ಬೆಳಗಾವಿ: ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ
ಬೆಂಗಳೂರು, ಸೆ. 04: ಕಳೆದ ವರ್ಷ ಅಂದರೆ 2019ರಲ್ಲಿ ಪ್ರಕಟವಾದ ಕಾದಂಬರಿ ಮತ್ತು ಕಥಾ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಬಸವರಾಜ ಕಟ್ಟಿಮನಿ ಪುಸ್ತಕ ಬಹುಮಾನಕ್ಕೆ ಆಹ್ವಾನಿಸಲಾಗಿದೆ. ಬಸವರಾಜ್ ಕಟ್ಟಿಮನಿ ಪ್ರಶಸ್ತಿಯು 10 ಸಾವಿರ ರೂಪಾಯಿ ಗೌರವ ಧನ ಹಾಗೂ ಫಲಕವನ್ನು ಒಳಗೊಂಡಿದೆ. ಕಾದಂಬರಿಕಾರರಿಗೆ ವಯೋಮಿತಿಯಿದ್ದು, 40 ವರ್ಷಗಳ ಒಳಗಿನನವರು ಮಾತ್ರ ಇದರಲ್ಲಿ ಭಾಗವಹಿಸಬಹುದು.
ಲೇಖಕರು ನಾಲ್ಕು ಪ್ರತಿಗಳನ್ನು ಸೆಪ್ಟೆಂಬರ 16, 2020ರ ಒಳಗಾಗಿ ತಲುಪುವಂತೆ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರಗಂಧರ್ವ ಕಲಾಮಂದಿರ ಆವರಣ ಹೊಸ ಮಹಾನಗರ ಪಾಲಿಕೆ ಎದುರು ಸುಭಾಷ್ ನಗರ ಬೆಳಗಾವಿ-590016 ಈ ವಿಳಾಸಕ್ಕೆ ಕಳುಹಿಸಬೇಕು.

ಇದು ಲೇಖಕರ ಸ್ವತಂತ್ರ ಕೃತಿಯಾಗಿರಬೇಕು. ಜೊತೆಗೆ (ವಯಸ್ಸಿನ ದೃಢೀಕರಣ ಕಡ್ಡಾಯ) ಕಥೆ ಮತ್ತು ಕಾದಂಬರಿ ಎರಡೂ ವಿಭಾಗಗಳಲ್ಲಿ ಲೇಖಕರು ಭಾಗವಹಿಸಬಹುದು ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಮಲ್ಲಿಕಾರ್ಜುನ ಹೀರೆಮಠ ತಿಳಿಸಿದ್ದಾರೆ.












Click it and Unblock the Notifications