ಅಲೋಕ್ ಕುಮಾರ್ ಜಾಗಕ್ಕೆ ಹೊಸ ಐಜಿಪಿ ನೇಮಕ

ಬೆಳಗಾವಿ, ಡಿಸೆಂಬರ್ 10 : ಉತ್ತರ ವಲಯ ಐಜಿಪಿಯಾಗಿ ಐಪಿಎಸ್ ಅಧಿಕಾರಿ ಎಚ್.ಎಸ್.ರೇವಣ್ಣ ಅವರನ್ನು ನೇಮಕ ಮಾಡಲಾಗಿದೆ. ಸುಮಾರು 6 ತಿಂಗಳಿನಿಂದ ಐಜಿಪಿ ಸ್ಥಾನ ತೆರವಾಗಿತ್ತು.

ಕರ್ನಾಟಕ ಸರ್ಕಾರ 2001ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎಚ್.ಎಸ್.ರೇವಣ್ಣ ಅವರನ್ನು ಉತ್ತರ ವಲಯ ಐಜಿಪಿಯಾಗಿ ನೇಮಕ ಮಾಡಿದೆ. ಅಲೋಕ್ ಕುಮಾರ್ ಅವರು ವರ್ಗಾವಣೆಯಾಗ ಬಳಿಕ ಐಜಿಪಿ ನೇಮಕವಾಗಿರಲಿಲ್ಲ.

ಉತ್ತರ ವಲಯ ಐಜಿಪಿ ಬಾಂಬೆ ಕರ್ನಾಟಕ ಭಾಗದ ಜಿಲ್ಲೆಗಳ ಪೊಲೀಸ್ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಎಲ್ಲಾ ಜಿಲ್ಲೆಗಳ ಎಸ್‌ಪಿಗಳು ಅವರಿಗೆ ವರದಿಗಳನ್ನು ನೀಡಲಿದ್ದಾರೆ.

HS Revanna posted as Northern Range IGP

ಉತ್ತರ ವಲಯ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿನ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಆದ್ದರಿಂದ, 6 ತಿಂಗಳಿನಿಂದ ಐಜಿಪಿ ಹುದ್ದೆ ಖಾಲಿಯಾಗಿತ್ತು.

ಉತ್ತರ ವಲಯ ಐಜಿಪಿಯಾಗಿ ಎಚ್.ಎಸ್.ರೇವಣ್ಣ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರಿಯಾಗಿದ್ದ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ಅವರು ರೇವಣ್ಣ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+