ಕನ್ನಡಿಗ ಮೆಟ್ರೋ ಸಿಬ್ಬಂದಿ ಮೇಲೆ ದೌರ್ಜನ್ಯ, ಕ್ರಮಕ್ಕೆ ಒತ್ತಾಯ
ಬೆಳಗಾವಿ, ನವೆಂಬರ್ 23 : ಮೆಟ್ರೋ ರೈಲು ನಿಗಮದಲ್ಲಿ ಕನ್ನಡ ಸಿಬ್ಬಂದಿಯ ಮೇಲೆ ಹಿರಿಯ ಅಧಿಕಾರಿಗಳು ದೌರ್ಜನ್ಯ ಎಸಗಿರುವ ಸಂಬಂಧ ನಿಗಮದ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದರು.
ಮೆಟ್ರೋ ನಿಗಮದಲ್ಲಿ ಕನ್ನಡಿಗರಿಗೆ ಏಕೆ ಅವಕಾಶ ಇಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೇ ಅನ್ಯಾಯ ಆಗುತ್ತಿದೆ. ಮೆಟ್ರೋ ರೈಲು ನಿಗಮದಲ್ಲಿ ಎರವಲು ಸೇವೆ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಮೂವರು ಹಿರಿಯ ಅಧಿಕಾರಿಗಳಿಂದ ಕನ್ನಡ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಯುತ್ತಿದೆ, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಜೆಡಿಎಸ್ ಶಾಸಕ ಚೌಡರೆಡ್ಡಿಯವರು ಒತ್ತಾಯಿಸಿದ ಸಂದರ್ಭದಲ್ಲಿ ಜಾರ್ಜ್ ಅವರು ಪ್ರತಿಕ್ರಿಯೆ ನೀಡಿದರು.

ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರ ಬಳಿ ಮಾತನಾಡಿದ್ದೇನೆ, ಎರಡನೇ ಹಂತದ ಮೆಟ್ರೋ ಯೋಜನೆಗೆ ಸಿಬ್ಬಂದಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಸದ್ಯದಲ್ಲೇ ನಡೆಯುತ್ತದೆ. ಆಗ ಕನ್ನಡಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.. ಅವರಿಗೆ ತಾಂತ್ರಿಕ ವಾಗಿ ತರಬೇತಿ ನೀಡಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಜಾರ್ಜ್ ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಈಗಾಗಲೇ ಬಿಎಂಆರ್ಸಿಎಲ್ ಗೆ ಹಣ ಕಟ್ಟಲಾಗಿದೆ . ಸದ್ಯದಲ್ಲಿ ಭೋಗಿಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಬೋಗಿಗಳು ಹೆಚ್ಚಾದಾಗ ಮಹಿಳೆಯರಿಗೆ ಒಂದು ಭೋಗಿ ಮೀಸಲಿಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications