Expressway: ಕರ್ನಾಟಕದ ಈ 2 ಜಿಲ್ಲೆಗಳ ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ? ಪ್ರಯೋಜನ, ಮಾರ್ಗಗಳು
ಬೆಂಗಳೂರು, ಮಾರ್ಚ್ 09: ಕರ್ನಾಟಕ ರಾಜಧಾನಿ ಬೆಂಗಳೂರು-ಮೈಸೂರು ಮಧ್ಯೆ ಈಗಾಗಲೇ ಎಕ್ಸಪ್ರೆಸ್‌ವೇ ನಿರ್ಮಾಣವಾಗಿದೆ. ಇದರಿಂದ ಆರ್ಥಿಕ ಬೆಳವಣಿಗೆ, ಆಸ್ತಿಗೆ ಉತ್ತಮ ದರ, ಮೂಲಸೌಕರ್ಯಗಳು ಅಭಿವೃದ್ಧಿ ಆಗಿವೆ. ಇದೇ ರೀತಿ ಉತ್ತರ ಕರ್ನಾಟಕದಲ್ಲೂ ಬೃಹತ್ ಎಕ್ಸ್‌ಪ್ರೆಸ್ ಯೋಜನೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಹಾಗಾದರೆ ಯಾವ ಜಿಲ್ಲೆಗಳ ಮಧ್ಯೆ ಈ ಹೆದ್ದಾರಿ ಬರಲಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ (ಮಾರ್ಚ್ 7) ಮಂಡಿಸಿದ ತಮ್ಮ 16 ನೇ ಬಜೆಟ್ ನಲ್ಲಿ ಉತ್ತರ ಕರ್ನಾಟಕದ ರಸ್ತೆ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಮಧ್ಯೆ ರೂ.1,200 ಕೋಟಿ ಅಂದಾಜು ವೆಚ್ಚದಲ್ಲಿ ಬೆಳಗಾವಿ ಮತ್ತು ಧಾರವಾಡ ನಡುವೆ ಎಕ್ಸ್‌ಪ್ರೆಸ್‌ವೇ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಈ ಬಗ್ಗೆ ಚಿಂತನೆ ಇದೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವೇ ಹೆಚ್ಚಾಗಿ ಪ್ರಸ್ತಾಪವಾಗಿದೆ.

ಆದರೆ ಮುಖ್ಯಮಂತ್ರಿಗಳು ಈ ಯೋಜನೆ ಬಗ್ಗೆ ಪ್ರಸ್ತಾಪಿಸಿಲ್ಲ. ಬದಲಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣಕ್ಕೆ ರಿಂಗ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಯೋಜನೆ ಅಷ್ಟೇ ಜಾರಿಯಾದರೆ, ಹೆದ್ದಾರಿ ಬದಲಾಗಿ ರಿಂಗ್ ರಸ್ತೆ ಮೊದಲು ಜಾರಿಗೆ ಬರಲಿದೆ.
ಬೆಂಗಳೂರಿನಿಂದ ಪುಣೆ ರಾಷ್ಟ್ರೀಯ ಹೆದ್ದಾರಿ 04ರ ವ್ಯಾಪ್ತಿಯಗೆ ಈ ಬೆಳಗಾವಿ-ಧಾರವಾಡ ಎರಡು ಜಿಲ್ಲೆಗಳು ಬರುತ್ತವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಳಗಾವಿ - ಧಾರವಾಡ ವಿಭಾಗದ ರಸ್ತೆಯನ್ನು 06 ಪಥಗಳಾಗಿ ಮೇಲ್ದರ್ಜೆಗೆ ಏರಿಸಿದೆ. ಇದರಿಂದಾಗಿ ಆರು ಪಥಗಳ ರಸ್ತೆ 433.ಕಿ.ಮೀ.ಯಿಂದ 515 ಕಿಮೀ ವರೆಗೆ ರಸ್ತೆ ವಿಸ್ತರಣೆ ಆಗಿದೆ. ಇದರಲ್ಲಿ 20216-17ರಲ್ಲಿ ಕರ್ನಾಟಕದಲ್ಲಿ 79.36 ಕಿಲೋ ಮೀಟರ್ ರಸ್ತೆ ಸಹ ಅಭಿವೃದ್ಧಿಗೊಂಡಿತ್ತು.
ಸದ್ಯ ಬೈಲಹೊಂಗಲ ರಿಂಗ್ ರಸ್ತೆ ಯೋಜನೆ ಬಗ್ಗೆ ಸರ್ಕಾರ ಪ್ರಸ್ತಾಪಿಸಿದೆ. ಉದ್ದೇಶಿತ ಎಕ್ಸ್‌ಪ್ರೆಸ್ ವೇ ಕುರಿತು ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಯೋಜನೆ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಈ ಬಗ್ಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಬಜೆಟ್‌ನಲ್ಲಿ ಸರ್ಕಾರ ಹೇಳಿರುವುದು ಧಾರವಾಡ-ಬೆಳಗಾವಿ ಎಕ್ಸ್‌ಪ್ರೆಸ್ ವೇ? ಅಥವಾ ರಿಂಗ್ ರಸ್ತೆ ಯೋಜನೆಯೋ ಎಂದು ತಿಳಿಸಬೇಕಿದೆ.

