ನಾನು ಡಿ.ಕೆ.ಶಿವಕುಮಾರ್ ಒಗ್ಗಟ್ಟಾಗಿದ್ದೀವಿ: ಸತೀಶ್ ಜಾರಕಿಹೊಳಿ
Recommended Video
ಬೆಳಗಾವಿ, ಮೇ 03: ಡಿ.ಕೆ.ಶಿವಕುಮಾರ್ ಹಾಗೂ ನಾನು ಒಂದೇ ಪಕ್ಷದಲ್ಲಿದ್ದೀವಿ, ನಾವು ಒಗ್ಗಟ್ಟಾಗಿದ್ದೀವಿ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಯಾವುದೇ ವೈಷಮ್ಯ ಇಲ್ಲವೆಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಉತ್ತರ ಕರ್ನಾಟಕ ಭಾಗದ ಉಸ್ತುವಾರಿ ವಹಿಸಿಕೊಳ್ಳಬಾರದು ಎಂದು ನಾನು ಎಲ್ಲೂ ಹೇಳಿಲ್ಲ, ಹಾಗೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ಈ ಹಿಂದೆಯೂ ಉತ್ತರ ಕರ್ನಾಟಕದಲ್ಲಿ ಹಲವು ಬಾರಿ ಉಸ್ತುವಾರಿ ವಹಿಸಿದ್ದರು, ನಾವು ಅವರ ನೇತೃತ್ವದಲ್ಲಿ ಕೆಲಸ ಮಾಡಿದ್ದೆವು, ಈಗ ಕುಂದಗೋಳ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ, ಅವರ ನೇತೃತ್ವದಲ್ಲಿ ನಾವು ಕೆಲಸ ಮಾಡಲಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ದಕ್ಷಿಣ ಕರ್ನಾಟಕ ಭಾಗದವರಿಗೆ ಉಸ್ತುವಾರಿ ಕೊಟ್ಟಿದ್ದಾರೆ ಅನ್ನುವುದೆಲ್ಲ ಸರಿಯಲ್ಲ. ಯಾರಿಗೆ ಅನುಭವ, ಸಾಮರ್ಥ್ಯ ಇದೆ ಅವರಿಗೆ ನೇತೃತ್ವ ಕೊಟ್ಟಿದ್ದಾರೆ. ಅವರ ಕೈ ಕೆಳಗೆ ನಾವು ಕೆಲಸ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಒಂದೇ ವೇದಿಕೆಯಲ್ಲಿದ್ದರು ಪರಸ್ಪರ ಮಾತನಾಡದ ಬಗ್ಗೆ ಪ್ರಶ್ನಿಸಿದಾಗ, ನಾವು ಮಾತನಾಡಿದ್ದೇವೆ, ಏನು ಅವರ ಮೇಲೆ ಬೀಳಬೇಕಿತ್ತಾ, ನಮ್ಮ ಸಂಬಂಧ ಉತ್ತಮವಾಗಿಯೇ ಇದೆ, ಪ್ರೀತಿ, ವಿಶ್ವಾಸದಿಂದ ಇದ್ದೇವೆ ಎಂದು ಸತೀಶ್ ಅವರು ಹೇಳಿದರು.











Click it and Unblock the Notifications