ಎರಡು ತಿಂಗಳ ಮಗುವನ್ನು ಕೆರೆಗೆ ಬಿಸಾಡಿದ ತಾಯಿ, ಇಂತ ಕ್ರೂರ ಮನಸ್ಥಿತಿಗೆ ಕಾರಣವೇನು?
ಮಾತೃದೇವೋಭವ ಎಂದು ಕರೆಯಲ್ಪಡುವ ತಾಯಿಯೊಬ್ಬರು ಮಾತೃಕುಲಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಕ್ರೂರ ಮನಸ್ಸಿನ ತಾಯಿಯೊಬ್ಬರು ತನ್ನ ಹೆತ್ತ ಹಸುಗೂಸನ್ನೇ ಕೆರೆಗೆ ಬಿಸಾಡಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆಳಗಾವಿ ತಾಲ್ಲೂಕಿನ ಕಣಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗುವಿಗೆ ಮೂರ್ಛೆರೋಗ ಬರುತ್ತದೆ ಎಂಬ ಕಾರಣಕ್ಕೆ ತಾಯಿಯೇ ತನ್ನ ಹಸುಗೂಸನ್ನು ಕೆರೆಗೆ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.

ತಾಯಿಯು ತನ್ನ ಮಗುವನ್ನು ಕೆರೆಗೆ ಎಸೆಯುವುದನ್ನು ಅಲ್ಲೇ ಇದ್ದ ಕೆಲ ಯುವಕರು ನೋಡಿದ್ದರು. ಮಗುವನ್ನು ಕರೆಗೆ ಬಿಸಾಡಿದ ತಕ್ಷಣವೇ ಯುವಕರು ಕೆರೆಗೆ ಹಾರಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿನ ಜೀವಕ್ಕೆ ಯಾವುದೇ ಅಪಾಯ ಎದುರಾಗಿರಲಿಲ್ಲ.
ತಾಯಿಯು ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದರು. ಸ್ಥಳೀಯರು ಅವರನ್ನು ಹಿಡಿದು ಬುದ್ಧಿವಾದ ಹೇಳಿದ್ದಾರೆ. ಬಳಿಕ ಮಗುವನ್ನು ತಾಯಿಯ ಕೈಗೆ ನೀಡಲಾಗಿದೆ. ಮಗುವನ್ನು ಚಿಕಿತ್ಸೆಗಾಗಿ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಲ್ಲದೆ ಪೊಲೀಸರು ಆ ಮಗುವಿನ ತಾಯಿಯನ್ನು ಬಂಧಿಸಿದ್ದಾರೆ. ಬಳಿಕ ಮಗುವನ್ನು ಬಿಸಾಡಲು ಏನು ಕಾರಣ ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗುವಿಗೆ ನಿರಂತರವಾಗಿ ಪಿಟ್ಸ್ ಬರುತ್ತಿತ್ತು. ಇತ್ತೀಚೆಗಷ್ಟೇ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದೆವು ಎಂದು ಹೇಳಿದ್ದಾಗಿ ವರದಿಯಾಗಿದೆ.
ಈ ಮಹಿಳೆಯು ಕಳೆದ ಮೂರು ವರ್ಷಗಳ ವಿವಾಹವಾಗಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಕೆಸಲ ಮಾಡುತ್ತಿದ್ದರು. ಮಗುವಿನ ಆರೋಗ್ಯ ಸ್ಥಿತಿಯಿಂದ ಬೇಸತ್ತು ಈ ಕೃತ್ಯ ಮಾಡಿದ್ದಾಗಿ ಹೇಳಿಕೊಂಡಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪತಿ ಕೆಲಸಕ್ಕೆ ಹೋಗಿದ್ದಾಗ ಮಗುವಿನೊಂದಿಗೆ ಕೆರೆ ಕಡೆಗೆ ಬಂದಿದ್ದರು.
ಕೆಲ ಸಮಯದವರೆಗೆ ಅಲ್ಲೇ ಇದ್ದು, ಯಾರೂ ಇಲ್ಲ ಎಂದು ಮಗುವನ್ನು ಏಕಾಏಕಿ ಕೆರೆಗೆ ಬಿಸಾಡಿ ಓಡುತ್ತಿದ್ದರು ಎನ್ನಲಾಗಿದೆ. ಇದು ಅಲ್ಲೇ ಕೆರೆಯಲ್ಲಿ ದನಕರುಗಳನ್ನು ತೊಳೆಯುತ್ತಿದ್ದ ಯುವಕರು ಗಮನಿಸಿದ್ದರು. ಕೂಡಲೇ ಜನರನ್ನು ಸೇರಿಸಿ, ಮಗುವಿನ ರಕ್ಷಣೆ ಮಾಡಿದ್ದಾರೆ.
ಯುವಕನೊಬ್ಬ ತಲೆ ಉಪಯೋಗಿಸಿ ಕೆರೆಗೆ ಹಾರಿದ ಕಾರಣ ಮಗು ಜೀವಂತವಾಗಿ ಉಳಿದಿದೆ ಎಂದು ಹೇಳಲಾಗಿದೆ. ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಹೆತ್ತ ತಾಯಿಯೇ ತನ್ನ ಮಗುವಿನ ಮೇಲೆ ತೋರಿರುವ ಈ ಕ್ರೂರ ನಡೆಗೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.












Click it and Unblock the Notifications