ಬೆಳಗಾವಿಗೆ ಹೊಸ ಪೊಲೀಸ್ ಆಯುಕ್ತರ ಕಚೇರಿ
ಬೆಳಗಾವಿ, ಡಿಸೆಂಬರ್ 01 : ಬೆಳಗಾವಿ ಮಹಾನಗರದಲ್ಲಿ ಹೊಸ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. 17 ಕೋಟಿ ರೂಪಾಯಿ ವೆಚ್ವದಲ್ಲಿ ಸುಸಜ್ಜಿತ ಆಯುಕ್ತರ ಕಚೇರಿಯನ್ನು ನಿರ್ಮಾಣ ಮಾಡಲಾಗುತ್ತದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ನಗರದ ಕಾಲೇಜು ರಸ್ತೆಯಲ್ಲಿ ಕಚೇರಿ ನಿರ್ಮಾಣವಾಗಲಿದೆ.
ಕರ್ತವ್ಯ ಲೋಪ ಆರೋಪ: ಪಿಎಸ್ಐ ಸಹಿತ 8 ಪೊಲೀಸ್ ಪೇದೆಗಳು ಸಸ್ಪೆಂಡ್
ಬಳಿಕ ಮಾತನಾಡಿದ ಸಚಿವರು, "ಪೊಲೀಸ್ ಆಯುಕ್ತರ ಕಚೇರಿ ನಿರ್ಮಿಸಿಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ನಗರದಲ್ಲಿಯೇ ಎರಡು ಎಕರೆ ಜಾಗ ಲಭ್ಯವಿದ್ದು, ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ" ಎಂದು ಹೇಳಿದರು.
ಪೊಲೀಸ್ ಅಧಿಕಾರಿಯನ್ನು ಮದುವೆಯಾದ ಪ್ರಭಾವಿ ರಾಜಕಾರಣಿ ಪುತ್ರಿ ಐಶ್ವರ್ಯ !
"ಬೆಳಗಾವಿ ಮಹಾನಗರಕ್ಕೆ ತಕ್ಕಂತೆ ಎಲ್ಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ಕಟ್ಟಡವನ್ನು ನಿಗದಿತ ಕಾಲಮಿತಿಯಲ್ಲಿ ನಿರ್ಮಿಸಲಾಗುತ್ತದೆ" ಎಂದು ಹೇಳಿದ ಸಚಿವರು, ಕಟ್ಟಡದ ನೀಲನಕ್ಷೆಯನ್ನು ವೀಕ್ಷಿಸಿದರು. ಸಣ್ಣಪುಟ್ಟ ಬದಲಾವಣೆ ಮಾಡಲು ನಿರ್ದೇಶನ ಕೊಟ್ಟರು.
ನಕಲಿ ಪೊಲೀಸ್ ದಾಳಿ ಮಾಡಿ ದರೋಡೆ ಅಸಲಿ ಪೊಲೀಸರು ಅಂದರ್
ನೂತನ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಕೆ. ಎಸ್. ಆರ್. ಪಿ. ಎಡಿಜಿಪಿ ಅಲೋಕ್ ಕುಮಾರ್, ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.
ಮೂರು ಕಚೇರಿ; ಬೆಳಗಾವಿ ಜಿಲ್ಲೆಯಲ್ಲಿ ಮೂರು ಪ್ರಮುಖ ಪೊಲೀಸ್ ಕಚೇರಿಗಳಿವೆ. ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಉತ್ತರ ವಲಯ), ನಗರ ಪೋಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ.
ಬೆಳಗಾವಿ ಮಹಾನಗರದಲ್ಲಿ ಪೊಲೀಸ್ ಆಯುಕ್ತ ಕಚೇರಿ ಸ್ಥಾಪಿಸಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. 2014ರ ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಪೊಲೀಸ್ ಆಯುಕ್ತರ ಕಚೇರಿಯನ್ನು ಉದ್ಘಾಟನೆ ಮಾಡಲಾಗಿತ್ತು. ಆಯುಕ್ತರ ಕಚೇರಿ ವ್ಯಾಪ್ತಿಗೆ 12 ಪೊಲೀಸ್ ಠಾಣೆಗಳು ಸೇರಿವೆ.