ಎಸ್ಸೆಸ್ಸೆಲ್ಸಿ ಪಾಸ್ ಮಾಡು, ಗಂಡನ್ನ ವಾಪಸ್ ಕೊಡು: ದೇವರಿಗೆ ಪತ್ರ!
ಸವದತ್ತಿ (ಬೆಳಗಾವಿ ಜಿಲ್ಲೆ), ಮಾರ್ಚ್ 10: ಸವದತ್ತಿ ಯಲ್ಲಮ್ಮ ದೇವಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪತ್ರ ಬರೆದ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡಿದ್ದಾರೆ. ಹೀಗೆ ಎರಡು ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ.
ಅದೇ ರೀತಿ ಶುಕ್ರವಾರ ಕೂಡ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹುಂಡಿಯಲ್ಲಿ ಎರಡು ಪ್ರತ್ಯೇಕ ಪತ್ರಗಳನ್ನು ಭಕ್ತರು ಹಾಕಿದ್ದರು. ನನ್ನ ಗಂಡನನ್ನ ವಾಪಸ್ ಕೊಡು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಮಾಡು, ನನ್ನ ಆರೋಗ್ಯ ಚೆನ್ನಾಗಿಡು, ನಾನು ಕಷ್ಟದಲ್ಲಿದ್ದೀನಿ, ದಯವಿಟ್ಟು ನನ್ನ ಕಾಪಾಡು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಭಕ್ತರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎರಡು ದಿನ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಕೊನೆಯ ಹುಂಡಿಯಲ್ಲಿ ಕಂಡ ಎರಡು ಪ್ರತ್ಯೇಕ ಪತ್ರಗಳು ಆಸಕ್ತಿಕರವಾಗಿವೆ. ತಮ್ಮ ಕಷ್ಟಗಳನ್ನು ಯಾರೊಂದಿಗಾದರೂ ಹೇಳಿಕೊಳ್ಳುವ ಮನಸ್ಥಿತಿ ಅದು. ಪರಿಚಯಸ್ಥರ ಮುಂದೆ ಹೇಳಿಕೊಂಡರೆ ಬೇರೆಯವರಿಗೆ ಹೇಳಿಬಿಡಬಹುದು ಎಂಬ ಆತಂಕ ಇರುತ್ತದೆ. ಇನ್ನೂ ಕೆಲವರಿಗೆ ದೇವರಿಂದ ತಮ್ಮ ಕಷ್ಟ ಪರಿಹಾರ ಆಗುತ್ತದೆ ಎಂಬ ನಂಬಿಕೆ ಕಾರಣಕ್ಕೂ ಹೀಗೆ ಮಾಡುತ್ತಾರೆ ಎನ್ನುತ್ತಾರೆ ಮಾನಸಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿರುವ ಸಂಜಯ್.












Click it and Unblock the Notifications