Get Updates
Get notified of breaking news, exclusive insights, and must-see stories!

Belagavi: ಲೋಕಸಭೆಯಲ್ಲಿ ಭದ್ರತಾ ಲೋಪ: ಸುವರ್ಣಸೌಧದಲ್ಲಿ ಬಿಗಿ ಬಂದೋಬಸ್ತ್‌

ಬೆಳಗಾವಿ, ಡಿಸೆಂಬರ್‌ 14: ಲೋಕಸಭೆಯಲ್ಲಿ ಭದ್ರತಾ ಲೋಪ ನಡೆದು ಆಗಂತುಕರು ಸದನದೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ಬೆನ್ನಲ್ಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಭದ್ರತೆ ಹೆಚ್ಚಿಸಿ, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸುವರ್ಣ ವಿಧಾನಸೌಧದ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತಮ್ಮ ಚೇಂಬರ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

Tight security at Suvarna Soudha Because Of Security Breach In Lok Sabha

ಸಭೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನಗಳನ್ನು ನೀಡಿದರು, ಶಾಸಕರು ಮತ್ತು ಮಂತ್ರಿಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ಮೇಲೆ ಮೇಲ್ವಿಚಾರಣೆಯ ಮಹತ್ವವನ್ನು ಒತ್ತಿ ಹೇಳಿದರು. ಅಲ್ಲದೆ, ಅಧಿಕೃತ ಸಿಬ್ಬಂದಿಗೆ ಮಾತ್ರ ಅವಕಾಶ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸದ್ಯ ಸುವರ್ಣಸೌಧದಲ್ಲಿ ಭದ್ರತಾ ಸಿಬ್ಬಂದಿ ಸುರ್ವಣಸೌಧ ಪ್ರವೇಶಿಸುವ ಪ್ರತೀ ವ್ಯಕ್ತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತಿದೆ. ಲೋಕಸಭೆಯಲ್ಲಿ ವ್ಯಕ್ತಿಯೊಬ್ಬ ಗ್ಯಾಲರಿಯಿಂದ ಕೆಳಗೆ ಜಿಗಿದು ಹಂಗಾಮಾ ಸೃಷ್ಟಿಸಿದ್ದ. ಹೀಗಾಗಿ ಸಂಸತ್​​ನಲ್ಲಿ ಭದ್ರತಾ ಲೋಪವಾದ ಕಾರಣ ಸುವರ್ಣ ಸೌಧದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಂಸತ್ ಘಟನೆ ವರದಿಯಾದ ತಕ್ಷಣ ಸ್ಪೀಕರ್ ಯು.ಟಿ.ಖಾದರ್ ಮಾರ್ಷಲ್​​ಗಳ ಜೊತೆ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಸುವರ್ಣ ಸೌಧದಲ್ಲಿ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.‌ ಸುವರ್ಣಸೌಧದ ವಿಧಾನಸಭೆ ಪ್ರವೇಶ ದ್ವಾರದ ಮಹಡಿಯಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಇಲ್ಲಿದ್ದ ಸಾರ್ವಜನಿಕರನ್ನು ಪೊಲೀಸರು ಹೊರಕ್ಕೆ ಕಳುಹಿಸಿದ್ದಾರೆ. ಮೊದಲ‌ ಮಹಡಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಸುವರ್ಣಸೌಧ ಪ್ರವೇಶಿಸುವ ಸಾರ್ವಜನಿಕರನ್ನೂ ಹೆಚ್ಚಿನ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ.

ಯಾವಾಗ ಏನಾಗಬಹುದು ಊಹೆ ಮಾಡಲು ಸಾಧ್ಯವಿಲ್ಲ, ನಮಗೆ ಎಚ್ಚರಿಕೆ ಗಂಟೆ: ಸ್ಪೀಕರ್ ಯು.ಟಿ.ಖಾದರ್

ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್ ಪ್ರಕರಣ ನಮಗೆ ಎಚ್ಚರಿಕೆ ಗಂಟೆ ಎಂದು ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ ಹೇಳಿದ್ದಾರೆ. ಯಾವಾಗ ಏನಾಗಬಹುದು ಎಂದು ಊಹೆ ಮಾಡಲು ಸಾಧ್ಯವಿಲ್ಲ. ಜನಸಾಮಾನ್ಯರು ಸಹಕಾರ ಕೊಡಬೇಕು. ಜನರಿಗೆ ಪಾಸ್ ಕೊಡುವಾಗ ಅವರ ನೈಜತೆ ನೋಡಿಕೊಂಡು ಪಾಸ್ ಕೊಡಲು‌ ಸೂಚಿಸಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ, ಸತ್ಪ್ರಜೆಗಳಿಗೆ ತೊಂದರೆ ಆಗದಂತೆ ಪಾಸ್ ವಿತರಣೆಗೆ ಸೂಚಿಸಲಾಗಿದೆ. ಹೆಚ್ಚು ತಪಾಸಣೆ ಮೂಲಕ ಸುವರ್ಣಸೌಧಕ್ಕೆ ಪ್ರವೇಶ ನೀಡಲಾಗಿದೆ. ಜನ ಸಾಮಾನ್ಯರು ಸಹಕರಿಸಬೇಕು ಎಂದು ಹೇಳಿದರು. ಸಂಸತ್‌ ಮೇಲೆ ದಾಳಿ ನಡೆದ ಬೆನ್ನಲ್ಲೇ ಸುವರ್ಣ ಸೌಧದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಪಾಸ್ ವಿತರಣೆ ವ್ಯವಸ್ಥೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+