ಬೆಳಗಾವಿ-ಧಾರವಾಡ ಎಕ್ಸ್‌ಪ್ರೆಸ್‌ವೇ ಆದಲ್ಲಿ ಇದರು ಈ ಭಾಗಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಏನಲ್ಲ ಲಾಭವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಸಾರಿಗೆ ಸುಧಾರಣೆ-ಸಮಯ ಉಳಿತಾಯ
ಈ ಎಕ್ಸ್‌ಪ್ರೆಸ್ ವೇ ನಿರ್ಮಾಣಗೊಂಡರೆ ಬೆಳಗಾವಿ ಹಾಗೂ ಧಾರವಾಡ ಮಧ್ಯೆ ಸಂಚಾರ ಸಮಯ ಉಳಿತಾಯವಾಗುತ್ತದೆ. ಪ್ರಯಾಣ ವೇಗ ಹೆಚ್ಚುತ್ತದೆ. ಅಲ್ಲದೇ ಈ ಭಾಗದಲ್ಲಿನ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಉತ್ತೇಜನೆ ಸಿಗುತ್ತದೆ. ರಸ್ತೆ ಸುಧಾರಣೆ ಆಗುತ್ತಿದ್ದಂತೆ ಈ ಭಾಗದಲ್ಲಿ ಕೈಗಾರಿಕೆಗಳು, ಬಂಡವಾಳ ಹೂಡಿಕೆ ಹೆಚ್ಚಾಗಬಹುದು. ಈ ಎರಡು ಜಿಲ್ಲೆಗಳ ಮಧ್ಯದ ವಾಹನ ಸಂಚಾರದಲ್ಲಿ ಒಂದು ಗಂಟೆ ಸಮಯ ಉಳಿಯುತ್ತದೆ
ಆರ್ಥಿಕ ಬೆಳವಣಿಗೆ
ಹೆದ್ದಾರಿ ಸಂಪರ್ಕ ಸಾಧ್ಯವಾದಲ್ಲಿ ಹೂಡಿಕೆಗಳು ಹೆಚ್ಚಾಗುತ್ತದೆ. ಕೈಗಾರಿಕೆಗಳಿಂದ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇದರಿಂದ ಸ್ಥಳೀಯವಾಗಿ ಆರ್ಥಿಕತೆ ಸುಧಾರಣೆಯತ್ತ ಸಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಅಪಘಾತಗಳು ಕಡಿಮೆ ಆಗುತ್ತವೆ. ರಸ್ತೆ ಸಂಚಾರ ಸುರಕ್ಷತೆ ಹೆಚ್ಚಾಗುತ್ತದೆ.
ರಿಯಲ್ ಎಸ್ಟೇಟ್‌ಗೆ ಪ್ರೋತ್ಸಾಹ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಿಂದ ಮಂಡ್ಯ, ಮದ್ದೂರು, ರಾಮನಗರ, ಬಿಡದಿ ಸೇರಿದಂತೆ ಹೆದ್ದಾರಿ ಅಕ್ಕ ಪಕ್ಕದ ಆಸ್ತಿಗಳಿಗೆ ಚಿನ್ನದ ಬೆಲೆ ಸಿಗುತ್ತಿದೆ. ಅದೇ ರೀತಿ ಬೆಳಗಾವಿ-ಧಾರವಾಡ ಮಧ್ಯದ ಊರುಗಳ ವ್ಯಾಪ್ತಿಯ ಆಸ್ತಿಗಳಿಗೆ ಚಿನ್ನದ ಬೆಲೆ ಸಿಗುತ್ತದೆ. ರಿಯಲ್ ಎಸ್ಟೇಟ್‌ಗೆ ಈ ಕಾರಿಡಾರ್‌ನಿಂದ ಉತ್ತೇಜನ ಸಿಕ್ಕಂತಾಗುತ್ತದೆ. ಇದಲ್ಲಿ ವಾಣಿಜ್ಯ ಉದ್ದೇಶಗಳು, ಇಲ್ಲವೇ ಇತರ ಉದ್ದೇಶಗಳಿಗೆ ಭೂಮಿ ಖರೀದಿ ಪ್ರಮಾಣ ಹೆಚ್ಚಳ ನಿರೀಕ್ಷಿಸಬಹುದಾಗಿದೆ..
ಕರ್ನಾಟಕದ ಬೆಳಗಾವಿ, ಧಾರವಾಡ, ಮೈಸೂರು, ಬೆಂಗಳೂರು ಜಿಲ್ಲೆಗಳನ್ನು ಜಾಗತಿಕ ನಾವೀನ್ಯತೆ ಜಿಲ್ಲೆಗಳನ್ನಾಗಿ ಮಾಡಲು ಸರ್ಕಾರ ಚಿಂತಿಸಿದೆ. ಈ ಮೂಲಕ ಜಾಗತಿಕ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕೆ ಉನ್ನತ ಸ್ಥಾನ ಸಿಗುವಂತೆ ಮಾಡುವ ಉದ್ದೇ ಹೊಂದಿದ್ದೇವೆ ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಯೋಜನೆಗಳ ಪೂರ್ಣ ವಿವರ ಬಹಿರಂಗವಾಗಲಿದೆ.
