ಅತ್ಯಾಚಾರ ಅನಿವಾರ್ಯವಾದಾಗ ಆನಂದಿಸಿ ಎಂಬ ಮಾತಿದೆ ಎಂದ ರಮೇಶ್ ಕುಮಾರ್!
ಬೆಳಗಾವಿ, ಡಿಸೆಂಬರ್, 16: ಕರ್ನಾಟಕ ರಾಜ್ಯ ವಿಧಾನಸಭೆಯಿಂದ ಆಘಾತಕಾರಿ ಮತ್ತು ಅಸಂಸದೀಯ ಘಟನೆಯೊಂದು ನಡೆದಿದೆ. ಹಿರಿಯ ಕರ್ನಾಟಕ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಗುರುವಾರ ಅಧಿವೇಶನದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
"ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂಬ ಮಾತಿದೆ. ಅದು ನಿಖರವಾಗಿ ನೀವು ಇರುವ ಸ್ಥಾನ," ಎಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ಕೆಆರ್ ರಮೇಶ್ ಕುಮಾರ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಶಾಸಕರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಸಮಯ ಕೋರಿದ ಸಂದರ್ಭದಲ್ಲೇ ಈ ಹೇಳಿಕೆ ನೀಡಲಾಗಿದೆ. ಎಲ್ಲರಿಗೂ ಸಮಯ ನೀಡಿದರೆ ಅಧಿವೇಶನ ಹೇಗೆ ನಡೆಸುವುದು ಎಂದು ಸ್ಪೀಕರ್ ಕೇಳಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

"ನೀವು ಏನು ನಿರ್ಧರಿಸಿದರೂ ನಾನು ಹೌದು ಎಂದು ಹೇಳುತ್ತೇನೆ. ನಾನು ಆಲೋಚಿಸುತ್ತಿರುವುದು ನಾವು ಪರಿಸ್ಥಿತಿಯನ್ನು ಆನಂದಿಸೋಣ. ನಾನು ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ," ಎಂದು ಸ್ಪೀಕರ್ ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸಭಾಧ್ಯಕ್ಷರು ಸೇರಿದಂತೆ ಇತರೆ ಸದಸ್ಯರು ನಗಾಡಿದ್ದಾರೆ.
Senior @INCKarnataka leader Ramesh Kumar at it again. "There is a saying. When rape is inevitable, lie back & enjoy it," Ramesh Kumar says as Speaker @kageri250 expresses helplessness in containing chaos in House. Ramesh Kumar, @kageri250 both laugh at the supposed "joke". pic.twitter.com/jHB2hXAP4T
— Anusha Ravi Sood (@anusharavi10) December 16, 2021
ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತ
ಈ ಬಗ್ಗೆ ಟ್ವೀಟ್ ಮಾಡಿರುವ ಪತ್ರಕರ್ತೆ ಅನುಶಾ ರವಿ ಸೂದ್, "ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಒಂದು ಮಾತಿದೆ. ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಹಾಗೂ ಆನಂದಿಸಿ' ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಸ್ಪೀಕರ್ ಕಾಗೇರಿ ಅವರು ಸದನದಲ್ಲಿ ಅವ್ಯವಸ್ಥೆಯ ಬಗ್ಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಜೋಕ್ ಎಂದು ಹೇಳಲಾಗುವ ಈ ಮಾತಿಗೆ ರಮೇಶ್ ಕುಮಾರ್ ಹಾಗೂ ಕಾಂಗೇರಿ ಇಬ್ಬರೂ ನಕ್ಕಿದ್ದಾರೆ," ಎಂದು ಟೀಕೆ ಮಾಡಿದ್ದಾರೆ.
ಇನ್ನು ಈ ಟ್ವೀಟ್‌ಗೆ ಹಲವಾರು ಮಂದಿ ರಿಪ್ಲೈ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಎಎಪಿ ತ್ರಿಪುರಾ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, "ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮನಸ್ಥಿತಿಯೇ ಹಾಗಿದೆ. ಅವರು ಮಹಿಳಾ ವಿರೋಧಿಗಳು, ಜನ ವಿರೋಧಿಗಳು," ಎಂದಿದೆ. "ಈ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ನೋಡಲಿ. ಈತನನ್ನು ಪಕ್ಷದಿಂದ ಹೊರಕ್ಕೆ ಹಾಕಲಿ," ಎಂದು ಕೆಲವರು ಆಗ್ರಹ ಮಾಡಿದ್ದಾರೆ. "ಇದು ಅತ್ಯಂತ ಕೆಟ್ಟದಾದ ವರ್ತನೆ, ನಮ್ಮ ನಾಯಕರು ಉತ್ತಮ ಆಡಳಿತ, ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ದಾರಿ ಮಾಡಿಕೊಡಬೇಕು. ಈ ರೀತಿಯ ನಾಯಕರಿಗೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ಗೌರವಾನ್ವಿತ ಸ್ಪೀಕರ್ ಕೂಡ ವಿರೋಧವಾಗಿ ಒಂದು ಪದವನ್ನು ಉಚ್ಚರಿಸುವುದಿಲ್ಲ, ಎಂತಹ ದುಸ್ಥಿತಿ ಇದು," ಎಂದು ಮಲ್ಲಿಕಾರ್ಜುನ ಗೌಡ ಎಂಬವರು ಟ್ವೀಟ್ ಮಾಡಿದ್ದಾರೆ.
"ರಮೇಶನ ವಿರುದ್ಧ ದಂಗೆ ಏಳಲು ವಿಧಾನಸಭೆಯಲ್ಲಿ ಆಡಳಿತ ಅಥವಾ ವಿರೋಧದಲ್ಲಿ ಮಹಿಳಾ ಶಾಸಕರು ಇರಲಿಲ್ಲವೇ?, ಈ ರೀತಿಯ ಹೇಳಿಕೆಗೆ ಮಾಜಿ ಸ್ಪೀಕರ್ ಈ ಸಂಸ್ಕೃತಿಯೇ, ದುರದೃಷ್ಟಕರ, ಇದರ ವಿರುದ್ಧ ಕ್ರಮಕೈಗೊಳ್ಳುವುದು ಉತ್ತಮ, ಕರ್ನಾಟಕಕ್ಕೆಯೇ ನಾಚಿಗೆಯಾಗಬೇಕಾದ ಪರಿಸ್ಥಿತಿ ಇದಾಗಿದೆ," ಎಂದು ಇನ್ನೋರ್ವ ವ್ಯಕ್ತಿ ಹೇಳಿದ್ದಾರೆ. ಇನ್ನೂ ಕೆಲವರು ಈ ಸಂದರ್ಭದಲ್ಲಿ ಮಹಿಳಾ ಆಯೋಗ ಎಲ್ಲಿದೆ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ. "ನಿಮ್ಮ ಮಗಳು ಆ ಸ್ಥಾನದಲ್ಲಿ ಇದ್ದರೆ ನೀವು ಈ ರೀತಿಯ ಮಾತು ಹೇಳಲು ಸಾಧ್ಯವೇ?, ಕರ್ನಾಟಕವು ಮತ್ತೊಂದು ಯುಪಿ ಆಗುತ್ತಿದೆ. ಏಕೆಂದರೆ ಅದು ಅಪರಾಧಿಗಳ ಕೈಯಲ್ಲಿ ಇದೆ," ಎಂದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications