ಫ್ರೆಂಚ್ ಸೇವಕನಾಗಿ ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ: ಸ್ವಾಮಿ
ಬೆಳಗಾವಿ, ನವೆಂಬರ್ 06: ಟಿಪ್ಪು ಸುಲ್ತಾನ ತನ್ನ ಸಾಮ್ರಾಜ್ಯ ಉಳಿವಿಗಾಗಿ ಫ್ರೆಂಚರಿಂದ ಹಣ ಪಡೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ. ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುಂದು ಸುಳ್ಳು ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಹ್ಮಣ್ಯಂ ಸ್ವಾಮಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜಿರಗೆ ಸಭಾ ಭವನದಲ್ಲಿ ಪ್ರಬುದ್ಧ ಭಾರತ ಸಂಘಟನೆ ಏರ್ಪಡಿಸಿದ್ದ ಬೌದ್ಧಿಕ ಭಯೋತ್ಪಾದನೆ ವಿಷಯ ಕುರಿತು ಮಾತನಾಡಿದ ಅವರು, ಇತಿಹಾಸದಲ್ಲಿ ಹಿಂದು ಧರ್ಮಕ್ಕಾಗಿ ಹೋರಾಡಿದ ಛತ್ರಪತಿ ಶುವಾಜಿ, ರಾಣಾ ಪ್ರತಾಪ್‌ಸಿಂಹ, ವಿಜಯನಗರ ಅರಸರ ಬಗ್ಗೆ ಪ್ರಸ್ತಾಪವಿಲ್ಲದೆ ದೇಶವನ್ನಾಳಿದ ಪರಕೀಯರ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನ್ಯಾಶನಲ್ ಹೆರಾಲ್ಡ್ ಹಗರಣದಲ್ಲಿ ಅಮ್ಮ ಮಗನಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ತಿಹಾರ ಜೈಲು ಸೇರುವುದು ಖಚಿತವಾಗಿದೆ ಎಂದ ಅವರು, 2 ಜಿ ಸೇಕ್ಟ್ರಂ ಹಗರಣದಲ್ಲಿ ಪಿ.ಚಿದಂಬರಂ ಹಾಗೂ ಅವರ ಪುತ್ರ ತಿಹಾರ ಜೈಲಿನಲ್ಲಿ ಇಟಾಲಿಯನ್ ಕಾಂಗ್ರೆಸ್ ಪಕ್ಷದ ಅಮ್ಮ ಮಗನ ಜೊತೆಗೆ ಕಂಬಿ ಎಣಿಕೆ ಮಾಡಲ್ಲಿದ್ದಾರೆ ಎಂದರು.

ಬಿಜೆಪಿ ಹಾಗೂ ಆರ್ ಎಸ್ ಎಸ್ ದೇಶದ ಜನರಲ್ಲಿ ನಾವೆಲ್ಲರೂ ಒಂದು ಎಂದು ಸಮಾನತೆ ಸಾರುತ್ತಿದೆ. ತ್ರಿವಳಿ ತಲಾಕ್ ವಿರುದ್ಧ ಮಾತನಾಡದ ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿದ್ದ ಅನ್ಯಾಯವನ್ನು ತಡೆಯಲು ಯಾವ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು
Mind blowing response, crowd overflowing for Dr @Swamy39 programme now at Belagavi organised by Prabuddha Bharat! @jagdishshetty @vhsindia pic.twitter.com/SkSTwcu2It
— nikunj shah 🇮🇳 (@niku1630) November 5, 2017
ಉತ್ತರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದ ಬಿಜೆಪಿ ಸೋಲು ಖಚಿತ ಎಂದು ಮಾತನಾಡುತ್ತಿದ್ದ ಜನರಿಗೆ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಸಾಕ್ಷಿಯಾಗಿದೆ ಎಂದರು.
venue already packed at #Belgavi in anticipation of Dr @swamy39 speech .. via @jagdishshetty pic.twitter.com/lA0ujZ82wL
— ॐRameshॐ (@rameshnswamy) November 5, 2017
ಪ್ರಬುದ್ಧ ಭಾರತ ಸಂಘಟನೆಯ ಚೇತನ್ಯಾ ಕುಲಕರ್ಣಿ, ಸಚೀನ ಸಬನೀಸ್ ವೇದಿಕೆಯ ಮೇಲೆ ಇದ್ದರು.ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ, ಶಾಸಕರಾದ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಸೇರಿದಂತೆ ಮುಂತಾದವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications