ಮತ್ತೇನಾಯಿತು ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ ನಡುವೆ

Recommended Video

      ನಾನು ಪೆದ್ದಿ, ನಾವು ಪೆದ್ದರೇ...: Lok Sabha Elections 2019 | Oneindia Kannada

      ಬೆಳಗಾವಿ, ಏ 20: ರಾಜ್ಯದ ಎರಡನೇ ಹಂತದ ಚುನಾವಣೆಯ ಪ್ರಚಾರದ ಭರಾಟೆ ತಾರಕಕ್ಕೇರಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ನಡುವೆ ವಾಕ್ಸಮರ ಮುಂದುವರಿದಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಏನೂ ಗೊತ್ತಾಗುವುದಿಲ್ಲ, ಆಕೆ ಬರೀ ಪೆದ್ದಿ ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯ, ಚುನಾವಣಾ ಪ್ರಚಾರದ ವೇಳೆ ನೀಡಿದ್ದರು.

      ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕೋಡಿಯಲ್ಲಿ ಪ್ರತಿಕ್ರಿಯಿ ನೀಡಿರುವ ಶೋಭಾ, ಹೌದು, ನಾನು ಪೆದ್ದಿ. ನನಗೆ ಅವರ ರೀತಿಯಲ್ಲಿ ಜಾತಿಜಾತಿ ನಡುವೆ ತಂದಿಡುವ ಬುದ್ದಿಯಿಲ್ಲ ಎಂದು ಟೀಕಿಸಿದ್ದಾರೆ.

      War of words between Siddaramaiah and Shobha Karandlaje

      ದಾಸರು ನಿಮ್ಮಂತವರು ಮುಂದೆ ನಮ್ಮ ರಾಜಕಾರಣದಲ್ಲಿ ಬರಬಹುದು ಅಂದುಕೊಂಡು, 'ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ' ಎಂದು ದಾಸವಾಣಿ ಬರೆದಿರಬಹುದು ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

      ಪ್ರಧಾನಿಯನ್ನು ಏಕವಚನದಲ್ಲಿ ಮಾತನಾಡುವ ನಿಮಗೆ ಗೌರವ ಅನ್ನೋದು ಕಿಂಚಿತ್ತಾದರೂ ಇದೆಯಾ ಎಂದು ಪ್ರಶ್ನಿಸಿರುವ ಶೋಭಾ, ಮೇ 23ರ ನಂತರ ಮೈತ್ರಿಯ ಭವಿಷ್ಯ ಗೊತ್ತಾಗಲಿದೆ. ಅಲ್ಲಿ ತನಕ ತಾಳ್ಮೆಯಿಂದ ಕಾಯಿರಿ ಎಂದು ಕಾಲೆಳೆದಿದ್ದಾರೆ.

      ನನ್ನ ವಿರುದ್ದ ಸ್ಪರ್ಧಿಸಲು ಅಭ್ಯರ್ಥಿಯಿಲ್ಲದೇ ಎರವಲು ಪಡೆದುಕೊಂಡ ನಿಮ್ಮ ಮೈತ್ರಿ ಎಷ್ಟುದಿನ ಉಳಿಯುತ್ತೋ ನೋಡೋಣ ಎಂದು ಶೋಭಾ, ಸಿದ್ದರಾಮಯ್ಯಗೆ ಸವಾಲೆಸೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+