Actor Darshan Case: ಬೆಂಗಳೂರಿನಿಂದ 550 ಕಿಲೋ ಮೀಟರ್ ದೂರದಲ್ಲಿದ್ದೇವೆ: ಸತೀಶ್ ಜಾರಕೀಹೊಳಿ ಹೀಗೆ ಹೇಳಿದ್ಯಾಕೆ?
Actor Darshan Case: ರೇಣುಕಾಸ್ವಾಮಿ ಕೋಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಅವರನ್ನು ಬಂಧಿಲಾಗಿದ್ದು, ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಲಿದೆ. ಇನ್ನು ಈ ಬಗ್ಗೆ ಹಲವರ ಪ್ರತಿಕ್ರಿಯೆಗಳು ನಗೆಪಾಟಲಿಗೆ ಕಾರಣವಾದರೆ, ಇನ್ನು ಕೆಲವು ಹೇಳಿಕೆಗಳು ಅಚ್ಚರಿ ಮೂಡಿಸುವಂತಿವೆ. ಹಾಗೆಯೇ ಇದೀಗ ಸಚಿವ ಸತೀಶ್ ಜಾರಕಿಹೊಳಿಯವರು ನೀಡಿರುವ ಹೇಳಿಕೆಯೊಂದು ಭಾರೀ ನಗೆಪಾಟಲಿಗೆ ಕಾರಣವಾಗಿದೆ.

ದರ್ಶನ್ ಪ್ರಕರಣದ ಬಗ್ಗೆ ಏನು ಹೇಳುತ್ತೀರಾ ಎಂದು ಬೆಳಗಾವಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ನಾವು ಬೆಂಗಳೂರಿನಿಂದ 550 ಕಿಲೋ ಮೀಟರ್ ದೂರದಲ್ಲಿದ್ದೇವೆ. ಈ ಬಗ್ಗೆ ಏನು ಹೇಳಲಿ, ನಮಗೆ ಹೇಗೆ ಗೊತ್ತಾಗಬೇಕು. ಒಂದು ವೇಳೆಗೆ ಈ ಬಗ್ಗೆ ಬೆಂಗಳೂರಿನಲ್ಲಿರುವವರನ್ನೇ ಕೇಳಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಮೃತ ರೇಣುಕಾ ಸ್ವಾಮಿ ಮನೆಗೆ ಫಿಲ್ಮ್ ಚೇಂಬರ್ ತಂಡ ಭೇಟಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಕುಟುಂಬಕ್ಕೆ ಫಿಲಂ ಚೇಂಬರ್ ತಂಡ ಭೇಟಿ ನೀಡಿದೆ.
ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಮೃತನ ನಿವಾಸಕ್ಕೆ ಭೇಟಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಸುರೇಶ್ ಹಾಗೂ ತಂಡದವರು ಮೃತನ ಪೋಷಕರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.
ಇನ್ನು ಫಿಲ್ಮ್ ಚೇಂಬರ್ ಅಧ್ಯಕ್ಷರು ಹಾಗೂ ತಂಡದ ಮುಂದೆ ಮೃತನ ಪೋಷಕರು ಮಗನ ಸಾವಿನ ಬಗ್ಗೆ ಕಣ್ಣೀರು ಹಾಕಿದರು. ನನ್ನ ಮಗ ತಪ್ಪು ಮಾಡಿದ್ದರೆ ನಮಗೆ ತಿಳಿಸಬಹುದಿತ್ತು ಅಥವಾ ಪೊಲೀಸ್ ಕಂಪ್ಲೇಂಟ್ ಮಾಡಬಹುದಿತ್ತು. ಆದರೆ ಕೊಲೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಪೋಷಕರು ಕಣ್ಣೀರಿಟ್ಟರು. ಈ ವೇಳೆ ಮೃತನ ಪೋಷಕರು ಹಾಗೂ ಪತ್ನಿಗೆ ತಲಾ ಎರಡೂವರೆ ಲಕ್ಷ ರೂಪಾಯಿ ಧನಸಹಾಯ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಲನ ಚಿತ್ರ ರಂಗದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ಎನ್. ಸುರೇಶ್ ನಡೆದಿರುವ ಘಟನೆಗೆ ಕ್ಷಮಾಪಣೆ ಕೇಳಿದರು. ಸಿನಿಮಾ ಇಂಡಸ್ಟ್ರಿಯಿಂದ ದರ್ಶನ್ ಬ್ಯಾನ್ ಮಾಡುವ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ನಿರ್ಮಾಪಕರ ಬಳಿ ಚರ್ಚೆ ಮಾಡಬೇಕು. ಪೊಲೀಸರು ಹಾಕುವ ಚಾರ್ಚ್ ಶೀಟ್ ನೋಡಿ ನಿರ್ಧಾರ ಮಾಡಬೇಕು ಎಂದರು.
ನಾವು ಇಂದು ಚಲನ ಚಿತ್ರ ರಂಗವನ್ನು ಉಳಿಸಬೇಕಿದೆ. ಯಾರೊಬ್ಬರಿಗೋ ನಾವು ತಗ್ಗುವುದಿಲ್ಲ. ಕನ್ನಡ ಚಲನಚಿತ್ರರಂಗ ಇಂದು ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಬೇಕಿದೆ ಎಂದರು.












Click it and Unblock the Notifications