ಗೋವಾದವರು ದಂಧೆಕೋರರು: ಪದ್ಮನಾಭ ಪ್ರಸನ್ನ ನಿಂದನೆ
ಬೆಳಗಾವಿ, ಜನವರಿ 26: ಗೋವಾ ಸಚಿವ ವಿನೋದ್ ಪಾಲೇಕರ್ ಕನ್ನಡಿಗರಿಗೆ ಹರಾಮಿ ಎಂದ ಅವರ ಮಾತಿಗೆ ಕನ್ನಡಿಗರು ತೀವ್ರ ಆಕ್ರೋಶಗೊಂಡಿದ್ದರು. ಜತೆಗೆ ಪಾಲೇಕರ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ಹೊರಹಾಕಿದ್ದರು.
ಇದೀಗ ಕೆಜೆಪಿ ಮುಖಂಡ ಪದ್ಮನಾಭ್ ಪ್ರಸನ್ನ ಕುಮಾರ್ ಅವರು ಪಾಲೇಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೋವಾದವರು ನೀವು ಮಹಿಳೆಯರನ್ನು ಇಟ್ಟುಕೊಂಡು ದಂಧೆ ಮಾಡುತ್ತೀರ, ಸಾರಾಯಿ ಮಾರಾಟ ಮಾಡಿ ದಂಧೆ
ಮಾಡುವವರು ನೀವು, ಡಿಸ್ಕೋ ನಡೆಸುವವರು ನೀವು, ನಮ್ಮ ರೈತರು ಕಷ್ಟಪಟ್ಟು ತರಕಾರಿಗಳನ್ನು ಬೆಳೆಯುತ್ತಾರೆ ಅಂತಹ ರೈತರಿಗೆ ನೀರುಕೊಡುವುದಿಲ್ಲ ಎಂದು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ ಎಂದರು.

ನೀವು ರೈತರಿಗೆ ನೀರು ಕೊಡುವುದಿಲ್ಲವಾ. ಹರಾಮಿ ಅನ್ನೋ ಗೋವಾ ಸಚಿವ ವಿನೋದ್ ಪಾಲೇಕರ್ ಮಾದರಚೋದ್. ಅವರಿಗೆ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಜ್ಞಾನವಿಲ್ಲ. ವಿನೋದ್ ಪಾಲೆಕರ್, ಗೋವಾ
ಸಿಎಂ ಕರ್ನಾಟಕಕ್ಕೆ ಕಾಲಿಟ್ಟರೆ ಕಾಲು ಕತ್ತರಿಸುತ್ತೇವೆ. ನೀವು ಕೇವಲ ನಾಯಿಯಂತೆ ಬೊಗಳ್ತೀರಾ ಎಂದು ಪದ್ಮನಾಥ್ ಕಿಡಿಕಾರಿದರು.












Click it and Unblock the Notifications