Narayana Gowda: ಮರಾಠಿ ಗೂಂಡಾಗಳಿಗೆ ಎಚ್ಚರಿಕೆ ಕೊಟ್ಟ ಕರವೇ ನಾರಾಯಣಗೌಡ

ಬೆಳಗಾವಿ ಫೆಬ್ರವರಿ 26: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಕೈ ಮಾಡಿದ ಮರಾಠಿಗರ ವಿರುದ್ಧ ರಾಜ್ಯಾದ್ಯಂತ ಸಂಘ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಜೊತೆಗೆ ಬೆಳಗಾವಿಯಲ್ಲಿ ಮರಾಠಿ ಗೂಂಡಾಗಳಿಗೆ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬೆಳಗಾವಿಯಲ್ಲಿ ಮರಾಠಿ ಎಂಇಎಸ್‌ನ ಮಹಾ ಗುಂಡಾಗಳು ದಬ್ಬಾಳಿಕೆ ದೌರ್ಜನ್ಯವನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ಬೆಳಗಾವಿಯ ನೆಲದಲ್ಲಿ ಉತ್ತರ ಕೊಡಲು ನಾನು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದೇನೆ. ಇವತ್ತು ಇದಕ್ಕೆಲ್ಲಾ ಅಂತ್ಯ ಹಾಡುತ್ತೇನೆ. ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಡೆಯುವುದು, ಗಾಜು ಕಿಟಕಿ ಹೊಡೆಯುವುದು, ಕಂಡಕ್ಟರ್ ಮೇಲೆ ಹಲ್ಲೆ ಮಾಡುವುದು ಇಂತಹ ಪ್ರೌವೃತ್ತಿ ನಾನು ಇಪ್ಪತ್ತೈದು ವರ್ಷದಿಂದ ನೋಡಿಕೊಂಡು ಬಂದಿದ್ದಾನೆ.

Karave Narayana Gowda warns Marathi goons

ಇದು ಕನ್ನಡ ಭೂಮಿ. ಮರಾಠಿಗರು ಈ ನೆಲಕ್ಕೆ ಬಂದಿದ್ದರೆ ಅವರು ನಮ್ಮ ಅತಿಥಿಗಳು ಅಷ್ಟೆ. ಕನ್ನಡ ನೆಲದವರು ಅಲ್ಲ. ಇದನ್ನು ಅರಿತುಕೊಂಡು ಬದುಕುವುದನ್ನು ಕಲಿಯಬೇಕು. ಅದನ್ನು ಮೆರೆತು ನಡೆದುಕೊಳ್ಳುವುದು ಈ ನೆಲದಲ್ಲಿ ನಡೆಯುವುದಿಲ್ಲ. ನಿಮಗೆ ಮರಾಠಿ ಪ್ರೇಮ ಇದ್ದರೆ ಮಹಾರಾಷ್ಟ್ರದಲ್ಲಿ ಇಟ್ಟುಕೊಳ್ಳಿ. ಕನ್ನಡ ನೆಲದಲ್ಲಿ ಅಲ್ಲ' ಎಂದು ಎಂಇಎಸ್ ಮರಾಠಿ ಗೂಂಡಾಗಳಿಗೆ ನಾರಾಯಣಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

'ಬೆಳಗಾವಿ ಕರ್ನಾಟಕದ್ದು. ಅದನ್ನು ಅರ್ಥ ಮಾಡಿಕೊಂಡು ಬದುಕುವುದನ್ನು ಕಲಿಯಬೇಕು. ಪಕ್ಕದಲ್ಲಿ ರಾಜ್ಯವನ್ನು ಇಟ್ಟುಕೊಂಡು ಕನ್ನಡ ಮಾತನಾಡುವವರ ಮೇಲೆ ದಬ್ಬಾಳಿಕೆ ಮಾಡುವುದು ಕಂಡು ಬಂದರೆ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಬಿಡಿ. ನಿಮ್ಮ ಬೇರುಗಳನ್ನು ಕಟ್ ಮಾಡಿದ್ದೇವೆ. ನಿಮ್ಮ ಶಾಸಕರನ್ನು ಕಿತ್ತು ಬೀಸಾಡಿದ್ದೇವೆ. ನಿಮಗಿನ್ನೂ ಬಿದ್ದು ಬಂದಿಲ್ಲ. ಈ ರೀತಿಯ ದಬ್ಬಾಳಿಕೆ ಮಾಡಿದ್ದನ್ನು ಕರವೇ ಸಹಿಸುವುದಿಲ್ಲ' ಎಂದಿದ್ದಾರೆ ನಾರಾಯಣಗೌಡ.

