ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; 2ನೇ ಹಂತದಲ್ಲಿ ಶೇ 82.70ರಷ್ಟು ಮತದಾನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 28; ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಎರಡನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು ಶೇ ‌82.70ರಷ್ಟು ಮತದಾನವಾಗಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.

ಭಾನುವಾರ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.

ಬೆಳಗಾವಿ; ಅಭ್ಯರ್ಥಿಗಳ ಚಿಹ್ನೆ ಬದಲು, ಚುನಾವಣೆ ಮುಂದೂಡಿಕೆ ಬೆಳಗಾವಿ; ಅಭ್ಯರ್ಥಿಗಳ ಚಿಹ್ನೆ ಬದಲು, ಚುನಾವಣೆ ಮುಂದೂಡಿಕೆ

7 ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ 82.70ರಷ್ಟು ಮತದಾನವಾಗಿದೆ. ಎರಡು ಹಂತಗಳಲ್ಲಿ ಜಿಲ್ಲೆಯ ಒಟ್ಟು 477 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ ಏಳು ತಾಲೂಕುಗಳ 259 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆದಿತ್ತು.

ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!

Gram Panchayat Election 82.70 Per Cent Voting

ನಿಪ್ಪಾಣಿಯಲ್ಲಿ ಅಧಿಕ ಮತದಾನ: ಎರಡನೇ ಹಂತದಲ್ಲಿ 7 ತಾಲೂಕುಗಳ ಪೈಕಿ ನಿಪ್ಪಾಣಿಯಲ್ಲಿ ಅತೀ ಹೆಚ್ಚು ಅಂದರೆ ಶೇ 84.62ರಷ್ಟು ಮತದಾನವಾಗಿದೆ. ಕಾಗವಾಡದಲ್ಲಿ ಅತಿ ಕಡಿಮೆ‌ ಎಂದರೆ ಶೇ 80.95 ರಷ್ಟು ಮತದಾನವಾಗಿದೆ.

ಬೆಳಗಾವಿ ವಿಭಾಗದ ಮಾಹಿತಿ ಆಯುಕ್ತರ ವಜಾಕ್ಕೆ ಜೆ.ಎಮ್.ರಾಜಶೇಖರ ಆಗ್ರಹಬೆಳಗಾವಿ ವಿಭಾಗದ ಮಾಹಿತಿ ಆಯುಕ್ತರ ವಜಾಕ್ಕೆ ಜೆ.ಎಮ್.ರಾಜಶೇಖರ ಆಗ್ರಹ

ಚಿಕ್ಕೋಡಿ (ಶೇ 84.53), ರಾಯಬಾಗ (ಶೇ 82.52), ಅಥಣಿ (ಶೇ 81.32), ಕಾಗವಾಡ (ಶೇ 80.95), ನಿಪ್ಪಾಣಿ (ಶೇ 84.62), ರಾಮದುರ್ಗ (ಶೇ 81.33) ಮತ್ತು ಸವದತ್ತಿ (ಶೇ 82.60) ರಷ್ಟು ಮತದಾನವಾಗಿದೆ. 7 ತಾಲೂಕುಗಳಲ್ಲಿ ಒಟ್ಟು 11,59,813 ಮತದಾರರ ಪೈಕಿ 9,59,193 ಜನರು ಮತ ಚಲಾಯಿಸಿದ್ದಾರೆ.

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಚುರುಕಾಗಿತ್ತು. ಬೆಳಗ್ಗೆ 7 ರಿಂದ 9 ಗಂಟೆಯವರೆಗಿನ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.8.27 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 9 ರಿಂದ 11 ಗಂಟೆಯ ಅವಧಿಯಲ್ಲಿ ಒಟ್ಟಾರೆ ಶೇ.24 ರಷ್ಟಾಗಿದ್ದ ಮತದಾನ ಪ್ರಮಾಣವು ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.45.13 ಕ್ಕೆ ಏರಿಕೆಯಾಗಿತ್ತು.

ಬಿರುಸಿನಿಂದ ನಡೆದ ಮತದಾನವು ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.63.93 ರಷ್ಟಾಯಿತು. ಸಂಜೆ 5 ಗಂಟೆಗೆ ಮತದಾನ ಕೊನೆಗೊಂಡಾಗ ಏಳು ತಾಲೂಕುಗಳಲ್ಲಿ ಒಟ್ಟಾರೆ ಶೇ.82.70ರಷ್ಟು ಮತದಾನದ ಪ್ರಮಾಣ ದಾಖಲಾಯಿತು.

"ಡಿಸೆಂಬರ್ 30ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆಯಾ ತಾಲೂಕು ಕೇಂದ್ರಗಳಲ್ಲೇ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹೇಳಿದ್ದಾರೆ.

Recommended Video

Wistronಕಂಪನಿ ಕಾರ್ಮಿಕರ ದಾಂಧಲೆ ಪ್ರಕರಣ ಕುರಿತು ಸುದ್ದಿಘೋಷ್ಠಿ ನಡೆಸಿದ ಸಚಿವ Shivaram Hebbar |Oneindia Kannada

English summary
Gram panchayat election held for 7 taluk's of Belagavi district on December 27. Total 82.70 per cent voting recorded in 2nd phase. Election result will be announced on December 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X