ಅನೈತಿಕ ಸಂಬಂಧ ಬಿಡು ಎಂದ ಪತಿಯ ಕೊಲೆ ಮಾಡಿದ ಪತ್ನಿ
ಬೆಳಗಾವಿ, ಮಾ. 04: ಅನೈತಿಕ ಸಂಬಂಧ ಬಿಟ್ಟು ಬಿಡು ಎಂದು ಬುದ್ಧಿವಾದ ಹೇಳಿದ ಪತಿಯನ್ನೇ ಪತ್ನಿ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ನಡೆದಿದೆ.
ಸಿದ್ದಪ್ಪ ಚುಂಚನೂರ(25) ಹತ್ಯೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಸಿದ್ದಪ್ಪ ಪತ್ನಿ ಕೌಶಲ್ಯ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ. ರಾತ್ರಿ ಮಲಗಿದ್ದಾಗ ಹಗ್ಗದಿಂದ ಸಿದ್ದಪ್ಪನ ಕುತ್ತಿಗೆ ಬಿಗಿದು ಕೌಶಲ್ಯ ಕೊಲೆ ಮಾಡಿದ್ದಾಳೆ. ಕೌಶಲ್ಯಗೆ ಬೇರೆ ವ್ಯಕ್ತಿ ಜತೆಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದಪ್ಪ ಪತ್ನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಕೌಶಲ್ಯ ತನ್ನ ಪತಿ ಸಿದ್ದಪ್ಪ ರಾತ್ರಿ ಹೊತ್ತು ಮಲಗಿದ್ದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆಯಾದ ಸಿದ್ದಪ್ಪನ ತಂದೆ ಮಾಯಪ್ಪ ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿ ಕೊಂಡಿರುವ ಮುರಗೋಡ ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications