• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಾ, RR ನಗರ ಉಪಚುನಾವಣೆ: ಅಭ್ಯರ್ಥಿ ಆಯ್ಕೆ ಕುರಿತು ಡಿಕೆಶಿ ಹೇಳಿಕೆ

|

ಬೆಳಗಾವಿ, ಅಕ್ಟೋಬರ್ 3: ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅಭ್ಯರ್ಥಿ ಆಯ್ಕೆಯ ಕುರಿತು ನಾನು ತೀರ್ಮಾನ ಮಾಡುವುದಿಲ್ಲ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರೇ ಎಲ್ಲರ ಜೊತೆ ಸಭೆ ಮಾಡಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡುತ್ತಾರೆ. ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರು ಕುಳಿತು ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಉಪ ಚುನಾವಣೆ: ಡಿಕೆಶಿ ಗೇಮ್ ಪ್ಲಾನ್ ಬದಲಿಸಿದ ಡಿ.ಕೆ. ರವಿ ತಾಯಿ!

ಆರ್.ಆರ್.ನಗರ ಕ್ಷೇತ್ರದಲ್ಲಿ ದಿ.ಡಿ.ಕೆ.ರವಿ ಪತ್ನಿ ಕುಸುಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹಲವರು ಶಿಫಾರಸು ಮಾಡಿದ್ದಾರೆ. ಪಕ್ಷದಲ್ಲೇ ಏಳೆಂಟು ಜನ ಆಕಾಂಕ್ಷಿಗಳು ಇದ್ದಾರೆ. ಬಾಲಕೃಷ್ಣ, ಎಂ.ಶ್ರೀನಿವಾಸ ಬಾಬು ಇದ್ದಾರೆ. ನಮ್ಮ ಡಿಸಿಸಿ ಪ್ರೆಸಿಡೆಂಟ್ ಸೇರಿ ಹಲವರು ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಪಾರ್ಟಿಗೆ ಯಾರು ಬೇಕಾದರೂ ಅರ್ಜಿ ಕೊಡಬಹುದು. ಅರ್ಜಿಗಳೆಲ್ಲವೂ ಬರಲಿ, ಆಮೇಲೆ ಕುಳಿತುಕೊಂಡು ಮಾತನಾಡೋಣ. ಶಿರಾ ಕ್ಷೇತ್ರದ ನಮ್ಮ ನಾಯಕರು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದಾರೆ. ಅವರು ಕಳಿಸಿದ ಅಭ್ಯರ್ಥಿಯನ್ನು ದೆಹಲಿಗೆ ಶಿಫಾರಸು ಮಾಡುತ್ತೇವೆ ಎಂದರು.

ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡ ಅನುಶ್ರೀ ಸೇರಿ ಇತರರ ಜೊತೆ ಕೆಲವು ಪ್ರಭಾವಿಗಳ ನಂಟಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ನಶೆ, ಪಶೆ ಎಲ್ಲ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಕೇವಲ ಮಾಧ್ಯಮಗಳಲ್ಲಿ ನಟಿಯರ ಹೆಸರು ಬರುತ್ತಿದೆ ಎಂದು ಹೇಳಿದರು.

English summary
KPCC President DK Shivakumar responded to the selection of Congress candidate for the Sira and RR Nagar constituencies for by elections,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X