪ್ ಗೆದ್ದ ಸಂಭ್ರಮವು ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ಅಭಿಮಾನಿಗಳ ಸಾವು ಈ ಸಂತೋಷವನ್ನು ಕಸಿದುಕೊಂಡಿದ್ದು ಹಲವರ ಕುಟುಂಬದಲ್ಲಿ ಕಣ್ಣೀರು ತರಿಸಿದೆ. ನೂರಾರು ಜನ ಗಾಯಗೊಂಡಿದ್ದಾರೆ. ಈ ಬಗ್ಗೆ ಅಂದಿನ ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳಿದ ವಿಶೇಷ ಮಾಹಿತಿ ಇಲ್ಲಿದೆ.

1 announcement had not been made at Chinnaswamy Stadium in Bengaluru 11 lives would have been saved

ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತ ನಮ್ಮನೆಲ್ಲಾ ಅಲುಗಾಡಿಸಿದೆ. ಅಭಿಮಾನದ ಅತಿರೇಕಕ್ಕೆ 11 ಜೀವ ಬಲಿಯಾಗಿದ್ದು ಒಪ್ಪಿಕೊಳ್ಳಲಾಗದು. ಆದರೆ ಅಂದು ಅದೊಂದು ಘಟನೆ ನಡೆಯದೆ ಇದ್ದಿದ್ದರೆ 11 ಜನರ ಜೀವ ಉಳಿಯುತ್ತಿತ್ತು ಅಂತಲೇ ಹೇಳಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್‌ 4ರ ಬೆಳಗ್ಗೆ 7 ಗಂಟೆಯಿಂದಲೇ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಜನ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಮಧ್ಯಾಹ್ನದ ವರೆಗೂ ಎಲ್ಲವೂ ಚೆನ್ನಾಗಿತ್ತು. ಆದರೆ ಒಂದು ಘಟನೆ ಆ ಇಡೀ ವಾತಾವರಣದ ಚಿತ್ರಣ ಬದಲಿಸಿಬಿಟ್ಟಿತು.

ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಒಟ್ಟು 65 ಮಂದಿ ಗಾಯಾಳುಗಳಾಗಿದ್ದಾರೆ. ಬಹುತೇಕರಿಗೆ ಕಾಲಿಗೆ ಪೆಟ್ಟಾಗಿದೆ. ನಾಲ್ವರಿಗೆ ಟಿಬಿಯಾ ಸರ್ಜರಿ ಮಾಡಿಸಿದ್ದಾರೆ. ಒಬ್ಬರ ಕಣ್ಣಿನ ದೃಷ್ಟಿ ಸರಿಪಡಿಸುವ ಆಪರೇಷನ್ ಮಾಡಿಸಲಾಗಿದೆ. ಒಬ್ಬರ ತಲೆಗೆ ಏಟಾಗಿದೆ. ಈ ಗಾಯಾಳುಗಳ ಪೈಕಿ ಒಟ್ಟು ಎಂಟು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂದು ನಡೆದ ಘಟನೆಯು ಬಹುತೇಕ ಘಟನೆ ಚಿನ್ನಸ್ವಾಮಿ ಸ್ಟೇಡಿಯಂನ ಮೂರು ಕಡೆಗಳಲ್ಲಿ ಘಟಿಸಿದೆ. ಗೇಟ್ ನಂಬರ್ 3 & 7 & 20. ಈ ಮೂರು ಗೇಟ್ ಗಳಲ್ಲೇ ಮೊದಲು ಕಾಲ್ತುಳಿತ ನಡೆದಿದೆ. ಅದಕ್ಕೊಂದು ಕಾರಣವೂ ಇದೆ. ಜೂನ್ 4 ಸಂಜೆ 3:30ರ ಸಮಯಕ್ಕೆ ಅನೌನ್ಸ್ ಮೆಂಟು ಶುರುವಾಯಿತು. ನೆನಪಿಡಿ, 3:30ರ ವರೆಗೆ ಯಾವುದೇ ನೂಕುನುಗ್ಗಲು, ತಳ್ಳಾಟ, ತಿಕ್ಕಾಟ ಯಾವುದು ಇರಲಿಲ್ಲ.‌ ಅಭಿಮಾನಿಗಳು ಅವರ ಪಾಡಿಗೆ ಅವರು ಕುಣಿಯುತ್ತಾ ಜೋಶ್‌ನಲ್ಲಿದ್ದರು.‌ ಆದರೆ, ಅದ್ಯಾವಾಗ 3:30 ದಾಟಿ 3:35ರ ಆಸುಪಾಸಿನಲ್ಲಿ ಸ್ಟೇಡಿಯಂ ಎಂಟ್ರಿಗೆ ಯಾವುದೇ ಪಾಸ್‌ಗಳ ಅಗತ್ಯವಿಲ್ಲ. ಎಲ್ಲರಿಗೂ ಫ್ರೀ ಎಂಟ್ರಿ ಎಂದು ಘೋಷಿಶಸಲಾಯಿತೋ! ಸುತ್ತಲಿದ್ದ ಅಭಿಮಾನಿಗಳು ಹುಚ್ಚೆದ್ದು ಹೋದರು.

ನಾಲ್ಕು ದಿಕ್ಕುಗಳಿಂದ ಹುಡುಗರು, ಹುಡುಗಿಯರು ಓಡೋಡಿ ಈ ಮೂರು ಗೇಟ್‌ಗಳ ಕಡೆ ಬಂದರು. 21 ಗೇಟಿನ ಸ್ಟೇಡಿಯಂನಲ್ಲಿ ಈ ಮೂರು ಗೇಟ್‌ಗಳಲ್ಲಿ ಮಾತ್ರ ಒಳಗೆ ಬರಲು ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಪಾಸ್ ವಿಐಪಿ‌ ಸೇರಿದ ಎಂಟ್ರಿ ಇತ್ತು. ಫ್ರೀ ಎಂಟ್ರಿ ಎನ್ನುತ್ತಿದ್ದಂತೆ ಕುಣಿದು‌ ಕುಪ್ಪಳಿಸಿದ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಎಗರಿ, ತುಳಿದು ಒಳಗಡೆ ಸೇರಲು ಯತ್ನಿಸಿದರು. ಪರಿಣಾಮ ದೈಹಿಕವಾಗಿ ಬಲಹೀನರಾಗಿದ್ದವರು ಕುಸಿದು ಬಿದ್ದು ತುಳಿತಕೊಳ್ಳಗಾದರು. ನಂತರ ನಡೆದಿದ್ದು ನಿಮಗೆಲ್ಲಾ ಗೊತ್ತೇ ಇದೆ.

ಬಹುಶಃ ಆ ಒಂದು ಅನೌನ್ಸ್ ಮೆಂಟ್ ಆರ್‌ಸಿಬಿ ಮ್ಯಾನೇಜ್ಮೆಂಟ್ ಅಥವಾ ಒಳಗಿನಿಂದ ಆ ಸಿಬ್ಬಂದಿ ಮಾಡದೆ ಇದ್ದರೆ ಇಂಥದ್ದೊಂದು ದುರಂತ ನಡೆಯುತ್ತಿರಲಿಲ್ಲವೇನೋ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+