ಬೆಳಗಾವಿ: ಮರಕ್ಕೆ ಕಾರು ಡಿಕ್ಕಿ, ತಾಯಿ ಇಬ್ಬರು ಮಕ್ಕಳು ದುರ್ಮರಣ

ಬೆಳಗಾವಿ, ಜನವರಿ 02: ಗೋವಾದಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿ ಮರಳಿ ಮನೆಗೆ ಹೋಗಕಿದ್ದವರು ದುರದೃಷ್ಟವಶಾತ್ ಮಸಣ ಸೇರಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸೇರಿದಂತೆ ಇಬ್ಬರು ಪುತ್ರಿಯರು ಸ್ಥಳದಲ್ಲಿಯೇ ಸಾನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4 ಸ್ತವನಿಧಿ ಘಾಟ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

Three killed two injured after car hits tree in Stavanidhi ghat Nipani

ಮುಂಬೈ ಮೂಲದ ಸಾವಿತ್ರಿ ಗುಪ್ತಾ 47, ಶೋಭಾ ಗುಪ್ತಾ(22) ಮತ್ತು ಆರತಿ ಗುಪ್ತಾ (21) ಮೃತ ದುರ್ದೈವಿಗಳು. ಗೋವಾದಲ್ಲಿ ಹೊಸ ವರ್ಷ ಆಚರಿಸಿ ಮರಳಿ ಮುಂಬೈ ತೆರಳುತ್ತಿದ್ದ ವೇಳೆ ಸ್ತವನಿಧಿ ಘಾಟ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರಿನ ಚಾಲಕ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಿಪ್ಪಾಣಿ ಶಹರ ಪೋಲಿಸ್ ಭೇಟಿ ನಡೆ ಪರಿಶೀಲನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+