• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣ

|

ಬೆಳಗಾವಿ, ಡಿಸೆಂಬರ್ 19: ಕಬ್ಬು ಬೆಳೆಗಾರ ಹೊರಾಟಗಾರ್ತಿ ಒಬ್ಬರ ಬಗ್ಗೆ ಸಿಎಂ ತುಚ್ಛವಾಗಿ ಮಾತನಾಡಿದ್ದಾರೆ ಎನ್ನಲಾದ ವಿಷಯ ಇಂದು ಬೆಳಗಾವಿ ಸದನದಲ್ಲಿ ಚರ್ಚೆ ಆಯಿತು.

2018ರಲ್ಲಿ ಧೂಳೆಬ್ಬಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಷಣಗಳ ಹೈಲೆಟ್ಸ್

ರೈತ ಮಹಿಳೆ ಬಗ್ಗೆ ಸಿಎಂ ಅವರು ಕೆಟ್ಟದಾಗಿ ಮಾತನಾಡಿದರು ಎಂದು ಪ್ರತಿ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ಸ್ಪಷ್ಟೀಕರಣ ನೀಡಿದ ಸಿಎಂ, ನನ್ನ ಪದಬಳಕೆಯಲ್ಲಿ ತಪ್ಪಾಗಿರಬಹುದೇ ವಿನಃ ನನ್ನ ಮಾತಿನ ಭಾವದಲ್ಲಿ, ಮನಸ್ಸಿನಲ್ಲಿ ಯಾವುದೇ ತಪ್ಪು ಇಲ್ಲ ಎಂದರು.

ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾಗಲಿವೆ 9 ಸರ್ಕಾರಿ ಕಚೇರಿ

'ಇಷ್ಟು ದಿನ ಎಲ್ಲಿ ಮಲಗಿದ್ದೆ ತಾಯಿ?' ಎಂದು ನಾನು ಕೇಳಿದ್ದೆ, ತಾಯಿ ಪದ ಬಳಕೆ ಮಾಡಿದ್ದೇನೆ, ನಾನು ಆಡಿದ ಮಾತಿನಲ್ಲಿ ಉದ್ದೇಶ ಕೆಟ್ಟದಿರಲಿಲ್ಲ ಆದರೆ ನನ್ನ ಮಾತನ್ನು ತಿರುಚಿದರು. 'ಇಷ್ಟು ದಿನ ನಿದ್ದೆ ಮಾಡ್ತಿದ್ದೆ ಏನಮ್ಮ' ಎಂದು ನಾನು ಕೇಳಿದ್ದರೆ ಆಗ ಸರಿ ಇರುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಆ ಮಹಿಳೆ ನಾಲಾಯಕ್ ಸಿಎಂ ಎಂದಿದ್ದರು, ಕಬ್ಬು ಬೆಳೆಗಾರರ ಕೈಯಿಂದ ಹಣ ಕೊಡಿಸದ ತಪ್ಪು ಈಗ ಅಧಿಕಾರಕ್ಕೆ ಬಂದಿರುವ ನನ್ನ ಮೇಲೆ ಹೊರಿಸಿದ್ದರು, ಆದರೂ ನಾನು ಆಕೆಯ ಮನವಿಗೆ ಸ್ಪಂದಿಸಿದೆ. ಆಕೆ ಕೆಟ್ಟದಾಗಿ ಮಾತನಾಡಿದರೂ ನಾನು ಆ ಉದ್ದೇಶದಿಂದ ಮಾತನಾಡಲಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ

ಅಕಸ್ಮಾತ್‌ ನನ್ನ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಮಾತನ್ನು ವಾಪಸ್ ಪಡೆಯಲು ಸಿದ್ದನಿದ್ದೇನೆ, ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದು ಹೇಳಿದರು.

English summary
CM Kumaraswamy gives clarification in Belgaum session about his statement on farmer woman. He said i did not said anything wrong, i may fail in use of words but my intentions were good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X