Get Updates
Get notified of breaking news, exclusive insights, and must-see stories!

ಡಾಕ್ಟರೇಟ್ ಗೌರವಕ್ಕೆ ಪಾತ್ರವಾದ ಡಾ.ಎಸ್. ಸಿ. ಶರ್ಮ

ಶ್ರೀ ಕೃಷ್ಣದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಡಾ.ಎಸ್.ಸಿ.ಶರ್ಮ, ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮತ್ತು ಛತ್ತಿಸ್‌ಗಡದ ಭಿಲಾಯ್‌ಯ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯದ ಹಾಲಿ ಕುಲಪತಿಗಳಾಗಿದೆ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಣ ತಜ್ಞರಾಗಿರುವ ಡಾ ಎಸ್.ಸಿ.ಶರ್ಮ ಅವರು ಶಿಕ್ಷಣ, ಸಂಶೋಧನೆ, ಸದೃಢ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಉತ್ಕೃಷ್ಟ ಕೊಡುಗೆಯನ್ನು ನೀಡಿದ್ದಾರೆ. ಶರ್ಮ ಅವರು, 29 ಸಂಶೋಧನ ಕೇಂದ್ರಗಳಿಗೆ ಮುನ್ನುಡಿ ಬರೆದಿರುತ್ತಾರೆ. ಕರ್ನಾಟಕ ಉನ್ನತ ಶಿಕ್ಷಣ ಆಯೋಗದ ಉಪಾಧ್ಯಕ್ಷರಾಗಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಜಾಗತೀಕರಣವನ್ನು ಎದುರಿಸಲು ಬೇಕಾಗಿರುವ ಸುಧಾರಣೆಗಳನ್ನು ತಂದಿರುತ್ತಾರೆ.

S.P.Sharma

ಇದುವರೆಗೂ 31 ವಿದ್ವಾಂಸರಿಗೆ ಸಂಶೋಧನೆ ಮಾಡಲು ಶರ್ಮಾ ಅವರು ಮಾರ್ಗದರ್ಶನ ನೀಡಿರುತ್ತಾರೆ. ಇವರು 150ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುತ್ತಾರೆ ಮತ್ತು ಅನೇಕ ಅಂತರರಾಷ್ಟ್ರೀಯ ವಿಚಾರಣ ಸಂಕಿರಣಗಳಲ್ಲಿ ಭಾಷಣವನ್ನು ಮಾಡಿರುತ್ತಾರೆ. ಶರ್ಮ ಅವರ 400ಕ್ಕೂ ಹೆಚ್ಚು ಪ್ರಬಂಧಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಡಾ ಎಸ್. ಸಿ. ಶರ್ಮ ಅವರ ಎಲ್ಲಾ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅಮೆರಿಕಾವು ಅಂತರರಾಷ್ಟ್ರೀಯ ತೆರ್ಮ್ಯಾಕ್ 2013 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಎಲ್ಲಾ ಸೇವೆಗಳನ್ನು ಪರಿಗಣಿಸಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+