ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ವರುಣಾರ್ಭಟ: ಸಹಾಯವಾಣಿ ಆರಂಭ, ಮಾಹಿತಿ, ವಿವರ ಇಲ್ಲಿದೆ
ಬೆಳಗಾವಿ, ಜುಲೈ, 26: ಕಳೆದ 15 ದಿನಗಳಿಂದ ಸುರಿಯುತ್ತಿದ್ದ ಕುಂಭದ್ರೋಣ ಮಳೆ ಶುಕ್ರವಾರ ತಹಬದಿಗೆ ಬಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ಭರವಸೆ ಇದೆ. ಆದರೂ ಜಿಲ್ಲೆಯಲ್ಲಿ ಇದೀಗ ಪ್ರವಾಹದ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಮಸ್ಯೆ ಇದ್ದಲ್ಲಿ ಕರೆ ಮಾಡಬಹುದು ಎಂದು ಸಹಾಯವಾಣಿಯನ್ನು ಜಿಲ್ಲಾಡಳಿತ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರವಾಹದ ಭೀತಿ ಉಂಟಾಗಿದ್ದು, ಯಾವುದೇ ಸಮಸ್ಯೆ ಉಂಟಾದಲ್ಲಿ ತುರ್ತು ಸೇವೆಗಾಗಿ ಕೆಳಗಡೆ ನೀಡಿರುವ ಈ ಸಹಾಯವಾಣಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಹಾಯವಾಣಿಗಳ ವಿವರ ಇಲ್ಲಿದೆ
1. 0831 2407290 ಪ್ರವಾಹ ಸಹಾಯವಾಣಿ (Flood Helpline)
2. 112
3. 0831 2474054 ಪೊಲೀಸ್ ಸಹಾಯವಾಣಿ (Police Helpline)
ಮುಂಬೈ, ಪುಣೆ, ಲೋನಾವಳಾ, ರತ್ನಾಗಿರಿ, ಕೊಲ್ಹಾಪುರ, ಬೆಳಗಾವಿ ಸಾಕಿನಲ್ಲಿ ಕರ್ನಾಟಕದ ಕರಾವರಿ ಮತ್ತು ಪಶ್ಚಿಮಘಟ್ಟದ ಉದ್ದಕ್ಕೂ ಕೆಕ ತಾಸುಗಳಿಂದ ಮಖೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಮತ್ತೊಂದೆಡೆ ಮಳೆ ನಿಲ್ಲಲಿ ಎಂಬ ಜನತೆಯ ಪ್ರಾರ್ಥನೆಗೆ ಪ್ರಕೃತಿ ಕಿವಿಗೊಡುವ ಲಕ್ಷಣ ಮೂಡಿಸಿದೆ.
ಮಳೆಯ ಅಬ್ಬರದಿಂದ ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಸಾವು-ನೋವು ಹೆಚ್ಚುತ್ತಿದ್ದು, ಅಲ್ಲಿನ ನೀರು ಕರ್ನಾಟಕದ ನದಿ-ಹಳ್ಳ ಕೊಳ್ಳಗಳಲ್ಲಿ ಉಬ್ಬರಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಕಳೆದ 15 ನಿಮಿಷಗಳ ನಂತರ ತಹಬದಿಗೆ ಬಂದಿದೆ. ಆದರೆ, ಹವಾಮಾನ ಇಲಾಖೆ ಇನ್ನೂ ಎರಡು ದಿನ ಬಿರುಗಾಳು ಸಹಿತ ಭಾರೀ ಮಳೆ ಸುರಿಯುವ ಎಚ್ಚರಿಕೆ ನೀಡಿದೆ. ಆದ್ದರಿಂದ ಈ ಸಹಾಯವಾಣಿಗಳನ್ನು ನೀಡಲಾಗಿದೆ.
