"ಜಮೀರ್ ಅಹ್ಮದ್ ಯಾವ ದೇಶದ ಪರ ಇದ್ದಾರೆ ತಿಳಿಸಲಿ"
ಬೆಳಗಾವಿ, ಏಪ್ರಿಲ್ 20: ಪಾದರಾಯನಪುರದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯಿಸಿದ್ದಾರೆ.
"ಪಾದರಾಯನಪುರದಲ್ಲಿ ನಡೆದ ಈ ಘಟನೆ ರಾಜ್ಯಕ್ಕೆ ಶೋಭೆ ತರುವುದಿಲ್ಲ. ಇದಕ್ಕೆ ಪ್ರಚೋದನೆ ನೀಡುವ ಕೆಲಸ ನಡೆಯುತ್ತಿದೆ. ಇಂಥವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಿದೆ" ಎಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಈ ರೀತಿ ಕೋಮಿಗೆ ಪ್ರಚೋದನೆ ನೀಡುವವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು. ಜಮೀರ್ ಅಹ್ಮದ್ ಅವರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೊದಲು ಅವರು ಯಾವ ದೇಶದ ಪರವಾಗಿದ್ದಾರೆ ಅದನ್ನು ತಿಳಿಸಲಿ" ಎಂದು ಕಿಡಿಕಾರಿದ್ದಾರೆ.

"ರಾಜ್ಯದ ಗೃಹ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ" ಎಂದು ಹೇಳಿದ್ದಾರೆ.












Click it and Unblock the Notifications