ಪರಿವರ್ತನಾ ಯಾತ್ರೆ ವಾಹನಗಳನ್ನು ತಡೆದು ರೈತರ ಪ್ರತಿಭಟನೆ
ಗೋಕಾಕ,
ನವೆಂಬರ್, 18 : ರೈತರ ಸಂಪೂರ್ಣ ಸಾಲವನ್ನು ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಂಗನಕೇರಿ ಗ್ರಾಮದ ಹತ್ತಿರ ರೈತ ಸಂಘದಿಂದ ಶನಿವಾರ ಕೈಗೊಂಡಿದ್ದ ಪರಿವರ್ತನಾ ಯಾತ್ರೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. id="toptextpromo"> id='are-slot-1' class='oiad oi-axt oiadv'> id='top-searched-articles'>ರೈತ
ಸಂಘದ ನೂರಾರು ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ವೆಚ್ಚದ ಜತೆಗೆ ಶೇ.50ರಷ್ಟು ಲಾಭಾಂಶ ನೀಡುತ್ತೇವೆ ಎಂದು ಸುಳ್ಳು ಭರವಸೆ ಸರ್ಕಾರ ನೀಡಿದೆ, ಕಳಸಾ ಬಂಡೂರಿ ಯೋಜನೆ ಜಾರಿಗೆ ತಂದೇ ನಂತರ ಉತ್ತರ ಕರ್ನಾಟಕಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಅವರು ಹೇಳಿಕ್ಕೆ ನೀಡಿದ್ದು ಯಾವುದೇ ಒಂದು ಮಾತೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ ಹಾಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ರೈತ ಮುಖಂಡರು ತಿಳಿಸಿದರು. id='are-slot-2' class='oiad oi-axt oiadv'>












Click it and Unblock the Notifications