ಕೊನೆಯ ದಿನ ಕಾಗವಾಡದಲ್ಲಿ ಮೋದಿ ಭರ್ಜರಿ ಪ್ರಚಾರ
ಬೆಳಗಾವಿ, ಡಿಸೆಂಬರ್ 3: ಒಟ್ಟು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಕಾಗವಾಡದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪರ ಜ್ಯೂನಿಯರ್ ಮೋದಿ ಪ್ರಚಾರ ನಡೆಸಿದ್ದಾರೆ.
ಶ್ರೀಮಂತ್ ಪಾಟೀಲ್ ಅವರ ಪರವಾಗಿ ಜ್ಯೂನಿಯರ್ ಮೋದಿ ಎಂದೇ ಖ್ಯಾತರಾಗಿರುವ ಸದಾನಂದ ನಾಯಕ್ ಅವರು ಪ್ರಚಾರ ನಡೆಸಿದ್ದಾರೆ.

ಮೋದಿ..ಮೋದಿ..ಮೋದಿ..ಆ ಹೆಸರು ಅಂತಹ ಆಯಸ್ಕಾಂತೀಯ ಶಕ್ತಿ ಹೊಂದಿರೋ ಆ ಹೆಸರು ಇದೀಗ ರಾಜ್ಯದಲ್ಲಿಯ 15 ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯಲ್ಲಿ ಸದ್ದು ಮಾಡಿದೆ..ಜ್ಯೂನಿಯರ್ ಮೋದಿ ಎಂದೇ ಹೆಸರಾದ ಉಡುಪಿಯ ಅಡುಗೆ ಭಟ್ಟ ಸದಾನಂದ ನಾಯಕ್ ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರ ಸೇರಿದಂತೆ ಹಲವು ಕಡೆ ಸುತ್ತಾಡಿ ಮೋದಿ ಕ್ರೇಜ್ ಗೆ ಟಾನಿಕ್ ನೀಡಿದರು.
ಯುವಕರು ಮುಗಿಬಿದ್ದು ಸದಾನಂದ ನಾಯಕ ಅವರ ಸೆಲ್ಫಿ ಪಡೆದುಕೊಂಡು ಖುಷಿ ಪಟ್ಟರು.. ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications