ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲೇ ಕರ್ನಾಟಕ ಪೊಲೀಸ್ ನಂ 1 : ರಾಮಲಿಂಗಾ ರೆಡ್ಡಿ

By Manjunatha
|
Google Oneindia Kannada News

ಬೆಳಗಾವಿ, ಡಿಸೆಂಬರ್ 06 : ಕಳೆದ ನಾಲ್ಕೂವರೆ ವರ್ಷದಲ್ಲಿ 28 ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪ್ರತಾಪ್ ಸಿಂಹರಿಂದ ಮತ್ತೆ ಕಾನೂನು ಉಲ್ಲಂಘನೆಯಾದರೆ ಕಠಿಣ ಕ್ರಮ: ರಾಮಲಿಂಗಾರೆಡ್ಡಿಪ್ರತಾಪ್ ಸಿಂಹರಿಂದ ಮತ್ತೆ ಕಾನೂನು ಉಲ್ಲಂಘನೆಯಾದರೆ ಕಠಿಣ ಕ್ರಮ: ರಾಮಲಿಂಗಾರೆಡ್ಡಿ

ನಗರದ ಎಪಿಎಮ್ ಸಿ ಪೊಲೀಸ್ ಠಾಣೆಯ ಎದುರಿನ ಕೆಎಸ್ಆರಪಿ ತರಬೇತಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಮಿಸಲು ಪೊಲೀಸ್ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷರ್ಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಷಣ ಮಾಡಿದ ಅವರು ರಾಜ್ಯದಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಇದ್ದಾರೆ ರಾಜ್ಯದ ಕಾನೂನು‌ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದಾರೆ ಎಂದರು.

Karnataka police the best in India : Ramalingareddy

ದೇಶದಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ ಕರ್ನಾಟಕದಲ್ಲಿ ಇದೇ ಎಂದ ಸಚಿವರು, ನಾವು ಸಾಕಷ್ಟು ಪೊಲೀಸ್ ಇಲಾಖೆ ವ್ಯವಸ್ಥೆಯನ್ನ ಸುಧಾರಿಸುತ್ತಿದ್ದೇವೆ ಎಂದರು.

ರೌಡಿಗಳಿರಬೇಕು ಇಲ್ಲ ನೀವಿರಬೇಕು, ಪೊಲೀಸರಿಗೆ ಗೃಹಮಂತ್ರಿ ಎಚ್ಚರಿಕೆರೌಡಿಗಳಿರಬೇಕು ಇಲ್ಲ ನೀವಿರಬೇಕು, ಪೊಲೀಸರಿಗೆ ಗೃಹಮಂತ್ರಿ ಎಚ್ಚರಿಕೆ

ಪೊಲೀಸರ ಬಹು ದಿನಗಳ ಬೇಡಿಕೆ ವಸತಿ ಸೌಕರ್ಯದ ಬಗ್ಗೆ ಮಾತನಾಡಿ ನಾಲ್ಕುವರೆ ವರ್ಷದಲ್ಲಿ 11 ಸಾವಿರ ಮನೆಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ಮನೆಗಳನ್ನು‌ ನಿರ್ಮಾಣ ಮಾಡಿದೆ. 2020ಯಲ್ಲಿ ಇನ್ನೂ 4 ಸಾವಿರ ಮನೆಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಗಳಿಗೆ ಇನ್ನೂ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಅವರು‌ ಭರವಸೆ ನೀಡಿದರು.

ತಮ್ಮ ಸರ್ಕಾರದಿಂದ ಪೊಲೀಸ್ ಇಲಾಖೆ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದ ಗೃಹ ಸಚಿವ ರಾಮಲಿಂಗಾರೆಡ್ಡಿ 1963ರಲ್ಲಿ ಕೆಎಸ್ ಆರ್ ಪಿ ಅಸ್ಥಿತ್ವಕ್ಕೆ ಬಂದಿತ್ತು. ಸದ್ಯ ಅದರಲ್ಲಿ 9 ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 344 ಜನರಲ್ಲಿ 200 ಜನರು ಪದವಿದರರಿರುವುದು ಹೆಮ್ಮೆಯ ಸಂಗತಿ ಎಂದರು.

English summary
Karnataka police is the best in India's other police says Karnataka home minister Ramalinga Reddy in Belagavi. he recived honour of guard by new police batch in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X