• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಖನ್ ಜಾರಕಿಹೊಳಿ ಬಿಜೆಪಿಗೆ; ಕಾಂಗ್ರೆಸ್ ನಾಯಕರು ಹೇಳುವುದೇನು?

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಏಪ್ರಿಲ್ 05; "ಲಖನ್ ಜಾರಕಿಹೊಳಿ‌ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದರೆ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದರು.

ಬೆಳಗಾವಿ ಉಪ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಎಂ. ಬಿ. ಪಾಟೀಲ್, ಆರ್. ವಿ. ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ಉಪ ಚುನಾವಣೆ: ನಾಮಪತ್ರ ವಾಪಸ್; ಬಿಜೆಪಿಗೆ ಸಿಹಿ ಸುದ್ದಿ!

"ಸತೀಶ್ ಜಾರಕಿಹೊಳಿಗೆ ಗೋಕಾಕ್‌ನಲ್ಲಿ ಲಖನ್‌ಗಿಂತ ಹೆಚ್ಚು ಬೆಂಬಲ‌ ಇದೆ. ನಾವು ಸಹಿತ ಗೋಕಾಕ್‌ನಲ್ಲಿ ಪ್ರಚಾರ ಮಾಡಲ್ಲ. ಸತೀಶ್ ಜಾರಕಿಹೊಳಿ‌ ಗೋಕಾಕ್‌ನಲ್ಲಿ ಸಮರ್ಥವಾಗಿ ಚುನಾವಣೆ ಮಾಡುತ್ತಾರೆ" ಎಂದು ಎಂ. ಬಿ. ಪಾಟೀಲ್ ಹೇಳಿದರು.

ಬೆಳಗಾವಿ ಉಪ ಚುನಾವಣೆ; ಕಣದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ!

"ಜೆಡಿಎಸ್ ಪಕ್ಷದಲ್ಲಿದ್ದ ಅಶೋಕ್ ಪೂಜಾರಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಒಬ್ಬ ವ್ಯಕ್ತಿ ಪಕ್ಷ ಬದಲಿಸಿದರೆ ಬದಲಾವಣೆ ಮಾಡುತ್ತಾರೆ ಅಂತಾ ಅಲ್ಲ. ಅಂತಿಮವಾಗಿ ಮತದಾರರು ನಿರ್ಣಯ ಮಾಡುತ್ತಾರೆ. ಸತೀಶ್ ಜಾರಕಿಹೊಳಿ‌ ಪ್ರಭಾವವನ್ನು ಲಖನ್‌ಗೆ ಕಡಿಮೆ ಮಾಡಲೂ ಆಗುವುದಿಲ್ಲ" ಎಂದು ಹೇಳಿದರು.

ಉಪ ಚುನಾವಣೆ; ಒಂದು ವಾರ ಸಿದ್ದರಾಮಯ್ಯ ಪ್ರಚಾರ

ಆರ್. ವಿ. ದೇಶಪಾಂಡೆ ಹೇಳಿಕೆ; "ಸಚಿವ ಕೆ. ಎಸ್. ಈಶ್ವರಪ್ಪಗೆ ಸಿಎಂ ಯಡಿಯೂರಪ್ಪ ಮೇಲೆ ಅವಿಶ್ವಾಸವಿದೆ. ಹಿರಿಯ ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತಾರೆ. ಸಿಎಂ ಮೇಲೆ ಮಂತ್ರಿಗಳು ಅವಿಶ್ವಾಸ ತೋರಿಸುತ್ತಿದ್ದಾರೆ. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು, ಇಲ್ಲವೇ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆರ್. ವಿ. ದೇಶಪಾಂಡೆ ಹೇಳಿದರು.

"ಈ ರೀತಿಯ ಘಟನೆ ದೇಶದ ಇತಿಹಾಸದಲ್ಲಿ ಎಲ್ಲಿಯೂ ಆಗಿಲ್ಲ. ಬಿಜೆಪಿಯಲ್ಲಿ ಯಾವುದೇ ಶಿಸ್ತು ಉಳಿದಿಲ್ಲ, ಪ್ರಜಾಪ್ರಭುತ್ವಕ್ಕೆ ಇದು ಅಗೌರವ ತಂದಿದೆ" ಎಂದರು.

"ಕೇವಲ ಭಾಷಣದಿಂದ ಜನರನ್ನು ಮರಳು ಮಾಡುವ ಯತ್ನ ನಡೆದಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿದೆ. ಸರ್ಕಾರ ಏನು ಮಾಡುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯ ಅನುಷ್ಠಾನ ಮರೆತಿದೆ. ಕೋವಿಡ್ ಪರೀಕ್ಷೆ, ವ್ಯಾಕ್ಸಿನೇಷನ್‌ ಯಾವ ಪ್ರಮಾಣದಲ್ಲಿ ಆಗಬೇಕೋ ಆಗುತ್ತಿಲ್ಲ" ಎಂದು ಆರ್. ವಿ. ದೇಶಪಾಂಡೆ ದೂರಿದರು.

"ರಾಜ್ಯದಲ್ಲಿ ಕಾಂಗ್ರೆಸ್ ಝೀರೋ ಆಗುತ್ತದೆ" ಎಂಬ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಮಾಜಿ ಸಚಿವ ಎಂ. ಬಿ. ಪಾಟೀಲ್, "ನಮ್ಮನ್ನು ಝೀರೋ ಮಾಡೋರು, ಹೀರೋ ಮಾಡೋರು ಜನರ ಕೈಯಲ್ಲಿದೆ. ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ. ಝೀರೋ ಯಾರು?, ಹೀರೋ ಯಾರು? ಎಂದು ಗೊತ್ತಾಗುತ್ತೆ" ಎಂದರು.

English summary
Lakhan Jarkiholi may quit Congress and join BJP in the time of Belagavi loksabha by election. Congress leaders reaction on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X