Karave Narayana Gowda warns Marathi goons

'ಒಬ್ಬರ ಮೇಲೆ ಕೈ ಮಾಡಿದರೆ ನಾವು ನೂರು ಜನರನ್ನು ಹೊಡೆಯುತ್ತೇವೆ'

'ನೀವು ಒಬ್ಬರ ಮೇಲೆ ಕೈ ಮಾಡಿದರೆ (ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್) ನಾವು ನೂರು ಜನರನ್ನು ಹೊಡೆಯುತ್ತೇವೆ. ಇದನ್ನು ನಿಲ್ಲಿಸಿ. ಕನ್ನಡಿಗರನ್ನು ಕೆಣಕಬೇಡಿ. ಇಂಥಹ ಕೆಲಸ ಮಾಡಿದರೆ ಎಲ್ಲರನ್ನೂ ಕಿತ್ತು ಬೀಸಾಡುತ್ತೇವೆ. ಕನ್ನಡ ಇತಿಹಾಸ ಓದಿ ತಿಳಿದುಕೊಂಡರೆ ಕನ್ನಡಿಗರು ಎಂಥವರು ಎಂದು ಗೊತ್ತಾಗುತ್ತದೆ. ಕರ್ನಾಟಕದ ನೆಲ ಶಾಂತಿಯುತವಾದ ನೆಲೆ. ಇಲ್ಲಿ ನಿಮ್ಮ ಬದುಕು ಕಟ್ಟಿಕೊಂಡು ಇದರ ಋಣ ತೀರಿಸಬೇಕು. ಅದನ್ನು ಬಿಟ್ಟು ಕನ್ನಡ ಮಾತನಾಡುವವರ ವಿರುದ್ಧ ಗೂಂಡಾಗಿರಿ ಮಾಡುತ್ತೇವೆ ಅಂದರೆ ನಾವು ಅದನ್ನು ಸಹಿಸುವುದಿಲ್ಲ' ಎಂದು ನಾರಾಯಣಗೌಡ ವಾರ್ನಿಂಗ್ ಕೊಟ್ಟಿದ್ದಾರೆ.

ಕನ್ನಡ ಮಾತನಾಡುವ ನೆಲೆದಲ್ಲಿ ಇದ್ದು, ಕನ್ನಡದ ನೆಲದ ಅನ್ನ ತಿಂದು, ಕನ್ನಡ ಮಾತನಾಡುವವರ ಮೇಲೆ ಕೈ ಮಾಡಲು ಬಂದರೆ ನಾವು ಸುಮ್ಮನಿರೋದಿಲ್ಲ. ನೀವು ಒಬ್ಬರ ಮೇಲೆ ಕೈ ಮಾಡಿದರೆ ನಾವು ನೂರ ಜನರ ಮೇಲೆ ಕೈ ಮಾಡುತ್ತೇವೆ. ನಿಮ್ಮಂತೆ ನಮ್ಮ ಕನ್ನಡಿಗರೂ ಮಹಾರಾಷ್ಟ್ರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಹಾಗಂತ ಅವರು ಮರಾಠಿ ಭಾಷೆಯನ್ನು ಮಾತನಾಡುವವರ ಮೇಲೆ ಕೈ ಮಾಡಿದ್ದರೆ ನಿಮಗೆ ಹೇಗೆ ಅನಿಸುತ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಗಂಟುಮೂಟೆ ಕಟ್ಟಿ ಮಹಾರಾಷ್ಟ್ರಕ್ಕೆ ಕಳುಹಿಸಬೇಕಾಗುತ್ತದೆ ಎಂದು ಕರವೇ ನಾರಾಯಣಗೌಡ ಮರಾಠಿಗರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+