ಬೆಳಗಾವಿ-ಬೆಂಗಳೂರು ನಡುವೆ ಜನದಟ್ಟಣೆ ತಪ್ಪಿಸಲು ಇನ್ನೊಂದು ರೈಲು ಆರಂಭಿಸಲು ಆಗ್ರಹ
Recommended Video

ಬೆಳಗಾವಿ, ಜೂನ್ 25: ಬೆಳಗಾವಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿಗೆ ಪ್ರತಿಯಾಗಿ ಅದೇ ಸಮಯಕ್ಕೆ ಮತ್ತೊಂದು ರೈಲನ್ನು ಆರಂಭಿಸುವಂತೆ ಕರ್ನಾಟಕ ರೈಲು ಬಳಕೆದಾರರ ವೇದಿಕೆ ಕರ್ನಾಟಕ ರೈಲ್ ಯೂಸರ್ಸ್ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದೆ.
ಖಾಸಗಿ ಬಸ್ ಮಾಫಿಯಾದಿಂದ ನಿತ್ಯ ಸಾವಿರಾರು ಪ್ರಯಾಣಿಕರು ದುಬಾರಿ ಹಣ ತೆತ್ತು ಬೆಳಗಾವಿ,ಬೆಂಗಳೂರು ನಡುವೆ ಸಂಚರಿಸುವಂತಾಗಿದ್ದು, ಸದ್ಯ ಸಂಚರಿಸುತ್ತಿರುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ನಿತ್ಯ ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿದೆ. ಇದೇ ಸಮಯಕ್ಕೆ ಮತ್ತೊಂದು ರೈಲನ್ನು ಆರಂಭಿಸಿದರೆ ಅಷ್ಟೇ ಪ್ರಮಾಣದ ಪ್ರಯಾಣಿಕರು ನಿತ್ಯ ಸಂಚರಿಸಬಹುದು ಎಂದು ಹೇಳಿದೆ.

ಇದರಿಂದ ಖಾಸಗಿ ಬಸ್‌ಗಳ ಮಾಫಿಯಾವನ್ನು ತಡೆಗಟ್ಟಬಹುದು ಎಂದು ಕರ್ನಾಟಕ ರೈಲ್ ಯೂಸರ್ಸ್ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ಪ್ರಯಾಣಿಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಿಂದ ಬೆಳಗಾವಿಗೆ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ತೆರಳಲು 340ರೂ. ದರವಿದೆ, ಅದೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳಲು 569 ರೂ. ತೆರಬೇಕಾಗುತ್ತದೆ.
Sir this is everday rush in Ranichennamma exp btw Belagavi & Bengaluru. Pls provide additional overnight train to decongest this train. @drmubl @drmsbc @GMSWR @JoshiPralhad @AnanthKumar_BJP @RailwaySeva @PiyushGoyal @RailMinIndia #Hubbali #Belagavi #Bengaluru #Karnataka pic.twitter.com/JZuniCfl3s
— Karnataka Rail Users (@KARailway) June 24, 2018












Click it and Unblock the Notifications