ಸಂವಿಧಾನ ಕುರಿತ ಹೇಳಿಕೆ : ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ
ಬೆಳಗಾವಿ, ನವೆಂಬರ್ 28 : ಸಂವಿಧಾನದ ಬಗ್ಗೆ ಉಡುಪಿ ಪೇಜಾವರ ಶ್ರೀ ಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡ ವಿವಿಧ ದಲಿತ ಸಂಘನೆ ಕಾರ್ಯಕರ್ತರು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಪೇಜಾವರಶ್ರೀ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಪೇಜಾವರ ಶ್ರೀಗಳು ಅಂಬೇಡ್ಕರ್ ಒಬ್ಬರೇ ಸಂವೀಧಾನ ಬರೆದಿಲ್ಲ ಎಂದಿದ್ದರು ಜೊತೆಗೆ ಸಂವಿಧಾನ ಮತ್ತು ಮೀಸಲಾತಿ ನಿಯಮದ ಬಗ್ಗೆಯೂ ತಿದ್ದುಪಡಿ ಅಗತ್ಯ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಂವಿಧಾನದ ಬಗೆಗಿನ ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿದ ದಲಿತ ಹೋರಾಟಗಾರರು ಪೇಜಾವರ ಶ್ರೀಗಳ ವಿರುದ್ಧ ಘೋಷಣೆಗಳನ್ನು ಕೂಗಿದರು, ಶ್ರೀಗಳ ಪ್ರತಿಕೃತಿ ದಹಿಸಿ ಬೊಬ್ಬೆ ಹಾಕಿದರು.
ಪೇಜಾವರ ಶ್ರೀಗಳನ್ನ ಗಡಿಪಾರ ಮಾಡುವಂತೆ ಆಗ್ರಹಿಸಿದರು.












Click it and Unblock the Notifications