ಬೈಲಹೊಂಗಲದಲ್ಲಿ ಚೆನ್ನಮ್ಮನಿಗೆ ನಮಿಸಿ ಬಿಜೆಪಿ ಗೆಲ್ಲಿಸಿರೆಂದ ಸ್ಮೃತಿ ಇರಾನಿ

ಬೆಳಗಾವಿ, ಏಪ್ರಿಲ್ 28: ರಾಜ್ಯ ಬಿಜೆಪಿ ಘಟಕ ಆಯೋಜಿಸಿರುವ ಕರುನಾಡ ಮಹಿಳಾ ಸಂವಾದ ಜಾಗೃತಿ ಸಂವಾದ ಮತ್ತು ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಆಗಮಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇಂದು ಬೆಳಗಾವಿಗೆ ಆಗಮಿಸಿದರು.

ಬೆಳಗಾವಿಯ ರಾಣಿ ಚೆನ್ನಮ್ಮಾ ಸಮಾದಿ ಸ್ಥಳಕ್ಕೆ ತೆರಳಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ ಅವರು, ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಪಾಟೀಲ ಅವರ ಪರ ಪ್ರಚಾರ ಮಾಡಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸ್ಮೃತಿ ಇರಾನಿ ಅವರು, ರಾಣಿ ಚೆನ್ನಮ್ಮಾ ಅವರ ಸಮಾದಿ ಸ್ಥಳಕ್ಕೆ ಭೇಟಿ ಮಾಡಿದ ಬಳಿಕ ನನಗೆ ಖುಷಿ ತಂದಿದೆ, ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟ ಸರಕಾರ ಎಂದರೆ ಅದು ಬಿಜೆಪಿ ಸರಕಾರ ಎಂದು ಹೇಳಿದರು.

Smriti Irani campaign for BJP candidate in Belgavi

'ಜನದನ ಯೋಜನೆಯನ್ನು ಜಾರಿಗೆ ತಂದವರು ನರೇಂದ್ರ ಮೋದಿ, ಲಕ್ಷ್ಮಿ ಮನಗೆ ಬರುವಾಗ ಕಮಲದ ಮೇಲೆ ಕುಳಿತು ಬರುತ್ತಾಳೆ, ಈ ಬಾರಿ ಕಮಲಕ್ಕೆ ಮತಹಾಕಿ ಎಂದು ಸಮಾವೇಶದಲ್ಲಿ ಸ್ಮೃತಿ ಇರಾನಿ ಮಾತನಾಡಿದರು.

Smriti Irani campaign for BJP candidate in Belgavi

ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದ ಸ್ಮೃತಿ ಇರಾನಿ ಬೈಲುಹೊಂಗಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಅವರಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಸ್ಮೃತಿ ಇರಾನಿ ಜೊತೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ ರಾಜ್ಯಕ್ಕೆ ಆಗಮಿಸಿದ್ದು, ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಪ್ರಚಾರ ಮತ್ತು ಪಕ್ಷದ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+