Belagavi Dispute: ಮರಾಠಿ ಪ್ರೇಮ ಮೆರೆದ ನಾಯಕಿಯರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಳೇ ಆಡಿಯೋ ವೈರಲ್!
ಬೆಂಗಳೂರು, ಫೆಬ್ರವರಿ 25: ರಾಜಕಾರಣಿಗಳೇ ಹೀಗೆ. ಅಧಿಕಾರಕ್ಕೆ ಯಾರ ಪರವಾದರೂ ಒಲವು ತೋರುತ್ತಾರೆ. ಜಾತಿ ಆಧಾರಿತ, ಧರ್ಮಾಧಾರಿತ ರಾಜಕಾರಣ ಹೊಸತೇನಲ್ಲ. ಅಧಿಕಾರಕ್ಕಾಗಿ ಭಾಷಾಧಾರಿತ ರಾಜಕಾರಣ ರಾಜ್ಯದಲ್ಲಿ ಮುನ್ನೆಲೆಗೆ ಬರುತ್ತಿದೆ. ಅದಕ್ಕೆ ಆಗಾಗ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಂಡು ಬರುತ್ತಿರುವ ಬೆಳವಣಿಗೆ, ನಮ್ಮಿಂದ ಆಯ್ಕೆ ಆಯದ ಜನಪ್ರತಿನಿಧಿಗಳ ಧೋರಣೆ, ಮರಾಠಿಗರ ಮೇಲಿನ ಪ್ರೇವವೇ ಸಾಕ್ಷಿಯಾಗಿವೆ.
ಸದ್ಯ ಬೆಳಗಾವಿಯಲ್ಲಿ ಕರ್ನಾಟಕದ ಕಂಡಕ್ಟರ್ ಮೇಲೆ ಹಲ್ಲೆ, ಪೋಕ್ಸೋ ಕೇಸ್ ದಾಖಲಿಸಲಾಗಿದೆ. KSRTC ಕಪ್ಪು ಬಸ್‌ಗಳಿಗೆ ಕಪ್ಪು ಮಸಿ ಬಳಿಯಲಾಗಿದೆ. ಈ ಮಧ್ಯೆ ರಾಜಕೀಯ ಮಹಿಳಾ ನಾಯಕಿಯರು ಮರಾಠಿ ಪ್ರೇಮ ಮರೆದಿದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಗಡಿ ಭಾಗದ ಮರಾಠಿಗರ ಓಲೈಕೆಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆದುಕೊಂಡ ರೀತಿ, ಅದನ್ನು ಸಮರ್ಥಿಸಿಕೊಂಡ ಆಡಿಯೋ ವೈರಲ್ ಆಗುತ್ತಿದೆ. ಇದು ಕಾಂಗ್ರೆಸ್ ನಾಯಕಿಗೆ ಮಾತ್ರವಲ್ಲದೇ, ಬಿಜೆಪಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸಹ ಮರಾಠಿ ಪ್ರೇಮ ಮರೆದಿದ್ದಾರೆ. ಇದು ಜನಪ್ರತಿನಿಧಿಗಳು ಮತ್ತೊಂದು ಮುಖ ಮತ್ತೇ ಅನಾರವಣಗೊಳಿಸಿದಂತಾಗಿದೆ.
ಭಾಷೆ, ನಾಡು, ಗಡಿ, ಈ ನೆಲದ ಅಸ್ಮಿತೆ ವಿಚಾರ ಬಂದಾಗ, ಜಾತಿ ಭೇದ-ಭಾವ ಅಷ್ಟೇ ಏಕೆ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಒಟ್ಟಾಗಬೇಕು. ಆದರೆ ನಮ್ಮನ್ನಾಳು ರಾಜಕಾರಣಿಗಳು ಅಧಿಕಾರಧಾಸೆಗೆ ಬಹಿರಂಗವಾಗಿಯೇ ಮರಾಠಿಗರ ಓಲೈಕೆಗೆ ಮುಂದಾಗಿದ್ದಾರೆ. ಅದರ ಪ್ರತಿ ಫಲವೇ ಕನ್ನಡಿಗರ ಮೇಲೆ ಹಲ್ಲೆ ನಡೆಯಲು ಪ್ರೇರಣೆ ನೀಡಿದಂತಾಗಿದೆ. ಕನ್ನಡ, ಕನ್ನಡಿಗರ ಗೌರವಕ್ಕೆ ಧಕ್ಕೆ ಬರಲು ರಾಜಕಾರಣಿಗಳ ನಡೆಯೇ ಕಾರಣ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡ ವಿರೋಧಿ ಧೋರಣೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಕನ್ನಡಿಗ ಮತ್ತು ಬೆಂಗಳೂರಿನ ಸಂತೋಷ್ ಗೌಡ ಎಂಬುವವರು ಮಾತನಾಡಿದ ಆಡಿಯೋ ವೈರಲ್ ಆಗಿದೆ. ''ಬೆಳಗಾವಿ ಭಾಗದಲ್ಲಿ ನೀರಿನ ಟ್ಯಾಂಕರ್ ಉದ್ಘಾಟನೆ ಮಾಡಿದ್ದೀರಿ. ಈ ವೇಳೆ ವೇಳೆ ಮರಾಠಿ ಬಳಕೆ ಮಾಡಿದ್ದೀರಿ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಸಚಿವರು, ಸಚಿವರಾಗಿ ನಿಮ್ಮ ಕಾರ್ಯಕ್ರಮಗಳಲ್ಲೇ ಕನ್ನಡ ಮರೆತಿದ್ದೀರಿ. ಮರಾಠಿ ರಾರಾಜಿಸುತ್ತಿದೆ. ನೀವು ಕನ್ನಡಿಗರ ತೆರಿಗೆ ಹಣ ತಿನ್ನುತ್ತೀರಿ. ಇಲ್ಲಿನ ಅನ್ನ ತಿನ್ನುವವರು ಕನ್ನಡ ಪ್ರೇಮ ಮೆರೆಯಬೇಕು. ಇದು ಖಂಡನೀಯ'' ಎಂದು ಸಚಿವೆಗೆ ಪಾಠ ಮಾಡಿದ್ದಾರೆ. ಸಂತೋಷ್ ಗೌಡ ಅವರು ಕನ್ನಡ ಪ್ರೇಮ ಮರೆದಿದ್ದಾರೆ. ಇದು ವರ್ಷಗಳ ಹಳೇಯ ಆಡಿಯೋ ಎನ್ನಲಾಗಿದ್ದು, ಬೆಳಗಾವಿ ಘಟನೆ ಬಳಿಕ ಮತ್ತೆ ವೈರಲ್ ಆಗುತ್ತಿದೆ. ಈ ಆಡಿಯೋವನ್ನು @Ajayappu009 ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮರಾಠಿಗರ ಪ್ರತಿನಿಧಿ ಲಕ್ಷ್ಮೀ ಹೆಬ್ಬಾಳ್ಕರ್?
