ಕಲಾ ಪ್ರವೀಣೆ ಬಳ್ಳಾರಿಯ ಅನಿತಾಗೆ ಐಎಎಸ್ ಮಾಡುವ ಕನಸು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಮೇ 25 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಳ್ಳಾರಿಯ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಐಎಎಸ್ ಅಧಿಕಾರಿ ಆಗಬೇಕು ಎಂಬುದು ಅನಿತಾ ಅವರ ಕನಸಾಗಿದೆ. [ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ]

ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ 600 ಕ್ಕೆ 585 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಿತಾ ಅವರ ಮನೆಯ ಬಡತನ ಅವರ ಓದಿಗೆ ಅಡ್ಡಿಯಾಗಿಲ್ಲ. [ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ]

anitha basappa

ಅನಿತಾ ಅವರ ತಂದೆ ಬಸಪ್ಪ ಅವರು ಕೊಟ್ಟೂರು ಬಸ್ ನಿಲ್ದಾಣದಲ್ಲಿ ಬಾಳೆ ಹಣ್ಣು ಮಾರಾಟ ಮಾಡುತ್ತಾರೆ. ಮನೆಯ ಕಷ್ಟದ ನಡುವೆಯೂ ಅನಿತಾ ಅವರ ಓದಿಗೆ ಮನೆಯವರು ಸಂಪೂರ್ಣ ಬೆಂಬಲ ನೀಡಿದ್ದಾರೆ. [ಬಳ್ಳಾರಿಯ ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ]

basappa

ಫಲಿತಾಂಶದ ಬಳಿಕ ಒನ್ ಇಂಡಿಯಾ ಜೊತೆ ಮಾತನಾಡಿದ ಅನಿತಾ ಅವರು ಸಂತಸ ಹಂಚಿಕೊಂಡರು. 'ಐಎಎಸ್ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಕನಸು ಹೊಂದಿರುವುದಾಗಿ' ತಿಳಿಸಿದರು. [2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]

'ಎರಡು ಅಥವ ಮೂರನೇ ಸ್ಥಾನಗಳಿಸುವ ನಿರೀಕ್ಷೆ ಇತ್ತು. ಆದರೆ, ಮೊದಲ ಸ್ಥಾನ ಪಡೆದಿರುವುದು ಸಂತಸ ಮೂಡಿಸಿದೆ. ನನ್ನ ಸಾಧನೆಗೆ ತಂದೆ-ತಾಯಿ ಸೇರಿದಂತೆ ಕುಟುಂಬದವರೆಲ್ಲರ ಸಹಕಾರವೂ ಇದೆ' ಎನ್ನುತ್ತಾಳೆ ಅನಿತಾ. [ಇಂಗ್ಲಿಶ್ ನಲ್ಲಿ ಓದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anitha Basappa has bagged the top state rank in 2nd PUC arts. Anitha studied Indu PU collage at Kudligi taluk, Ballari district.
Please Wait while comments are loading...