ಈಗಾಗಲೇ ಭಾರೀ ಮಳೆಯಿಂದ ಬಹುತೇಕ ಕಟ್ಟಡ ಮನೆಗಳಿಗೆ ಹಾನಿಯಾಗುವ, ಬೆಳೆಗಳಿಗೆ ಸವಳು ಹಿಡಿಯುವ ಆತಂಕ ಎದುರಾಗಿದೆ. ಜೊತೆಗೆ ತರಕಾರಿ ಬೆಲೆಯಂತೂ ವಿಪರೀತ ಗಗನಕ್ಕೇರಿದೆ. ಈ ಮಧ್ಯೆ ಜಿಲ್ಲಾಡಳಿತ ಜನರ ರಕ್ಷಣೆ ಹಾಗೂ ಯೋಗಕ್ಷೇಮ ಮಾಹಿತಿ ಪಡೆಯಲು ಹೆಲ್ಪಲೈನ್ ಪ್ರಾರಂಭಿಸಿದೆ. ಮತ್ತೊಂದೆಡೆ ಕನಿಷ್ಠ ಒಂದು ವಾರವಾದರೂ ಮಳೆ ನಿಲ್ಲಬೇಕು ಎನ್ನುವುದು ಜನತೆಯ ಪ್ರಾರ್ಥನೆಯಾಗಿದೆ.
ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದೆ ಭರಚುಕ್ಕಿ: ಕಾವೇರಿ ಹೊರಹರಿವು ಹೆಚ್ಚಾದಂತೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ರುದ್ರ ರಮಣೀಯ ದೃಶ್ಯ ಸೃಷ್ಟಿಯಾಗಿದ್ದು, ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದೆ.
ಕೊಳ್ಳೇಗಾಲದ ಭರಚುಕ್ಕಿ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಕಾವೇರಿ ಜಲ ವೈಯ್ಯಾರ ಸೃಷ್ಟಿಯಾಗಿದೆ.
ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಹೊರಹರಿವು ಹೆಚ್ಚಾದ ಹಿನ್ನೆಲೆ ಭರಚುಕ್ಕಿ ಜಲಪಾತವು ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಾಶಯಗಳಿಂದ ಹೊರಬಿದ್ದ ಹೆಚ್ಚುವರಿ ನೀರು ಕಾವೇರಿ ನದಿಯಲ್ಲಿ ಮೈದುಂಬಿ ಹರಿಯುತ್ತಿದ್ದು, ವೆಸ್ಲಿ ಸೇತುವೆಯ ಬಳಿ ಕಾವೇರಿಯ ವಿಹಂಗಮ ನೋಟ ಕಾಣಸಿಗುತ್ತಿದೆ.
ದೂಧ್ ಸಾಗರದ ಜಲಪಾತದ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆ: ಈಗಾಗಲೇ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಜಲಮೂಲಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಇನ್ನು ಫಾಲ್ಸ್‌ಗಳು ಕೂಡ ಧುಮ್ಮಿಕ್ಕುತ್ತಿದ್ದು, ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗೆಯೇ ಇದೀಗ ವಿಶ್ವವಿಖ್ಯಾತ ದೂದ್ ಸಾಗರದ ಜಲಪಾತ ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆಯಾಗಿದೆ.
100 ಅಡಿ ಅಗಲದ ದೂಧ್ ಸಾಗರ ಜಲಪಾತ ಬೆಳಗಾವಿ ವಾಸ್ಕೊ ಡ ಗಾಮಾ ರೈಲು ಮಾರ್ಗದ ಮಧ್ಯೆ ಇದ್ದು, ಬೆಳಗಾವಿಯಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಇದೀಗ ಭಾರೀ ಮಳೆ ಹಿನ್ನೆಲೆ ಮಹದಾಯಿ ನದಿ ನೀರು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಇದರ ನೀರೇ ಜಲಪಾತದ 1,017 ಅಡಿ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.
ಮಹದಾಯಿ ನದಿ ನೀರು ಸಾಗರದಂತೆ ಹರಿದುಬರುತ್ತಿರುವ ಹಿನ್ನೆಲೆ ದೂದ್ ಸಾಗರ ಜಲಪಾತದಲ್ಲಿ ಜಲವೈಭವ ಸೃಷ್ಟಿಯಾಗಿದ್ದು, ಇದು ಡ್ರೋನ್ ಕಣ್ಣಿಗೆ ಸೆರೆಯಾಗಿದೆ. ಇನ್ನು ಈ ಸ್ವರ್ಗದಂತಹ ಅದ್ಭುತ ದೃಶ್ಯ ಎಂಥವರನ್ನು ತನ್ನೆಡೆಗೆ ಸೆಳೆದೇ ಬಿಡುತ್ತದೆ. ಕ್ಯಾಸ್ಟಲ್ ರಾಕ್ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರ ಹೋದರೆ ಈ ಜಲಪಾತ ಸಿಗುತ್ತದೆ.












Click it and Unblock the Notifications