ಪ್ರಸ್ತುತ ರಾಜಕೀಯ ವ್ಯವಸ್ಥೆಯಿಂದ ಜನರಿಗೆ ನಿರಾಸೆ

ಬೆಳಗಾವಿ, ಡಿಸೆಂಬರ್ 11 : ಎಲ್ಲರೂ ಈಗಿರುವ ರಾಜಕೀಯ ವ್ಯವಸ್ಥೆ ಬೇಸತ್ತು ಹೋಗಿದ್ದಾರೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನಗೆ ಕೈಜೋಡಿಸುತ್ತಿದ್ದಾರೆ ಎಂದು ನಟ ಉಪೇಂದ್ರ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ. ಕೇವಲ ಶೇ. 20 ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ. ಶೇ.80 ಜನರು ಸುಮ್ಮನಾಗಿದ್ದೇವೆ. ಅಕೌಂಟಬಿಲಿಟಿ ನಮಗೆ ಬೇಕಾಗಿದೆ. ನಮ್ಮ ಮೈಂಡ್ ಸೆಟ್ ಹೇಗಾಗಿದೆ ಎಂದರೆ ಹಣವಿದ್ದರೆ ಮಾತ್ರಾ ರಾಜಕಾರಣ ಅಂತಾ ಆಗಿ ಹೋಗಿದೆ. ಮೈಕ್ರೋ ಲೆವಲ್ ಪ್ಲಾನಿಂಗ್. ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ ಎಂದರು.

I will redefine Politics:Upendra

ಜನವರಿ ಅಂತ್ಯವರೆಗೂ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡುತ್ತೇವೆ. ನಾನು ನಮ್ಮಣ್ಣ ಸೇರಿ ಜಮೀನು ತೆಗೆದುಕೊಂಡಿದ್ದೇವೆ. ಕೃಷಿಗೆಂದು ತೆಗೆದುಕೊಂಡ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದೇವೆ.

ರೆಸಾರ್ಟ್ ಹಿಂದೆ ಈ ಕೃಷಿ ಭೂಮಿಯಿದೆ. ಕೆ.ಎಸ್.ಡಿಯಿಂದ ನೆರವು ಪಡೆದು ರೆಸಾರ್ಟ್ ಮಾಡಿದ್ದೇವೆ. ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ. ಹಿರೇಮಠ ಅವರು ಕೋರ್ಟ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಟ ಉಪೇಂದ್ರ ಅವರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಸಂದರ್ಭದಲ್ಲಿ ಮಿಲನ್ ಹೋಟೆಲ್ ನ ದ್ವಾರದ ಗಾಜು ಪುಡಿ ಪುಡಿಯಾದ ಘಟನೆಯೂ ಸಂಭವಿಸಿತು. ಗುಂಪನ್ನು ಚದುರಿಸಲು ಪೊಲೀಸರು ಹರ ಸಾಹಸ ಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+