ವಿಜಯಪುರ ಜಿಲ್ಲೆ ಏರ್‌ಪೋರ್ಟ್ 2026ಕ್ಕೆ ಆರಂಭ
ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಕಲಬುರಗಿಗೆ ಮಾತ್ರವಲ್ಲದೇ ವಿಜಯಪುರ ಜಿಲ್ಲೆಯಲ್ಲಿನ ಬಹುನಿರೀಕ್ಷೆ ವಿಮಾನ ನಿಲ್ದಾಣ ಯೋಜನೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಈ ಏರ್‌ಪೋರ್ಟ್ 2026ಕ್ಕೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ ಎಂದು ಅಪ್ಡೇಟ್ ನೀಡಿದ್ದಾರೆ
ಬೆಂಗಳೂರು-ಪುಣಾ ಸರ್ವೀಸ್ ರಸ್ತೆ ಅಗಲೀಕರಣ
ಈಗಾಗಲೇ ಬೆಂಗಳೂರು-ಪುಣೆ ರಸ್ತೆಯಲ್ಲಿ ಪೈಕಿ ಪುಣೆ ಭಾಗದಲ್ಲಿ ಸರ್ವೀಸ್ ರಸ್ತೆ ಅಗಲೀಕರಣ ಕಾರ್ಯ ನಡೆದಿದೆ. ಇದರಿಂದ ಮಹಾರಾಷ್ಟ್ರ ತಲುಪುವುದು, ರಾಜ್ಯ ಪ್ರವೇಶದ ವೇಳೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ತಪ್ಪಲಿದೆ. ಸ್ಥಳೀಯ ನಾಗರಿಕರಿಗೆ ಎದುರಾದ ದೈನಂದಿನ ಸಂಚಾರ ಸಮಸ್ಯೆಗಳು ತಪ್ಪಲಿವೆ. ಜೊತೆಗೆ ಸಮಯ ಉಳಿತಾಯವಾಗಲಿದೆ.
ಪೀಕ್ ಸಮಯವಾದ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚಿನ ವಾಹನಗಳ ಸಂಚಾರ ಇರುತ್ತದೆ. ಬೃಹತ್ ವಾಹನಗಳು, ಲಘು ವಾಗಹನಗಳು ಸೇರಿದಂತೆ ಎಲ್ಲ ವಿಧದ ವಾಹನಗಳ ಸಂಚರಿಸುತ್ತವೆ. ಆದ್ದರಿಂದ 604 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅನುಮೋದನೆ ನೀಡಿದೆ. ಶೀಘ್ರವೇ ಈ ಯೋಜನೆ ಜಾರಿ ಬರಲಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು ಸುಮಾರು 32 ಕಿಲೋ ಮೀಟರ್ ಉದ್ದದವರೆಗೆ ಅಂದರೆ ಪುಣೆಯಿಂದ ಬೆಳಗಾವಿಯತ್ತ ಬರುವ ರಸ್ತೆ ಭಾಗದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದು ಪೂರ್ಣಗೊಂಡರೆ, ಸ್ಥಳೀಯರಿಗೆ ಕಿರಿ ಕಿರಿ ತಪ್ಪಲಿದೆ ಎಂದು ತಿಳಿದು ಬಂದಿದೆ.
ಹೆಚ್ಚುವರಿ ಮಾಹಿತಿ ನೋಡುವುದಾದರೆ, ಬೈಲಹೊಂಗಲ ತಾಲ್ಲೂಕಿನಲ್ಲಿ ಹೊರ ವರ್ತುಲ ರಸ್ತೆ ಪ್ರಸ್ತಾವನೆ ಇದೆ. ಇತ್ತ 55 ಕೋಟಿ ರೂ. ವೆಚ್ಚದಲ್ಲಿ ಹೊಸ ಡಿಸಿ ಕಚೇರಿ ಕಟ್ಟಡವನ್ನು ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಯೋಜಿಸಲಾಗಿದೆ. ಈ ಬಗ್ಗೆ ಕಾರ್ಯಸಾಧ್ಯತಾ ವರದಿ ತಯಾರಿಸುವಂತೆ ಸೂಚನೆ ನೀಡಲಾಗಿದೆ.
ಮೈಸೂರು ಮತ್ತು ಬೆಳಗಾವಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಎರಡು ಹೊಸ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಇದರೊಂದಿಗೆ ಬೆಳಗಾವಿಯ ರಾಮದುರ್ಗ ಮತ್ತು ಸವದತ್ತಿಯಲ್ಲಿ ತಾಲೂಕು ಆಸ್ಪತ್ರೆಗಳ ಪುನರ್ ಅಭಿವೃದ್ಧಿ ಮಾಡಲಾಗುವುದು.












Click it and Unblock the Notifications