ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್ ವಿರುದ್ಧ ತಿರುಗಿಬಿದ್ದ ಮುಸ್ಲಿಮರು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 25: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ (ಕಾಂಗ್ರೆಸ್) ಫಿರೋಜ್ ಸೇಠ್ ವಿರುದ್ಧ ಮುಸ್ಲಿಂ ಮುಖಂಡರೇ ತಿರುಗಿಬಿದ್ದಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿರುವ ಮುಸ್ಲಿಂ ಮುಖಂಡರು, ಫಿರೋಜ್ ಸೇಠ್ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣೆ ವೇಳೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಲು ಬರ್ತಾರೆ ಶರದ್ ಪವಾರ್ಚುನಾವಣೆ ವೇಳೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಲು ಬರ್ತಾರೆ ಶರದ್ ಪವಾರ್

ಫಿರೋಜ್ ಸೇಠ್ ರಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಫಿರೋಜ್ ಸೇಠ್ ರನ್ನು ಕೈ ಬಿಟ್ಟು, ಬೇರೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಲಾಗುವುದು. ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿದಲ್ಲಿ ಮಾತ್ರ ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಮುಸ್ಲಿಂ ಮುಖಂಡರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

Muslims revolt against Belagavi north MLA Feroz Sait

ಫಿರೋಜ್ ಸೇಠ್ ವಿರುದ್ಧ ಬಂಡಾಯ ಎದ್ದಿದ್ದು, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಸ್ಲಿಂ ಲೀಗ್, ಫಿರೋಜ್ ಸೇಠ್ ರಿಂದ ದಬ್ಬಾಳಿಕೆ ನಡೆಯುತ್ತಿದೆ. ಅವರ ಆಡಳಿತವನ್ನು ವಿರೋಧಿಸಿದ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸ್ ಅಸ್ತ್ರ ಪ್ರಯೋಗ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಸ್ವಾರ್ಥಕ್ಕಾಗಿ ಗಲಭೆಗಳನ್ನು ಮಾಡಿಸುತ್ತಿರುವ ಶಾಸಕ ಫಿರೋಜ್ ಸೇಠ್ ಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಆಗ್ರಹಿಸಲಾಯಿತು.

English summary
Muslims revolt against Belagavi north MLA Feroz Sait. He is representing Congress. Muslim leaders urges Congress not to give party ticket to him. Alleging family politics by MLA Feroz Sait.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X