ಆಡಿಯೋದಲ್ಲಿ ಕನ್ನಡಿಗನ ಪ್ರಶ್ನೆಗೆ ಸಬೂಬು ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾವು ಅವರನ್ನು ಪ್ರತಿನಿಧಿಸುತ್ತೇವೆ. ಹೀಗಾಗಿ ಮರಾಠಿ ಹಾಕಬೇಕಾಗುತ್ತದೆ ಎಂದಿದ್ದಾರೆ. ಮೊದಲಿಗೆ ಇದು ನನ್ನ ಪಿಎ ಮಾಡಿರುವ ತಪ್ಪಾಗಿದೆ. ಮರಾಠಿ ಬ್ಯಾನರ್/ನಾಮಪಲಕ ಬಳಸಿದ್ದಾರೆ. ತೆಗೆದು ಸರಿ ಮಾಡಿ ಫೋಟೋ ಕಳಿಸುವಂತೆ ಹೇಳಿದ್ದೇನೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ಅವರ ಈ ನಡೆಗೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ಹಣದಲ್ಲಿ ಶಶಿಕಲಾ ಜೊಲ್ಲೆ ಮರಾಠಿ ಪ್ರೇಮ!
ಇನ್ನೂ ಬಿಜೆಪಿ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ ನಡೆದ ಕಾರ್ಯಕ್ರಮ ಸಂಪೂರ್ಣ ಮರಾಠಿಮಯವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮರಾಠಿ ಪ್ರೇಮ ಆಯ್ತು, ಇದೀಗ ಬಿಜೆಪಿ ನಾಯಕಿಯದ್ದು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಚಿಕ್ಕೋಡಿಯಲ್ಲಿ 11 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮರಾಠಿ ಭಾಷೆಗೆ ಆದ್ಯತೆ ನೀಡಿದ್ದಾರೆ. ಒಂದೇ ಒಂದು ಅಕ್ಷರ ಕನ್ನಡ ಭಾಷೆಯಲ್ಲಿ ಇರಲಿಲ್ಲ. ಮರಾಠಿ ಬ್ಯಾನರ್ ಮುಂದೆ ನಿಂತು ಕಾರ್ಯಕ್ರಮ ನಡೆಸಿಕೊಂಡಿದ್ದಾರೆ.
ಬೆಳಗಾವಿ ಘಟನೆ ಬಗ್ಗೆ ಜೊಲ್ಲೆ ಜಾಣ ಮೌನ: ಆಕ್ರೋಶ
ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಗಲಾಟೆ, ಕಂಡಕ್ಟರ್ ಕೇಸ್ ವಿಚಾರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಾಣ ಮೌನ ವಹಿಸಿದ್ದಾರೆ. ತುಟಿ ಬಿಚ್ಚಿದರೆ, ಮತಗಳು ಬರುವುದಿಲ್ಲ, ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆಯವರು ಮರಾಠಿ ಭಾಷಾಭಿಮಾನ ತೊರಿದ್ದಾರೆ.
ಕರ್ನಾಟಕದ ರಾಜ್ಯ ಸರ್ಕಾರದ ಹಣದಲ್ಲಿ ಮರಾಠಿ ಭಾಷಾಭಿಮಾನ, ಮರಾಠಿ ಮತದಾರರ ಓಲೈಕೆ ರಾಜಕಾರಣ ಮಾಡಿದ್ದಾರೆ.
ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ಕನ್ನಡ ಅಭಿಮಾನಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಕನ್ನಡ ಪರ ಧ್ವನಿ ಎತ್ತಬೇಕು. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಬದುಕುವ, ಈ ನೆಲದ ಅನ್ನ ತಿನ್ನುವ ಜನಪ್ರತಿನಿಧಿಗಳು ಕನ್ನಡ ಪ್ರೇಮ ಮೆರೆಯಬೇಕು ಎಂದು ಆಗ್ರಹಿಸಿದ್ದಾರೆ..












Click it and Unblock the Notifications