ಕಾಂಗ್ರೆಸ್‌ಗೆ ರಾಜೀನಾಮೆ ನೀಡದಂತೆ ರಮೇಶ್ ಬಳಿ ಮಾತನಾಡ್ತೀನಿ: ಸತೀಶ್
ಬೆಳಗಾವಿ, ಜನವರಿ 2: ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಅದರಲ್ಲೇ ಮುಂದುವರೆಯುತ್ತಾರೆ , ಅವರ ಬಳಿ ನಾನು ಮಾತನಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ , ಆದರೆ ಅವರು ರಾಜೀನಾಮೆ ಕೊಡುವ ಪ್ರಶ್ನೆಯ ಇಲ್ಲ, ಪಕ್ಷದಲ್ಲೇ ರಮೇಶ್ ಮುಂದುವರೆಯುತ್ತಾರೆ ಎಂದರು.
ಎಲ್ಲದಕ್ಕೂ ಸಿದ್ದರಾಮಯ್ಯನವರೇ ಮಾಸ್ಟರ್ ಮೈಂಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲ ಹಾಗೇನೂ ಇಲ್ಲ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದು ಹೇಳಿದರು.

ಅಡುಗೆ ಮನೆಗೆ ಹೋಗಿ ಕೇವಲ ಬಾಯಿ ಒರೆಸಿಕೊಂಡು ಬರುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಹೊರಗಿನವರಿಗೆ ನಾವು ಹೋಗಿ ಊಟ ಮಾಡಿಕೊಂಡು ಬರುತ್ತೇವೆ ಎಂಬಂತೆ ಬಿಂಬಿತವಾಗುತ್ತದೆ ಎಂದು ಸೋದರ ಲಖನ್ ಜಾರಕಿಹೊಳಿ ಯಾವಾಗಲೂ ಹೇಳುತ್ತಿರುತ್ತಾರೆ ಎಂದು ನೆನಪಿಸಿಕೊಂಡರು.












Click it and Unblock the Notifications