ಖಾನಾಪುರದಲ್ಲಿ ಜಮೀನು ವಿವಾದಕ್ಕೆ ಸಲಿಕೆಯಿಂದ ಹೊಡೆದು ವ್ಯಕ್ತಿ ಕೊಲೆ
ಬೆಳಗಾವಿ, ಏಪ್ರಿಲ್ 20: ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ಬಳಿ ಅಕ್ಕಪಕ್ಕದ ಕೃಷಿ ಭೂಮಿಯ ನಡುವಿನ ಗಡಿ ವಿಷಯವಾಗಿ ಶುರುವಾದ ತಕರಾರು ಕೊಲೆಯಲ್ಲಿ ಅಂತ್ಯಗೊಂಡಿದೆ.
ಭಾನುವಾರ ಬೆಳಿಗ್ಗೆ ಗ್ರಾಮದ ಹೊರವಲಯದ ಕೃಷಿ ಜಮೀನಿನ ಗಡಿ ವಿವಾದದಲ್ಲಿ ಗುಂಜಿ ನಿವಾಸಿ, ರೈಲ್ವೆ ನೌಕರ ಮಷ್ಣು ಧಾಕಲು ಝೆಂಡೆ (50) ಎಂಬ ವ್ಯಕ್ತಿಯನ್ನು ಪಕ್ಕದ ಹೊಲದ ಮಾಲೀಕ ಸಲಿಕೆಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ ಎನ್ನಲಾಗಿದೆ.

ಕೊಲೆಗೈದ ಆರೋಪಿಯನ್ನು ಅದೇ ಗ್ರಾಮದ ಮಾರುತಿ ನಾವಗೇಕರ (26) ಎನ್ನಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿದ್ದು, ಕೊಲೆಗೆ ಬಳಸಿದ ಸಲಿಕೆ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications