ಬಿರಿಯಾನಿ ಅಡ್ಡಾದಲ್ಲಿ ಪಾಲಿಕೆ ಮಾಜಿ ಸದಸ್ಯೆ ಪುತ್ರನ ರಂಪಾಟ

ಬೆಳಗಾವಿ, ಅಕ್ಟೋಬರ್ 11: ಹೋಟೆಲ್ ನಲ್ಲಿ ಕೇಳಿದ ತಕ್ಷಣ ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ಪಾಲಿಕೆ ಮಾಜಿ ಸದಸ್ಯೆ ಪುತ್ರ ದರ್ಪ ತೋರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ದಸರಾ ಹಬ್ಬದ ದಿನದಂದು ಬೆಳಗಾವಿಯ ಖಾಸಗಿ ಹೋಟೆಲ್ ಬಿರಿಯಾನಿ ಅಡ್ಡಾಗೆ ಹೋಗಿದ್ದ ಅಶೋಕ್ ಮಾಳಗಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಪಾಲಿಕೆಯ ಮಾಜಿ ಸದಸ್ಯೆ ಜಯಶ್ರೀ ಮಾಳಗಿ ಮಗ ಅಶೋಕ್ ಮಾಳಗಿ ಮಂಗಳವಾರ ಅಕ್ಟೋಬರ್ 8ರಂದು ಬೆಳಗಾವಿಯ ಬಿರಿಯಾನಿ ಅಡ್ಡಾ ಹೋಟೆಲ್ ಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿನ ಸಪ್ಲೈಯರ್ ಗೆ ನೀರು ಕೇಳಿದ್ದು, ನೀರು ಕೊಡಲು ತಡವಾದ್ದರಿಂದ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಇಡೀ ಹೋಟೆಲ್ ನಲ್ಲಿ ದಾಂಧಲೆ ಸೃಷ್ಟಿಸಿ, ಪ್ಲೇಟ್ ಗಳನ್ನು ಎತ್ತಿ ಹಾಕಿ ಸಪ್ಲಯರ್ ಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

Son Of Former Corporation Member Ashok Malagi Assault Hotel Staff In Belagavi

ಈ ಕುರಿತು ಅಶೋಕ್ ಮಾಳಗಿ ವಿರುದ್ಧ ದೂರು ನೀಡಲು ಹೋಟೆಲ್ ಸಿಬ್ಬಂದಿ ಹೋದಾಗ, ದೂರು ದಾಖಲಿಸದೆ ಎಪಿಎಂಸಿ ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+