ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಲಿದೆ: ಜಗದೀಶ್ ಶೆಟ್ಟರ್ ಸ್ಫೋಟಕ ಭವಿಷ್ಯ
ಬೆಳಗಾವಿ, ಜೂನ್, 04: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮಾತನಾಡಿ ಏನು ಹೇಳಿದ್ದಾರೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಎಲ್ಲರೂ ಒಗ್ಗಟ್ಟಿನ ಕೆಲಸದಿಂದ ದೊಡ್ಡ ಅಂತರದಲ್ಲು ಗೆಲುವಾಗಿದೆ. ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇವೆ.ನಾನು ಹೊರಗಿನವ ಅನೋದನ್ನು ಮತದಾರರೇ ಉತ್ತರ ನೀಡಿದ್ದಾರೆ. ಬೆಳಗಾವಿ ನಂಟಿದೆ ಅನೋದನ್ನು ನಾನು ಪದೇ ಪದೇ ಹೇಳುತ್ತಲೇ ಬಂದಿದ್ದೇನೆ. ಅಲ್ಲದೆ, ಇಲ್ಲಿನ ಜನತೆಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಹುಬ್ಬಳ್ಳಿ ಜನತೆಗಿಂತ ಇಲ್ಲಿನವರಿಗೆ ದೊಡ್ಡ ಪ್ರೀತಿ ತೋರಿಸಿದ್ದೇನೆ ಎಂದು ಹೇಳಿದರಲ್ಲದೆ, ಮಂಗಲ ಅಂಗಡಿ ತಂದಿರುವ ಯೋಜನೆಗಳನ್ನು ಜಾರಿಗೆ ತರುತ್ತೇನೆ. ಪ್ರಮುಖ ಸಭೆ ಮಾಡಿ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹಾಗೂ ಬೆಳಗಾವಿ ಸೆಂಟರ್ ಸ್ಟೇಜ್‌ಗೆ ತರುವ ಕೆಲಸ ಮಾಡುತ್ತೇನೆ. ನನಗೆ ಆ ಅವಕಾಶವನ್ನು ಜನರು ನೀಡಿದ್ದು, ಅವರಿಗೆ ಚಿರಋಣಿಯಾಗಿರುವೆ ಎಂದು ಹೇಳಿದರು.
ನನ್ನ ಅಡ್ರೆಸ್ ಏನು ಅನೋದನ್ನು ಜನತೆ ಉತ್ತರ ಕೊಟ್ಟಿದ್ದು, ಬೆಳಗಾವಿಯಲ್ಲಿ ಹೊಸ ಮನೆ ಖರೀದಿ ಮಾಡುವ ಚಿಂತನೆಯನ್ನು ಕೂಡ ಮಾಡಿದ್ದೇನೆ ಎಂದರು.
ಚುನಾವಣೆ ನಂತರ ಫಲಿತಾಂಶದ ಪರಾಮರ್ಶೆ ಆಗಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತವಾಗಿದೆ. ನನ್ನ ಆರಿಸಿ ಕಳುಹಿಸಿದ ಜನತೆಗೆ ಋಣಿಯಾಗಿರುವೆ. ನಾನು ಮಂತ್ರಿ ಆಗೋದು ನನ್ನ ಕೈಯಲ್ಲಿ ಇಲ್ಲ, ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದರು.
ಗ್ಯಾರೆಂಟಿ ವಿಫಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಇಷ್ಟು ಸೀಟುಗಳು ಬಂದಿದ್ದೇ ದೊಡ್ಡ ಮಾತು. ಅವರಲ್ಲಿ ನಾಳೆಯಿಂದಲೇ ಕಿತ್ತಾಟ ಆರಂಭವಾಗಲಿದ್ದು, ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಕಲಹ ಇದ್ದು, ಅದು ಯಾವಾಗ ಬೇಕಾದರೂ ಸ್ಫೋಟ ಆಗಬಹುದು ಎಂದು ಭವಿಷ್ಯ ನುಡಿದರು.












Click it and Unblock the Notifications