ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ
Recommended Video
ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲವೆಂದ ತೇಜಸ್ವಿ ಸೂರ್ಯ | Tejasvi Surya
ಬೆಳಗಾವಿ, ಸೆಪ್ಟೆಂಬರ್ 21: "ರಾಜ್ಯಕ್ಕೆ ಕೇಂದ್ರದ ಯಾವುದೇ ನೆರವಿನ ಅವಶ್ಯಕತೆ ಇಲ್ಲ. ನೆರೆ ಪರಿಹಾರಕ್ಕೆ ಯಾವುದೇ ಸೌಕರ್ಯ ಇಲ್ಲದ ಸಂದರ್ಭ ರಾಜ್ಯ ಸರ್ಕಾರ ಹಣಕ್ಕಾಗಿ ಬೇಡಿಕೆ ಇಟ್ಟಾಗ ಕೊಡದೇ ಇದ್ದರೆ ಅದು ತಪ್ಪು. ಆದರೆ ಸದ್ಯ ಅಂತಹ ಯಾವುದೇ ಪರಿಸ್ಥಿತಿ ಇಲ್ಲ" ಎಂದು ಹೇಳಿದ್ದಾರೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೇಮಠದಲ್ಲಿ ಮಾತನಾಡಿದ ಅವರು, "ಮೋದಿ ಸರ್ಕಾರ ಬಂದ ಮೇಲೆ 14ನೇ ಹಣಕಾಸು ಆಯೋಗದ ಶಿಫಾರಸು ಜಾರಿ ಮಾಡಲಾಗಿದೆ. ಈ ಆಯೋಗದ ಪ್ರಕಾರ ಹಣ ಜಾಸ್ತಿ ಇದೆ. ಈ ಹಿಂದೆ ಪ್ರತಿ ಭಾರೀ ಹಣ ಕೊಡಿ ಎಂದು ಕೇಂದ್ರದ ಬಳಿ ಹೋಗಬೇಕಿತ್ತು. ಆದರೆ ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದೆ" ಎಂದಿದ್ದಾರೆ.

ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದಾಗಿ ಈಗಾಗಲೇ ಕೇಂದ್ರದಿಂದ ಅಗತ್ಯ ನೆರವು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ ಸಮರ ನಡೆಯುತ್ತಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.












Click it and Unblock the Notifications