'ಸರ್ಕಾರದ ಉಳಿವು ನನ್ನ ಕೈಯಲ್ಲಿದೆ, ಜನರ ದುಡ್ಡು ಸುಮ್ಮನೆ ಖರ್ಚು ಮಾಡಿಸಲ್ಲ'

Recommended Video

      Kumaraswamy said, Karnataka government will not let fall | Oneindia Kannada

      ಬೆಳಗಾವಿ, ಅಕ್ಟೋಬರ್ 27: ರಾಜ್ಯ ರಾಜಕಾರಣಕ್ಕೆ ತಿರುವು ನೀಡುವಂಥ ಹೇಳಿಕೆಯೊಂದನ್ನು ಶನಿವಾರ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ- ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ನೀಡಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಪೂರ್ಣಾವಧಿ ಅಧಿಕಾರ ಪೂರೈಸುತ್ತಾ ಎಂಬ ಪ್ರಶ್ನೆಗೆ, ಅದು ನನ್ನ ಕೈಯಲ್ಲಿದೆ. ಬಿಜೆಪಿ ಸರ್ಕಾರ ಇರಬೇಕೋ ಬೇಡವೋ ಎಂಬುದು ನನ್ನ ಕೈಯಲ್ಲಿದೆ ಎಂದಿದ್ದಾರೆ.

      ಈಗಿರುವ ಬಿಜೆಪಿ ಸರ್ಕಾರ ತೆಗೆದು, ಇನ್ನೊಂದು ಸರ್ಕಾರ ತರುವ ಭಾವನೆ ಕೆಲವರಲ್ಲಿದೆ. ಅದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ ಕುಮಾರಸ್ವಾಮಿ.

      "ನಾನು ಅಧಿಕಾರ ಹಿಡಿಯಲು ಕಷ್ಟ ಪಡಲಿಲ್ಲ, ಎರಡು ಬಾರಿ ಅಧಿಕಾರ ನನ್ನ ಮನೆ ಬಾಗಿಲಿಗೆ ಬಂದಿದೆ. ಚುನಾವಣೆಗೆ ಹೋಗಲು ನಾನು ತಯಾರಿಲ್ಲ. ಜನರ ತೆರಿಗೆ ದುಡ್ಡು ಪೋಲಾಗಬಾರದು. ನಾನು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ; ನನಗೆ ಚುನಾವಣೆ ಮುಖ್ಯವಲ್ಲ" ಎಂದು ಅವರು ಹೇಳಿದ್ದಾರೆ.

      Karnataka Government Is In My Hand; Will Not Let Fall, Said HDK

      ಡಿಸೆಂಬರ್ 5ರಂದು ಉಪ ಚುನಾವಣೆ ನಡೆದು, ಬಿಜೆಪಿ ಸರ್ಕಾರ ಹೋಗುತ್ತೆ ಅಂತ ‌ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಅದು ಹಗಲುಗನಸು ಅಷ್ಟೇ ಎಂದ ಅವರನ್ನು, ಬಿಜೆಪಿಯನ್ನು ಬೆಂಬಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಅದಕ್ಕಾಗಿ ಡಿಸೆಂಬರ್ ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+